ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಮಾಜಿ ಸಿಎಂ ಬನ್ಸಿಲಾಲ್ ಸೊಸೆ ಕಿರಣ್ ಚೌಧರಿ - Congress leaders join BJP - CONGRESS LEADERS JOIN BJP

ಹರಿಯಾಣದ ಕಾಂಗ್ರೆಸ್​ ನಾಯಕಿ ಕಿರಣ್ ಚೌಧರಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕಿರಣ್ ಚೌಧರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ
ಕಿರಣ್ ಚೌಧರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ (IANS)

By PTI

Published : Jun 19, 2024, 2:28 PM IST

ನವದೆಹಲಿ: ಹರಿಯಾಣದ ಮಾಜಿ ಕಾಂಗ್ರೆಸ್ ನಾಯಕಿ ಕಿರಣ್ ಚೌಧರಿ ಮತ್ತು ಅವರ ಮಗಳು ಶ್ರುತಿ ಚೌಧರಿ ತಮ್ಮ ಬೆಂಬಲಿಗರೊಂದಿಗೆ ಬುಧವಾರ ಬಿಜೆಪಿಗೆ ಸೇರಿದರು. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಮುಖ ನಾಯಕಿಯೊಬ್ಬರು ಪಕ್ಷ ತೊರೆದಿರುವುದು ಕಾಂಗ್ರೆಸ್​ಗೆ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿದೆ.

ಪಕ್ಷದ ರಾಜ್ಯ ಘಟಕವನ್ನು ವೈಯಕ್ತಿಕ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ವಿರುದ್ಧ ಆರೋಪಿಸಿರುವ ಕಿರಣ್ ಚೌಧರಿ ಮತ್ತು ಶ್ರುತಿ ಚೌಧರಿ ಇಬ್ಬರೂ ಮಂಗಳವಾರ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಕಿರಣ್ ಚೌಧರಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಬನ್ಸಿ ಲಾಲ್ ಅವರ ಸೊಸೆ ಮತ್ತು ಪ್ರಸ್ತುತ ಅವರು ಭಿವಾನಿ ಜಿಲ್ಲೆಯ ತೋಶಮ್​ನ ಹಾಲಿ ಶಾಸಕಿಯಾಗಿದ್ದಾರೆ. ಶ್ರುತಿ ಚೌಧರಿ ಅವರು ಹರಿಯಾಣ ಕಾಂಗ್ರೆಸ್ ಘಟಕದ ಕಾರ್ಯಕಾರಿ ಅಧ್ಯಕ್ಷೆಯಾಗಿದ್ದರು.

ಪಕ್ಷಕ್ಕೆ ಸೇರಿದ ನಂತರ ಬಿಜೆಪಿ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಿರಣ್ ಚೌಧರಿ, "ಈಗ ನಾನೂ ಕೇಸರಿಮಯವಾಗಿದ್ದೇನೆ. ಆದರೆ ಚೌಧರಿ ಬನ್ಸಿ ಲಾಲ್ ಅವರ ಬಣ್ಣವೂ ಇದೇ ಆಗಿತ್ತು ಎಂಬುದು ನೆನಪಿರಲಿ." ಎಂದು ಹೇಳಿದರು.

"ನಾವು 20 ವರ್ಷಗಳ ಹಿಂದೆ ಹರಿಯಾಣ ವಿಕಾಸ್ ಪಕ್ಷವನ್ನು ಕಾಂಗ್ರೆಸ್​ನಲ್ಲಿ ವಿಲೀನಗೊಳಿಸಿದ್ದೆವು. ಆದರೆ, ಇಂದು ಕಾಂಗ್ರೆಸ್ ಧ್ವಜವನ್ನು ಬಿಟ್ಟು ಬಿಜೆಪಿಯ ಧ್ವಜ ಹಿಡಿಯುವಂತೆ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿಯ ಪ್ರಚಂಡ ವಿಜಯವನ್ನು ಖಚಿತಪಡಿಸಿಕೊಳ್ಳಲು ಕೊನೆಯ ಕ್ಷಣದವರೆಗೂ ಹೋರಾಡುವಂತೆ ನಾನು ನಿಮಗೆ ಕರೆ ನೀಡುತ್ತೇನೆ" ಎಂದು ಅವರು ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಸೇರಿದ್ದ ತಮ್ಮ ಸಾವಿರಾರು ಬೆಂಬಲಿಗರಿಗೆ ಕರೆ ನೀಡಿದರು.

"ಇಂದಿನಿಂದ ನಮ್ಮ ಕೆಲಸ ಪ್ರಾರಂಭವಾಗಿದೆ. ಚೌಧರಿ ಬನ್ಸಿ ಲಾಲ್ ಅವರ ಹೆಸರನ್ನು ಸ್ಮರಿಸಿಕೊಂಡು ಬಿಜೆಪಿಯ ನೀತಿಗಳನ್ನು ಪ್ರಚಾರ ಮಾಡಲು ಆರಂಭಿಸಿ. ಬಿಜೆಪಿಯ ಉನ್ನತ ನಾಯಕತ್ವವನ್ನು ಶ್ಲಾಘಿಸಿ, ಹರಿಯಾಣದ ಮೂಲೆ ಮೂಲೆಗೆ ಭೇಟಿ ನೀಡಿ. ಇದು ಚೌಧರಿ ಬನ್ಸಿ ಲಾಲ್ ಮತ್ತು ಚೌಧರಿ ಸುರೇಂದ್ರ ಸಿಂಗ್ ಅವರಿಗೆ ನಾವು ನೀಡಬಹುದಾದ ನಿಜವಾದ ಗೌರವವಾಗಿದೆ" ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಇಬ್ಬರೂ ಬಿಜೆಪಿಗೆ ಸೇರಿದರು.

ಇದನ್ನೂ ಓದಿ : ಅಂದಾಜಿಸಿದಂತೆ ಬಾರದ ಮಾನ್ಸೂನ್​​: ದೇಶದಲ್ಲಿ ಶೇ 20 ರಷ್ಟು ಮಳೆ ಕೊರತೆ: IMD ಮಹತ್ವದ ಮಾಹಿತಿ - RECEIVED 20PERCENT LESS RAINFALL

ABOUT THE AUTHOR

...view details