ಕರ್ನಾಟಕ

karnataka

ETV Bharat / bharat

ದೆಹಲಿ: ಮಹಿಳಾ ಸಮ್ಮಾನ್​ ಯೋಜನೆ ತನಿಖೆಗೆ ಎಲ್​ಜಿ ಆದೇಶ, ಬಿಜೆಪಿಗೆ ಸೋಲಿನ ಭಯ ಎಂದ ಎಎಪಿ - MAHILA SAMMAN YOJANA

ಮಹಿಳಾ ಸಮ್ಮಾನ್​ ಯೋಜನೆ ಹೆಸರಿನಲ್ಲಿ ಮಹಿಳೆಯರ ಖಾಸಗಿ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂಬ ಆರೋಪದ ಮೇಲೆ ದೆಹಲಿ ಲೆಫ್ಟಿನೆಂಟ್​ ಗವರ್ನರ್​ ತನಿಖೆಗೆ ಆದೇಶಿಸಿದ್ದಾರೆ.

kejriwal-rubbishes-lg-inquiry-in-mahila-samman-yojana-says-bjp-afraid-of-defeat
ಅರವಿಂದ್​ ಕೇಜ್ರಿವಾಲ್​ (ಎಎನ್​ಐ)

By PTI

Published : Dec 28, 2024, 6:00 PM IST

ನವದೆಹಲಿ:ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2,100 ರೂ. ನೀಡುವುದಾಗಿ ಎಎಪಿ ಘೋಷಣೆ ಮಾಡಿದ ಬಳಿಕ ಬಿಜೆಪಿ ಆತಂಕಕ್ಕೆ ಒಳಗಾಗಿದ್ದು, ಸೋಲುವ ಭೀತಿಯಿಂದ ಇದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ಎಎಪಿ ನಾಯಕ ಅರವಿಂದ್​ ಕೇಜ್ರಿವಾಲ್​ ತಿಳಿಸಿದ್ದಾರೆ.

ಮಹಿಳೆಯರಿಗೆ ಮಾಸಿಕ ಹಣ ನೀಡುವುದಾಗಿ ಚುನಾವಣಾ ಪೂರ್ವವಾಗಿ ಎಎಪಿ ಘೋಷಿಸಿರುವ ಮಹಿಳಾ ಸಮ್ಮಾನ್​ ಯೋಜನೆ ನಕಲಿಯಾಗಿದ್ದು, ಈ ಯೋಜನೆ ಮೂಲಕ ಮಹಿಳೆಯರ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ತನಿಖೆಗೆ ಅನುಮತಿ ನೀಡಿರುವ ಲೆಫ್ಟಿನೆಂಟ್​ ಗವರ್ನರ್​ ಆದೇಶದಲ್ಲಿ ಹುರುಳಿಲ್ಲ ಎಂದು ಟೀಕಿಸಿದರು.

ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ದೆಹಲಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಮಹಿಳಾ ಸಮ್ಮಾನ್​ ಯೋಜನೆ ಅಡಿಯಲ್ಲಿ ದೆಹಲಿಯಲ್ಲಿನ ಎಲ್ಲಾ ಅರ್ಹ ಮಹಿಳೆಯರಿಗೆ 2,100 ರೂ. ಹಣ ನೀಡುವುದಾಗಿ ಘೋಷಿಸಿದ್ದೇವೆ. ಸಂಜೀವಿನಿ ಯೋಜನೆ ಅಡಿಯಲ್ಲೂ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದೇವೆ. ಅವರು ಏನನ್ನು ತನಿಖೆ ಮಾಡುತ್ತಾರೆ ಎಂದು ಕೇಳಿದರು.

ಫೆಬ್ರವರಿಯಲ್ಲಿ ಎದುರಾಗಲಿರುವ ಚುನಾವಣೆಯಲ್ಲಿ ಈ ಯೋಜನೆಗಳ ಮೂಲಕ ಬಿಜೆಪಿ ಸೋಲು ಸಾಧ್ಯತೆ ಇದೆ. ಈ ಹಿನ್ನಲೆ ಇದನ್ನು ನಿಲ್ಲಿಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

ತನಿಖೆಗೆ ಲೆಫ್ಟಿನೆಂಟ್​ ಗವರ್ನರ್​ ಆದೇಶ:ಮಹಿಳಾ ಸಮ್ಮಾನ್​ ಯೋಜನೆ ಹೆಸರಿನಲ್ಲಿ ಮಹಿಳೆಯರ ಖಾಸಗಿ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂಬ ಆರೋಪದ ಮೇಲೆ ದೆಹಲಿ ಲೆಫ್ಟಿನೆಂಟ್​ ಗವರ್ನರ್​ ತನಿಖೆಗೆ ಆದೇಶಿಸಿದ್ದಾರೆ.

ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಚುನಾವಣೆಗೆ ಮುನ್ನ ಈ ರೀತಿ ಪ್ರಚಾರ ನಡೆಸಲಾಗುತ್ತಿದೆ ಎಂಬ ವಿಚಾರವನ್ನು ಭಾರತೀಯ ಚುನಾವಣಾ ಆಯೋಗ ಮತ್ತು ಚುನಾವಣಾಧಿಕಾರಿಗಳ ಮುಂದೆ ತರಬೇಕು.

ದೆಹಲಿ ಕಾಂಗ್ರೆಸ್​ ನಾಯಕ ಸಂದೀಪ್​ ದೀಕ್ಷಿತ್ ರಾಜ್​ ನಿವಾಸ್​ನಲ್ಲಿ ಇತ್ತೀಚೆಗೆ ಎಲ್​ಜಿ ವಿಕೆ ಸಕ್ಸೆನಾ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಎಲ್​ಜಿ ವಿಕೆ ಸಕ್ಸೆನಾ ಈ ಆದೇಶ ನೀಡಿದ್ದಾರೆ.

ಸಹಿ ಸಂಗ್ರಹಿಸುತ್ತಿರುವ ಎಎಪಿ ಕಾರ್ಯಕರ್ತರು:ಫೆಬ್ರವರಿಯಲ್ಲಿ ನಡೆಯುವ ದೆಹಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿದರೆ, ಮಹಿಳಾ ಸಮ್ಮಾನ್​ ಯೋಜನೆ ಮೂಲಕ ಮಾಸಿಕ 2,100 ರೂ. ಹಣವನ್ನು ಅರ್ಹ ಮಹಿಳೆಯರಿಗೆ ನೀಡಲಾಗುವುದು ಎಂದು ಎಎಪಿ ಚುನಾವಣಾ ಪೂರ್ವವಾಗಿ ಘೋಷಿಸಿದೆ.

ಇದಕ್ಕಾಗಿ ಎಎಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ, ಮಹಿಳೆಯರನ್ನು ಭೇಟಿಯಾಗಿ ಅವರಿಂದ ಅರ್ಜಿಗೆ ಸಹಿ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ: ಬಿಆರ್​ಎಸ್​ ನಾಯಕ ಕೆಟಿಆರ್​ಗೆ ಇಡಿ ಸಮನ್ಸ್

ABOUT THE AUTHOR

...view details