ಕರ್ನಾಟಕ

karnataka

ETV Bharat / bharat

ಕಾಶ್ಮೀರಿ ಪತ್ರಕರ್ತೆಗೆ ಏರ್​ಪೋರ್ಟ್​ನಲ್ಲಿ ಕಹಿ ಅನುಭವ: ಸ್ಪಷ್ಟನೆ ನೀಡಿದ ದೆಹಲಿ ಕಸ್ಟಮ್ಸ್​ - ಏರ್​ಪೋರ್ಟ್​ನಲ್ಲಿ ಕಹಿ ಅನುಭವ

Kashmiri journalist accuses Delhi airport: ಪಾಕಿಸ್ತಾನಕ್ಕೆ ಕೌಂಟರ್​ ಕೊಟ್ಟಿದ್ದ ಪತ್ರಕರ್ತೆ ಯಾನಾ ಮಿರ್​ ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕಹಿ ಅನುಭವವಾಗಿದ್ದು, ಅದಕ್ಕೆ ದೆಹಲಿ ಕಸ್ಟಮ್ಸ್​ ಇಲಾಖೆ ಸ್ಪಷ್ಟನೆ ನೀಡಿದೆ.

kashmiri journalist yana meer  yana meer in delhi airport  ದೆಹಲಿ ಕಸ್ಟಮ್ಸ್​ ಏರ್​ಪೋರ್ಟ್​ನಲ್ಲಿ ಕಹಿ ಅನುಭವ  ಪತ್ರಕರ್ತೆ ಯಾನಾ ಮಿರ್
ಸ್ಪಷ್ಟನೆ ನೀಡಿದ ದೆಹಲಿ ಕಸ್ಟಮ್ಸ್​

By ETV Bharat Karnataka Team

Published : Feb 27, 2024, 2:27 PM IST

ನವದೆಹಲಿ:ಕಾಶ್ಮೀರಿ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಪತ್ರಕರ್ತೆ ಯಾನಾ ಮಿರ್ ಅವರ ಆರೋಪಕ್ಕೆ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ವಿವರಣೆ ನೀಡಿದೆ. ಯಾನಾ ಮಿರ್ ಅವರು ತಪಾಸಣೆಗೆ ಸಹಕರಿಸಲಿಲ್ಲ ಎಂದು ಕಸ್ಟಮ್ಸ್​ ಅಧಿಕಾರಿಗಳು ವಿಡಿಯೋ ಸಮೇತ ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಮಲಾಲಾ ಯೂಸುಫ್ ಜಾಯ್ ಕುರಿತು ಕಾಮೆಂಟ್ ಮಾಡುವ ಮೂಲಕ ಗಮನ ಸೆಳೆದಿದ್ದ ಕಾಶ್ಮೀರಿ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಪತ್ರಕರ್ತೆ ಯಾನಾ ಮಿರ್‌ಗೆ ಕಹಿ ಅನುಭವವಾಗಿದೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಸಿಬ್ಬಂದಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಯಾನಾ ಮಿರ್ ಮಾಡಿರುವ ಆರೋಪಕ್ಕೆ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ಪ್ರತಿಕ್ರಿಯಿಸಿದೆ. ಭದ್ರತಾ ತಪಾಸಣೆಗೆ ಯಾನಾ ಅವರು ಸಹಕರಿಸಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನೂ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಲಂಡನ್‌ನ ಸಂಕಲ್ಪ್ ದಿವಸ್‌ನಲ್ಲಿ ಯಾನಾ ಮೀರ್ ಡೈವರ್ಸಿಟಿ ಅಂಬಾಸಿಡರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಆ ಸಂದರ್ಭದಲ್ಲಿ ಅವರು ಕಾಶ್ಮೀರದ ಭದ್ರತೆ ಕುರಿತು ಬ್ರಿಟಿಷ್ ಸಂಸತ್ತಿನಲ್ಲಿ ಭಾಷಣ ಮಾಡಿ ಭಾರತೀಯರ ಮನ ಮುಟ್ಟಿದ್ದರು. ಇತ್ತೀಚೆಗಷ್ಟೇ ಅವರು ಭಾರತಕ್ಕೆ ಮರಳಿದ್ದರು. ಈ ವೇಳೆ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರು ಮತ್ತು ಸ್ಮಗ್ಲರ್​ನಂತೆ ನೋಡಿದರು ಎಂದು Xನಲ್ಲಿ ಬರೆದುಕೊಂಡಿದ್ದರು.

ನನ್ನ ಬಳಿ ಶಾಪಿಂಗ್ ಬ್ಯಾಗ್‌ಗಳಿವೆ, ಅದನ್ನು ಇಂಗ್ಲೆಂಡ್‌ನಲ್ಲಿರುವ ತನ್ನ ಸಂಬಂಧಿಕರು ನೀಡಿದ್ದರು. ಆದ ಕಾರಣ ತನ್ನ ಬಳಿ ರಸೀದಿ ಇಲ್ಲ ಎಂದರು. ವಿಮಾನ ನಿಲ್ದಾಣದ ಸಿಬ್ಬಂದಿ ತಮ್ಮ ಮಾತನ್ನು ಕೇಳದೆ ತಮ್ಮ ಎಲ್ಲಾ ಲಗೇಜುಗಳನ್ನು ತೆರೆದು ಚೆಕ್​ ಮಾಡಿದರು ಎಂದು ಯಾನಾ ಆರೋಪಿಸಿದ್ದಾರೆ. ಆದರೆ ಯಾನಾ ಮಿರ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರೊಂದಿಗೆ ಹಲವು ನೆಟಿಜನ್‌ಗಳು ವಿಮಾನ ನಿಲ್ದಾಣದ ಅಧಿಕಾರಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾನಾ ಮಿರ್ ಆರೋಪಕ್ಕೆ ದೆಹಲಿ ವಿಮಾನ ನಿಲ್ದಾಣ ಕಸ್ಟಮ್ಸ್ ಇಲಾಖೆ ವಿವರಣೆ ನೀಡಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬ್ಯಾಗೇಜ್ ತಪಾಸಣೆ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಕಸ್ಟಮ್ಸ್​ ಹೇಳಿದೆ. ಇದೆಲ್ಲವೂ ನಿಯಮಾನುಸಾರ ನಡೆಯಲಿದೆ. ಯಾನಾ ಮಿರ್ ಅವರು ಬ್ಯಾಗ್ ಸ್ಕ್ಯಾನಿಂಗ್ ಮಾಡಲು ಸಹಕರಿಸಲಿಲ್ಲ. ಈ ವೇಳೆ ಸಿಬ್ಬಂದಿ ಅವರ ಬ್ಯಾಗ್ ಅನ್ನು ಸ್ಕ್ಯಾನಿಂಗ್ ಮಷಿನ್​ನಲ್ಲಿ ಹಾಕಿದ್ದಾರೆ. ಸಿಬ್ಬಂದಿ ಆಕೆಯೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದಾರೆ ಅಂತಾ ದೆಹಲಿ ಕಸ್ಟಮ್ಸ್​ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಓದಿ:ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ

ABOUT THE AUTHOR

...view details