ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ಹೆಪ್ಪುಗಟ್ಟುತ್ತಿರುವ ನೀರು: ತೀವ್ರ ಚಳಿಯ ಚಿಲೈ ಕಲಾನ್​​ ಆರಂಭ - SRINAGAR FREEZES AT MINUS

ಕಾಶ್ಮೀರದಲ್ಲಿ ಶುಕ್ರವಾರ ಮೈನಸ್​ 8.5 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗುತ್ತಿದ್ದು, 1974ರ ಬಳಿಕ ಅತ್ಯಂತ ಚಳಿಯ ರಾತ್ರಿ ಇದಾಗಿದೆ.

kashmir-weather-update-srinagar-freezes-coldest-night-chillai-kalan-begins-dal-lake-frozen
ಕಾಶ್ಮೀರದಲ್ಲಿ ತೀವ್ರ ಚಳಿಗೆ ಘನೀಕರಿಸುತ್ತಿರುವ ನೀರು (ETV Bharat)

By ETV Bharat Karnataka Team

Published : 8 hours ago

Updated : 7 hours ago

ಶ್ರೀನಗರ: ಕಣಿವೆ ರಾಜ್ಯದಲ್ಲಿ ಮೈನಸ್​ ಡಿಗ್ರಿ ತಾಪಮಾನ ಮುಂದುವರೆದಿದ್ದು, ಚಿಲೈ ಕಲಾನ್​​ ​ ಋತು ಆರಂಭಕ್ಕೆ ಸಜ್ಜಾಗಿದೆ. ಡೆಡ್​ ವಿಂಟರ್​​ ಎಂದು ಕರೆಯಲಾಗುವ ಈ ಕಾಲವೂ ಮೈ ನಡುಗುವ ಚಳಿ ಬಳಿಕ ಕಾಶ್ಮೀರದಲ್ಲಿ ಆರಂಭವಾಗುತ್ತದೆ. ಕಳೆದೆರಡು ದಿನಗಳಿಂದ ಕಾಶ್ಮೀರದಲ್ಲಿ -8.5 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗುತ್ತಿದ್ದು, 1974ರ ಬಳಿಕ ಅತ್ಯಂತ ಚಳಿಯ ರಾತ್ರಿ ಇದಾಗಿದೆ.

ಕಾಶ್ಮೀರದಲ್ಲಿ ಭಾರೀ ಚಳಿಗೆ ಈಗಾಗಲೇ ನೀರು ಘನೀಕರಿಸುತ್ತಿದ್ದು, ಮೂರು ಜಿಲ್ಲೆಗಳಲ್ಲಿ ಮೈನಸ್​ 10 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಅನಂತ್​ನಾಗ್​ನಲ್ಲಿ -10.5, ಶೋಫಿಯಾನದಲ್ಲಿ -10.4 ಮತ್ತು ಪುಲ್ವಾಮಾದಲ್ಲಿ -10.3 ಡಿಗ್ರಿ ಸೆಲ್ಸಿಯಸ್​​ ದಾಖಲಾಗಿದೆ.

1891ರ ಬಳಿಕ ಡಿಸೆಂಬರ್​ನಲ್ಲಿ ಮೂರನೇ ಅತ್ಯಂತ ಚಳಿ ದಿನ ಶುಕ್ರವಾರ ರಾತ್ರಿ ದಾಖಲಾಗಿದೆ. ಚಳಿಗಾಲದಲ್ಲಿ ಇಲ್ಲಿನ ದಾಖಲೆ ತಾಪಮಾನವೂ 1934ರ ಡಿಸೆಂಬರ್​ 13 ರಂದು -12.8ಡಿಗ್ರಿ ಸೆಲ್ಸಿಯಸ್​ ದಾಖಲಾಗಿತ್ತು.

ಚಿಲ್ಲೈ ಕಾಲನ್​ ಆರಂಭ: ಕಾಶ್ಮೀರದಲ್ಲಿ ತೀವ್ರ ಚಳಿ ಅವಧಿಯನ್ನು ಚಿಲ್ಲೈ ಕಾಲನ್​ ಎಂದು ಗುರುತಿಸಲಾಗಿದ್ದು, ಡಿಸೆಂಬರ್​ 21 ರಿಂದ ಜನವರಿ 31ರವರೆಗೆ ಈ ಋತುಮಾನ ಇರುತ್ತದೆ. ಇದಾದ ಬಳಿಕ ಮುಂದಿನ 20 ದಿನ ಅಂದರೆ ಜನವರಿ 31 ರಿಂದ ಫೆಬ್ರವರಿ 19ರವರೆಗೆ ಚಿಲ್ಲೈ ಖುರ್ದ್​​ ಆಗಿದ್ದು, ಮುಂದಿನ ಹತ್ತು ದಿನ ಅಂದರೆ ಫೆಬ್ರವರಿ 20 ರಿಂದ ಮಾರ್ಚ್​ 2ರವರೆಗೆ ಚಿಲ್ಲೈ ಬಚ್ಚಾ ಅವಧಿಯಾಗಿದೆ. ಮೊದಲಿನ ಎರಡು ಅವಧಿಗೆ ಹೋಲಿಕೆ ಮಾಡಿದಾಗ ಈ ಸಮಯದಲ್ಲಿ ಚಳಿ ಕೊಂಚ ಸುಧಾರಣೆ ಹೊಂದಿರುತ್ತದೆ.

ಹೆಪ್ಪುಗಟ್ಟುತ್ತಿರುವ ದಾಲ್​ ಸರೋವರ: ಚಳಿ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ಅನೇಕ ಕಡೆ ನೀರಿನ ಪೂರೈಕ ಮೂಲಗಳು ಘನೀಕರಿಸುತ್ತಿದೆ. ಅದರಲ್ಲೂ ಇಲ್ಲಿನ ಪ್ರಖ್ಯಾತ ಸಿಹಿ ನೀರಿನ ಸರೋವರದಲ್ಲಿ ಈಗಾಗಲೇ ನೀರು ಘನೀಕರಿಸಲು ಪ್ರಾರಂಭಿಸಿದೆ. ನಗರದಲ್ಲಿ ಶುಷ್ಕತೆ ಮುಂದುವರೆದಿದ್ದು ಇದು ಜನರಲ್ಲಿ ಕೆಮ್ಮು ಮತ್ತು ಚಳಿಗೂ ಕಾರಣವಾಗವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹವಾಮಾನ ಇಲಾಖೆ ಪ್ರಕಾರ, ಡಿಸೆಂಬರ್​ 26ರವರೆಗೆ ಒಣ ಹವೆ ಮುಂದುವರೆಯಲಿದ್ದು, ಡಿಸೆಂಬರ್​ 21-22ರಂದು ಎತ್ತರ ಪ್ರದೇಶದಲ್ಲಿ ಹಗುರ ಹಿಮ ಬೀಳಲಿದೆ. ಅನೇಕ ಪ್ರದೇಶದಲ್ಲಿ ಡಿಸೆಂಬರ್​ 27ರ ರಾತ್ರಿ ಮತ್ತು ಡಿಸೆಂಬರ್​ 28ರಂದು ಹಿಮ ಮಳೆ ಕಾಣ ಬಹುದಾಗಿದೆ. ಈ ನಡುವೆ ಕಣಿವೆಯಲ್ಲಿ ಮುಂದಿನ ಕೆಲವು ದನಗಳ ಕಾಲ ಶೀತ ಅಲೆ ಮುಂದುವರೆಯಲಿದೆ.

ಹಿಮಕ್ಕಾಗಿ ಕಾಶ್ಮೀರಿಯರ ಪ್ರಾರ್ಥನೆ:ಮೈನಡುಕುವ ಚಳಿಯ ನಡುವೆ ಕಣಿವೆ ಸ್ವರ್ಗದಂತೆ ಕಾಣವುದು ಹಿಮದ ಹೊದಿಕೆ ಆವೃತವಾದಾಗ ಶುಷ್ಕ ಹವಾಮಾನ ಕೊನೆಗೊ ಈ ನಡುವೆ ಕಣಿವೆಯಲ್ಲಿ ಅನೇಕ ಭಾಗದಲ್ಲಿ ತೀವ್ರ ಚಳಿಯಿಂದಾಗಿ ನೀರಿನ ಪೈಪ್​ಗಳು ಘನೀಕರಿಸುತ್ತಿದ್ದು, ವಿದ್ಯುತ್​​ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ ಉತ್ತಮ ಹಿಮ ಬಿದ್ದಾಗ ಶುಷ್ಕತೆ ನೀಗಿಸಲಿದೆ. ಆದರೆ ಚಳಿಯ ವಾತಾವರಣ ಕಣಿವೆ ಜನರಲ್ಲಿ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು.

ಪ್ರದೇಶವಾರು ತಾಪಮಾನ:ಕಾಶ್ಮೀರ: ಶ್ರೀನಗರದಲ್ಲಿ -8.5, ಕ್ವಾಜಿಗುಂಡ್​​ದಲ್ಲಿ​ -8.2, ಪಹಲ್ಗಾಮ್​ದಲ್ಲಿ​ -8.6, ಕುಪ್ವಾರದಲ್ಲಿ -7.2, ಕೊಕೆರ್ನಾಗ್​​ -5.8, ಗುಲ್ಮಾರ್ಗ್​​ದಲ್ಲಿ -6.2, ಸೋನ್ಮಾರ್ಗ್​​ನಲ್ಲಿ -8.8, ಬಂಡಿಪೊರದಲ್ಲಿ -7.4, ಬರಮುಲ್ಲಾದಲ್ಲಿ -6.2, ಬುಡ್ಗಾಮ್​ನಲ್ಲಿ -8.3, ಗಂಡೆರ್ಬಲ್​ನಲ್ಲಿ -7.1, ಪುಲ್ವಾಮದಲ್ಲಿ -10.3, ಅನಂತ್​ನಾಗ್​ನಲ್ಲಿ -10.5, ಕುಲ್ಗಾಂನಲ್ಲಿ -6.8, ಶೋಫಿಯಾನ್​ನಲ್ಲಿ -10.4 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ.

ಜಮ್ಮು: ಜಮ್ಮುನಲ್ಲಿ 5.4, ಬನಿಹಾಲ್​ನಲ್ಲಿ -4.4, ಬಟೊಟೆಯಲ್ಲಿ 0.5, ಕತ್ರಾ 6.0, ಭಡೆರ್ವಾಹದಲ್ಲಿ -2.3, ಕಿಶ್ತ್ವಾರದಲ್ಲಿ 1.1, ಪಡ್ಡೆರ್​ನಲ್ಲಿ -8.0, ರಂಬನ್​ನಲ್ಲಿ 3.6, ಪೂಂಚ್​​ನಲ್ಲಿ 1.5, ರಾಜೌರಿಲ್ಲಿ 1.7, ಕಥುವಾದಲ್ಲಿ 5.7, ರಿಸಾಯಿ 2.8, ಉದ್ದಂಪುರ್​ನಲ್ಲಿ 1.5 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ.

ಕೇಂದ್ರಾಡಳಿತ ಪ್ರದೇಶ ಲಡಾಖ್​ನ ಲೇಹ್​ನಲ್ಲಿ -12.5, ಕಾರ್ಗಿಲ್​ನಲ್ಲಿ -14.3 ಡಿಗ್ರಿ ಸೆಲ್ಸಿಸ್​ ದಾಖಲಾಗಿದೆ.

ಇದನ್ನೂ ಓದಿ: ಯುಎಸ್​ ವೀಸಾ ಸಂದರ್ಶನ ನಿಯಮ ಮಾರ್ಪಾಡು: ಕಾಯುವ ಸಮಯ ಕಡಿಮೆಯಾಗುವ ನಿರೀಕ್ಷೆ

Last Updated : 7 hours ago

ABOUT THE AUTHOR

...view details