ಕರ್ನಾಟಕ

karnataka

ETV Bharat / bharat

ಕಾಶಿ ವಿಶ್ವನಾಥ ದೇಗುಲದಲ್ಲಿ ಮದುವೆ ಸಂಭ್ರಮ ಆರಂಭ; ಏನಿದರ ವಿಶೇಷತೆ ಗೊತ್ತೆ? - KASHI VISHWANATH TEMPLE WEDDING

ಕಾಶಿ ವಿಶ್ವನಾಥನ ಮದುವೆ ಇದೇ ಮಹಾಶಿವರಾತ್ರಿಯಂದು ವಾರಾಣಸಿ ಕ್ಷೇತ್ರದಲ್ಲಿ ನಡೆದಿತ್ತು ಎಂಬ ಐತಿಹ್ಯ ಇದೆ. ಇದೇ ಸಾಂಪ್ರದಾಯವನ್ನು ಇಂದಿಗೂ ಇಲ್ಲಿ ಪಾಲಿಸಲಾಗುತ್ತಿದೆ

Kashi Vishwanath temple Wedding celebration Baba Tilak on Basant Panchami
ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಆಯುಕ್ತರು (ETV Bharat)

By ETV Bharat Karnataka Team

Published : Feb 4, 2025, 12:01 PM IST

ವಾರಾಣಸಿ, ಉತ್ತರಪ್ರದೇಶ: ಕಾಶಿಯ ವಿಶ್ವನಾಥನಿಗೆ ಮದುವೆ ವಿಶೇಷ ಉತ್ಸವಗಳು ಬಸಂತ್​ ಪಂಚಮಿಯಿಂದ ಆರಂಭವಾಗಿದ್ದು, ಮೊದಲ ದಿನದ ವಿಶೇಷ ಆಚರಣೆಗಳು ಸೋಮವಾರದಿಂದ ಆರಂಭವಾಗಿದೆ. ಬೆಳಗ್ಗೆಯಿಂದ ವಿಶೇಷ ಪೂಜೆ ಕೈಗೊಳ್ಳಲಾಯಿತು. ದೇವರಿಗೆ ವಿಶೇಷ ತಿಲಕ ಅಭಿಷೇಕ ಹಾಗೂ ತಿಲೋತ್ಸವವನ್ನು ನೆರವೇರಿಸಲಾಯಿತು.

ಈ ವಿಶೇಷ ಸಂದರ್ಭದಲ್ಲಿ ಬಾಬಾ ವಿಶ್ವನಾಥರ ಬೆಳ್ಳಿಯ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಮಹಾದೇವನಿಗೆ ತಿಲಕದಿಂದ ಅಭಿಷೇಕ ಮಾಡಲಾಯಿತು. ನಾಲ್ಕು ವೇದಗಳ ಶ್ಲೋಕಗಳನ್ನು ಪಠಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆಯುಕ್ತ ಕೌಶಲ್ ರಾಜ್ ಶರ್ಮಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾಶಿ ವಿಶ್ವನಾಥ (ಈಟಿವಿ ಭಾರತ್​​)

ಮಹಾಶಿವರಾತ್ರಿ ದಿನದಂದು ಮದುವೆ: ಕಾಶಿಯಲ್ಲಿ ವಿಶ್ವನಾಥ ಅವರ ವಿವಾಹ ಮಹೋತ್ಸವವು ತಿಲಕ ಮಹೋತ್ಸವದ ಮೂಲಕ ಬಸಂತ್ ಪಂಚಮಿಯಂದು ಆರಂಭಿಸಲಾಗುವುದು. ಈ ಸಮಾರಂಭ ಮಹಾಶಿವರಾತ್ರಿಯಂದು ವಿವಾಹ ಕಾರ್ಯದ ಮೂಲಕ ಮುಕ್ತಾಯಗೊಳ್ಳಲಿದೆ. ಆ ಬಳಿಕ ಮಹಾಶಿವರಾತ್ರಿಯಂದು ವಿವಾಹ ನರೆವೇರಿಸಲಾಗುತ್ತದೆ ಮತ್ತು ರಂಗಭಾರಿ ಏಕಾದಶಿಯಂದು ಬಾಬಾರ ಗೌಣವನ್ನು(ಮದುವೆ ನಂತರ ನಡೆಯುವ ಶಾಸ್ತ್ರ) ಮಾಡಲಾಗುತ್ತದೆ.

ಕಾಶಿ ಸಂಪ್ರದಾಯದಂತೆ ಆರಂಭಿಸಲಾಗಿರುವ ಈ ಆಚರಣೆಗಳಲ್ಲಿ ಮೊದಲ ದಿನದ ತಿಲಕೋತ್ಸವವನ್ನು ಸಂಜೆ ಶೆಹನಾಯಿ ಸದ್ದು, ದಮ್ರು ನಾದದ ನಡುವೆ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಉತ್ಸವದಲ್ಲಿ ಮಹಾದೇವನಿಗೆ ಹಣ್ಣು ಹಂಪಲುಗಳ ನೇವೇದ್ಯವನ್ನು ಅರ್ಪಿಸಲಾಯಿತು. ಈ ಮೂಲಕ ವಿವಾಹದ ಮೊದಲ ವಿಧಿವಿಧಾನವನ್ನು ಅದ್ಧೂರಿಯಾಗಿ ನಡೆಸಿಕೊಡಲಾಯಿತು.

ಮದುವೆ ಕಾರ್ಯಕ್ರಮದ ವಿಧಿ ವಿಧಾನ (ಈಟಿವಿ ಭಾರತ್​​)

ಮಹಂತ್ ನಿವಾಸದಲ್ಲಿಯೂ ತಿಲಕ: ದೇಗುಲದಲ್ಲಿ ತಿಲಕೋತ್ಸವದ ಜತೆಗೆ ಜಾನಪದ ಸಂಪ್ರದಾಯದಂತೆ ತೆಧಿನಿಮ್‌ನಲ್ಲಿರುವ ಮಾಜಿ ಮಹಂತ್‌ ನಿವಾಸದಲ್ಲಿ ಬಾಬಾರವರ ಪಂಚ ಬದನ್‌ ಮೂರ್ತಿಯನ್ನು ಅದ್ಧೂರಿಯಾಗಿ ಅಲಂಕರಿಸಿ, ಸಪ್ತಋಷಿಗಳ ಪ್ರತೀಕವಾಗಿ 7 ತಟ್ಟೆಗಳಲ್ಲಿ ತಿಲಕವನ್ನು ಬಾಬಾಗೆ ಅರ್ಪಣೆ ಮಾಡಲಾಯಿತು. ಬೆಳಗ್ಗೆ ಮಂಗಳ ಆರತಿಯೊಂದಿಗೆ ಬಾಬಾನಿಗೆ ತಿಲಕ ಇಡುವ ವಿಧಿವಿಧಾನ ಆರಂಭವಾಗಿ ರಾತ್ರಿಯವರೆಗೂ ಮಂಗಳ ಗಾಯನದ ಕಾರ್ಯ ನಡೆಯಲಿದೆ.

ಕಾಶಿ ವಿಶ್ವನಾಥ ದೇಗುಲದಲ್ಲಿ ಮದುವೆ ಸಂಭ್ರಮ (ಈಟಿವಿ ಭಾರತ್​)

ಮದುವೆಯ ವಿಶಿಷ್ಟ ಸಂಪ್ರದಾಯ:ಕಾಶಿಯಲ್ಲಿಯೇ ಶಿವನ ಮದುವೆ ನಡೆಯಿತು ಎಂಬ ನಂಬಿಕೆ ಇದೆ. ರಂಗಭಾರಿ ಏಕಾದಶಿಯಂದು ಗೌರಿ ಮಾತೆ ವರಿಸಲು ವಿಶ್ವನಾಥ ಬಂದನು ಎಂಬ ನಂಬಿಕೆ ಭಕ್ತರದ್ದು. ಇದಕ್ಕೂ ಮುನ್ನ ಅವರ ತಿಲಕ ಉತ್ಸವವನ್ನು ಬಸಂತ್ ಪಂಚಮಿಯಂದು ಆರಂಭಿಸಲಾಗಿತ್ತು ಎಂಬ ಪ್ರತೀತಿಯೂ ಇದೆ. ಇದೇ ಕಾರಣಕ್ಕೆ ಕಾಶಿಯಲ್ಲೂ ಇದೇ ಸಂಪ್ರದಾಯವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ, ಮದುವೆ ವೇಳೆ ವಿಶ್ವನಾಥ ವಿವಿಧ ರೀತಿಯ ಬಟ್ಟೆಗಳನ್ನು ಧರಿಸುತ್ತಾನೆ. ಈ ಬಟ್ಟೆಗಳನ್ನು ಕೂಡ ಕಾಶಿಯವರೇ ತಯಾರು ಮಾಡುತ್ತಾರೆ ಎಂಬುದು ವಿಶೇಷ.

ಇದನ್ನೂ ಓದಿ: ಮಹಾಕುಂಭದ ಸಮಾರೋಪದ ದಿನದೊಳಗೆ 2 ಸಾವಿರ ವೃದ್ಧರಿಗೆ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ವ್ಯವಸ್ಥೆ

ಇದನ್ನೂ ಓದಿ: 'ರಾಜಕೀಯ ಲಾಭಕ್ಕೆ ಸನಾತನ ಧರ್ಮ ಬಳಸಿಕೊಳ್ಳಬೇಡಿ': ರಾಜಕಾರಣಿಗಳಿಗೆ ಸಂತರ ಖಡಕ್​ ಎಚ್ಚರಿಕೆ

ABOUT THE AUTHOR

...view details