ಹೈದರಾಬಾದ್: ಸಾಮಾನ್ಯವಾಗಿ ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋದ ಯುವತಿಯರು ಅಲ್ಲಿಯೇ ಉದ್ಯೋಗ ಪಡೆದು ನೆಲೆಯೂರುವುದು ಸಾಮಾನ್ಯ. ಆದರೆ, ಈ ಕಥೆ ಅದಕ್ಕಿಂತ ಕೊಂಚ ಭಿನ್ನ. 30ನೇ ವಯಸ್ಸಿನಲ್ಲಿ ತಮ್ಮ ಕನಸಿಗೆ ರೆಕ್ಕೆ ಕಟ್ಟಿ ಕಾನೂನು ಅಧ್ಯಯನ ನಡೆಸಿದ, ವಿಜಯವಾಡ ಮೂಲದ ಜಯ ಬಡಿಗಾ ಇದೀಗ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಸುಪೀರಿಯರ್ ಕೋರ್ಟ್ನಲ್ಲಿ ಜಡ್ಜ್ ಆಗಿ ನೇಮಕಗೊಂಡಿದ್ದಾರೆ. ಈ ಗೌರವ ಪಡೆದ ಮೊದಲ ತೆಲುಗು ಮಹಿಳೆ ಕೂಡ ಇವರು. ಇವರ ಈ ಪ್ರಯಾಣದ ಕುರಿತು ಈಟಿವಿ ಭಾರತ್ನೊಂದಿಗೆ ಮಾತನಾಡಿದ್ದಾರೆ.
ಬಾಲ್ಯದಲ್ಲೆ ಚಿಗುರೊಡೆದ ಸಮಾಜಸೇವೆ ಭಾವ:ವಿಜಯವಾಡದಲ್ಲಿ ಹುಟ್ಟಿದ ಜಯ ಬೆಳೆದಿದ್ದೆಲ್ಲ ಹೈದರಾಬಾದ್ನಲ್ಲಿ. ಅವರ ತಂದೆ ರಾಮಕೃಷ್ಣ ಕೈಗಾರಿಕೋದ್ಯಮಿ ಮತ್ತು ಮಾಜಿ ಸಂಸದರು. ತಾಯಿ ಪ್ರೇಮ ಲತಾ ಗೃಹಿಣಿ. ನಾಲ್ಕು ಮಕ್ಕಳಲ್ಲಿ ಮೂರನೇ ಮಗಳಾಗಿರುವ ಜಯ , ಸಿಕಂದ್ರಬಾದ್ನ ಸೆಂಟ್ ಅನ್ನಾಸ್ನಲ್ಲಿ ಶಿಕ್ಷಣ ಪಡೆದರು. ಮಿಷನರಿ ಶಾಲೆಯಲ್ಲಿ ಶಿಕ್ಷಣ ಪಡೆದ ಅವರಿಗೆ ಸಮಾಜ ಸೇವೆಯ ಆಸೆ ಕೂಡ ಹುಟ್ಟಿತು. ಇದರ ಜೊತೆಗೆ ತಂದೆಯೂ ಪ್ರೇರಣೆಯಾದರು. ತಾಯಿಗೆ ಮಗಳು ಕಾನೂನು ಓದಬೇಕು ಎಂದಿದ್ದರರೂ ತಂದೆಗೆ ಇದು ಇಷ್ಟವಿರಲಿಲ್ಲ. ಈ ಹಿನ್ನೆಲೆ ಉಸ್ಮಾನಿಯಾ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು.
ಮಗುವಾದ ಬಳಿಕ ಕಾನೂನು ಪದವಿ ಅಧ್ಯಯನ:ಕಾನೂನು ವೃತ್ತಿಗೆ ಬಂದಿದ್ದು, ಅಚಾನಕ್ ಆಗಿ ಎನ್ನುವ ಜಯ, ಬೊಸ್ಟನ್ ಯುನಿವರ್ಸಿಟಿಯಲ್ಲಿ ಅಂತಾರಾಷ್ಟ್ರೀಯ ಸಂಬಂಧ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದಾದ ಬಳಿಕ 'WEVE' (ವುಮೆನ್ ಎಸ್ಕೆಪಿಂಗ್ ಎ ವೈಲೆಂಟ್ ಎನ್ವರ್ಮೆಂಟ್)ನ ಚಾರಿಟಿ ಸಂಸ್ಥೆಯಲ್ಲಿ ಕೆಲ ಕಾಲ ಕಾರ್ಯ ನಿರ್ವಹಿಸಿದರು. ಇಲ್ಲಿ ಮಹಿಳೆಯರ ಸಮಸ್ಯೆ ಬಗ್ಗೆ ಆಳವಾಗಿ ಅರ್ಥಮಾಡಿಕೊಂಡರು. ವಿಶೇಷವಾಗಿ ನಮ್ಮ ದೇಶದಿಂದ ಬಂದ ಮಹಿಳೆಯರಿಗೆ ಹೆಚ್ಚಿನ ಕಾನೂನು ಮತ್ತು ನ್ಯಾಯಾಲಯದ ಬಗ್ಗೆ ಜ್ಞಾನವನ್ನು ಹೊಂದಿರುವುದಿಲ್ಲ. ಸ್ಥಳೀಯ ಮಹಿಳೆಯರಲ್ಲಿ ಸದಾ ಸಮಸ್ಯೆಗಳು ಇರುತ್ತದೆ. ಇವುಗಳನ್ನು ಕೇಳಿದ ಮೇಲೆ ನಾನು ಯಾಕೆ ಕಾನೂನು ಅಧ್ಯಯನ ಮಾಡಬಾರದು ಎನಿಸಿತು. ಈ ಹಿನ್ನೆಲೆ ಸಂತಾ ಕ್ಲಾರಾ ಕಾನೂನು ಯುನಿವರ್ಸಿಟಿಯಲ್ಲಿ ಪ್ರವೇಶ ಪಡೆದುಕೊಂಡೆ ಅಂತಾರೆ ಅವರು.
ಕುಟುಂಬದ ಬೆಂಬಲದಿಂದ ಸಾಕಾರ:ನನ್ನ ಪತಿ ಇಂಟೆಲ್ನಲ್ಲಿ ಹಾರ್ಡ್ವೇರ್ ಇಂಜಿನಿಯರರ್ ಆಗಿದ್ದು, ಮಗು ಜನಿಸಿದ ಬಳಿಕ ನಾನು ಕಾನೂನು ಪದವಿ ಪಡೆದುಕೊಂಡೆ. ಈ ವೇಳೆ, ನಾನು ಕ್ಯಾಲಿಫೋರ್ನಿಯಾ ಬಾರ್ ಎಕ್ಸ್ಗೆ ಸಿದ್ದವಾಗುವುದು ಕಷ್ಟವಾಯಿತು. ಇದೇ ಕಾರಣಕ್ಕೆ ಮಗುವನ್ನು ಇಂಡಿಯಾಕ್ಕೆ ಕಳುಹಿಸಿ, ಪರೀಕ್ಷೆ ಎದುರಿಸಿದೆ. ಪರೀಕ್ಷೆ ಮುಗಿದ ಬಳಿಕ ಮಗುವನ್ನು ಕರೆತಂದೆ. ಫಲಿತಾಂಶದ ದಿನ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಫಲಿತಾಂಶ ನೋಡಿದೆ. ಈ ವೇಳೆ, ಬಾರ್ ಕೌನ್ಸಿಲ್ ರಿಜಿಸ್ಟರ್ನಲ್ಲಿ ನನ್ನ ಹೆಸರು ಕಂಡ ಬಳಿಕ ನಾನು ವಿಶ್ರಾಂತಿಗೊಂಡೆ. ಕುಟುಂಬದ ಬೆಂಬಲದಿಂದ ಇದು ಸಾಧ್ಯವಾಯಿತು. 2018ರಿಂದ 2022ರವರೆಗೆ ಸ್ವತಂತ್ರವಾಗಿ ಪ್ರಾಕ್ಟಿಸ್ ಮಾಡಿದೆ. ಬಳಿಕ ಕ್ಯಾಲಿಫೋರ್ನಿಯಾ ಹೆಲ್ತ್ ಕೇರ್ ಸರ್ವಿಸ್ನಲ್ಲಿ ಆಟರ್ನಿಯಾಗಿ, ಗವರ್ನರ್ ಕಚೇರಿಯಲ್ಲಿ ತುರ್ತು ಸೇವೆಯಲ್ಲಿ ಕೆಲಸ ಮಾಡಿದೆ. 2022ರಲ್ಲಿ ಉನ್ನತ ಕೋರ್ಟ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದೆ.