ಜಮ್ಮು ಮತ್ತು ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಬಿಜೆಪಿ ಹೊರಡಿಸಿರುವ ಪ್ರಣಾಳಿಕೆಯನ್ನು ಶುಕ್ರವಾರ ಕಾಂಗ್ರೆಸ್ "ಜುಮ್ಲಾ ಪತ್ರ" ಎಂದು ಕರೆದಿದೆ. ಅಲ್ಲದೇ, ಕೇಸರಿ ಪಕ್ಷವು ಸಮಾಜದ ವಿವಿಧ ವರ್ಗಗಳಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ಅಧಿಕಾರಾವಧಿಯಲ್ಲಿ ಭಾರಿ ತೆರಿಗೆ, ಅಭೂತಪೂರ್ವ ನಿರುದ್ಯೋಗ ಮತ್ತು ದಾಖಲೆಯ ಹಣದುಬ್ಬರದಿಂದಾಗಿ ಜನರಿಗೆ ಹೊರೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಶ್ವೇತಪತ್ರ ಹೊರಡಿಸುವುದು ಮತ್ತು ಕಾಶ್ಮೀರದಲ್ಲಿ ಪಾಳುಬಿದ್ದಿರುವ 100 ದೇವಾಲಯಗಳನ್ನು ಮರುಸ್ಥಾಪಿಸುವ ಜೊತೆಗೆ ಭಯೋತ್ಪಾದನೆಗೆ ಬಲಿಯಾದ ಎಲ್ಲರಿಗೆ ನೆರವನ್ನು ಖಾತರಿಪಡಿಸುವುದು ಸೇರಿದಂತೆ 25 ಭರವಸೆಗಳನ್ನು ನೀಡುವುದಾಗಿ ಭರವಸೆ ನೀಡಿದೆ.
ಇಲ್ಲಿ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲು ಕೈಗೊಂಡ ಎರಡು ದಿನಗಳ ಪ್ರವಾಸದ ಮೊದಲ ದಿನದಂದು ಮಾಧ್ಯಮಗೋಷ್ಟಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕಾಶ್ಮೀರಿ ವಲಸಿಗ ಪಂಡಿತರ ಮರಳುವಿಕೆ ಮತ್ತು ಪುನರ್ವಸತಿ ಮತ್ತು ಐದು ಲಕ್ಷ ಉದ್ಯೋಗ ಸೃಷ್ಟಿಯ ಬಗ್ಗೆಯೂ ಮಾತನಾಡಿದ್ದಾರೆ.