ಹೈದರಾಬಾದ್: ಸೆಪ್ಟೆಂಬರ್ 4ನೇ ಶನಿವಾರವನ್ನು ಮೊಲಕ್ಕಾಗಿ (Rabbit) ಮೀಸಲಿಡಲಾಗಿದೆ. ಮೊಲದ ಅರೈಕೆ ಮತ್ತು ಅವುಗಳ ಮೇಲಿನ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಅಂತಾರಾಷ್ಟ್ರೀಯ ಮೊಲದ ದಿನವಾಗಿ ಆಚರಿಸಲಾಗುವುದು. ಈ ಬಾರಿ ಸೆಪ್ಟೆಂಬರ್ 28ರಂದು(ಇಂದು) ಅಂತಾರಾಷ್ಟ್ರೀಯ ಮೊಲದ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇತಿಹಾಸ: ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮೊಲದ ದಿನವನ್ನು 1998ರ ಸೆಪ್ಟೆಂಬರ್ 4ನೇ ಶನಿವಾರದಂದು ಆಚರಿಸಲಾಯಿತು. ಯುಕೆಯಲ್ಲಿ ಮೊದಲಿಗೆ ಈ ಅಂತಾರಾಷ್ಟ್ರೀಯ ಮೊಲದ ದಿನವನ್ನು ಪ್ರಾರಂಭಿಸಲಾಯಿತು. ಬಳಿಕ ಅದು ಅಸ್ಟ್ರೇಲಿಯಾಗೆ ಹರಡಿ ನಂತರ ಜಗತ್ತಿನಾದ್ಯಂತ ಹಬ್ಬಿತು. ಹೌಸ್ ರ್ಯಾಬಿಟ್ ಸೊಸೈಟಿಯು ಮೊದಲ ಜನಪ್ರಿಯತೆ ಹೆಚ್ಚಳ ಹಿನ್ನೆಲೆ ಮತ್ತು ಅವುಗಳ ಆರೈಕೆ ಕುರಿತು ಗಮನ ಸೆಳೆಯಲು ಸೆಪ್ಟೆಂಬರ್ 4ನೇ ಶನಿವಾರದಂದು ಅದಕ್ಕೆಂದೇ ಒಂದು ದಿನವನ್ನು ನಿಗದಿಸಿತು.
ಆಚರಣೆ ಹೇಗೆ: ಅಂತಾರಾಷ್ಟ್ರೀಯ ಮೊಲದ ದಿನವನ್ನು ಮೊಲವನ್ನು ದತ್ತು ತೆಗೆದುಕೊಳ್ಳುವುದು. ಇಲ್ಲ, ಮೊದಲ ಸಂಗ್ರಾಹಾಲಯಕ್ಕೆ ಭೇಟಿ ನೀಡುವ ಮೂಲಕ ಅಥವಾ ಮೊಲದ ಕುರಿತು ಪಿಸ್ತಕ ಓದುವುದು, ಮೊಲದ ಕುರಿತು ಕಥೆ ಪುಸ್ತಕ ಓದುವ ಮೂಲಕ ಆಚರಿಸಬಹುದು.
ಮೊಲದ ಕುರಿತು ಕೌತುಕ:ಮೊಲಗಳು ಲಾಗೊಮೊರ್ಫಾ ವರ್ಗದ ಸಣ್ಣ ಸಸ್ತನಿಗಳಾಗಿವೆ. ಅಂಟಾರ್ಟಿಕಾ ಹೊರತುಪಡಿಸಿ ಎಲ್ಲೆಡೆ ಇವು ಕಂಡು ಬರುತ್ತವೆ. ಜಗತ್ತಿನಲ್ಲಿ 10 ಕುಲದ 29 ಜಾತಿಯ ಮೊಲಗಳಿವೆ. ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿ 17 ಜಾತಿಗಳಿದ್ದು ಸಿಲ್ವಿಲಾಗಸ್ ಅತ್ಯಂತ ಪ್ರಸಿದ್ಧ ಜಾತಿ.
ಗಾತ್ರ:ಮೊಲಗಳು ಗಾತ್ರದಲ್ಲಿ ವ್ಯಾಪಕವಾಗಿ ಬದಲಾಗುತ್ತವೆ. ಇದರಲ್ಲಿ ಡೇರಿಯಸ್ ಮೊಲವು 4 ಅಡಿ 4 ಇಂಚುಗಳಷ್ಟು ಮತ್ತು ಸುಮಾರು 50 ಪೌಂಡ್‌ಗಳಷ್ಟಿದ್ದು, ಇವು ವಿಶ್ವದ ಅತಿ ಉದ್ದದ ಮೊಲಗಳಾಗಿ ಗಿನ್ನೆಸ್ ದಾಖಲೆ ಸೇರಿವೆ. ಇನ್ನು ಇದರಲ್ಲಿನ ಪಿಗ್ಮಿ ಮೊಲಗಳು ಕೇವಲ 7.9 ಇಂಚು ಉದ್ದ ಮತ್ತು 0.9 ಪೌಂಡ್ ತೂಕ ಹೊಂದಿರುತ್ತವೆ.
ಇವು ಉದ್ದವಾದ ಕಿವಿ ಹೊಂದಿದ್ದು, ಪರಭಕ್ಷಕನ ಪತ್ತೆಗಾಗಿ ರೂಪಾಂತರ ಹೊಂದುತ್ತವೆ. ಉದ್ದವಾದ, ಶಕ್ತಿಯುತ ಹಿಂಗಾಲುಗಳನ್ನು ಮತ್ತು ಚಿಕ್ಕದಾದ ಬಾಲವಿದೆ. ಇದರ ಸಂಪೂರ್ಣ ದೇಹ ಮೊಟ್ಟೆಯಾಕಾರದಲ್ಲಿರುತ್ತದೆ. ದೇಹದ ಪ್ರಮಾಣ ಮತ್ತು ನಿಲುವುಗಳು ಒಂದೇ ರೂಪದಲ್ಲಿರುತ್ತದೆ. ಕಂದು ಮತ್ತು ಬಿಳಿ ಬಣ್ಣದಲ್ಲಿರುತ್ತವೆ. ಮೊದಲ ತುಪ್ಪಳವು ಉದ್ದ ಮತ್ತು ಮೃದುವಾಗಿರುತ್ತದೆ. ಇವುಗಳ ಜಾತಿ ಮತ್ತು ತಳಿಯನ್ನು ಅವಲಂಬಿಸಿ ಕೆಲವು ವಿಭಿನ್ನವಾಗಿರುತ್ತವೆ. ಆದರೆ, ಜಪಾನ್‌ನ ಕಪ್ಪು ಅಮಾಮಿ ಮೊಲಗಳು ಮತ್ತು ಆಗ್ನೇಯ ಏಷ್ಯಾ ಎರಡು ಕಪ್ಪು ಪಟ್ಟಿ ಮೊಲ ಈ ಬದಲಾವಣೆ ಹೊಂದುವುದಿಲ್ಲ.
ಆಹಾರ: ಇವು ಸಸ್ಯಹಾರಿಯಾಗಿದ್ದು, ಹುಲ್ಲು ತರಕಾರಿ ಸೇವಿಸುತ್ತವೆ.
ಆವಾಸಸ್ಥಾನ:ಮೊಲಗಳು ಮರುಭೂಮಿಯಿಂದ ಉಷ್ಣವಲಯದ ಅರಣ್ಯ ಮತ್ತು ಆರ್ದ್ರ ಭೂಮಿಯಲ್ಲಿ ಇರುತ್ತವೆ. ಅಂಟಾರ್ಟಿಕಾವನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ವಿವಿಧ ಜಾತಿಯ ಮೊಲಗಳು ಕಾಣಬಹುದು. ಆಸ್ಟ್ರೇಲಿಯಾದಲ್ಲಿ ಮಾತ್ರ ಮೊಲಗಳು 18ನೇ ಶತಮಾನದಲ್ಲಿ ಕಂಡು ಬಂದಿವೆ.
ಸಂತಾನೋತ್ಪತ್ತಿ: ಮೊಲಗಳು ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಸಂತಾನೋತ್ಪತ್ತಿ ಪ್ರಾರಂಭಿಸುತ್ತವೆ. ಪ್ರತಿ ವರ್ಷ ಅನೇಕ ಮರಿಗಳನ್ನು ಹಾಕುತ್ತವೆ. ಮೊಲವೊಂದು ವರ್ಷಕ್ಕೆ ನಾಲ್ಕರಿಂದ ಐದು ಬಾರಿ ಗರ್ಭಧರಿಸಿ, ಏಳು ಮರಿವರೆಗೆ ಜನ್ಮ ನೀಡುತ್ತವೆ. ಇದು ಹೆಚ್ಚು ಸಂತಾನೋತ್ಪತ್ತಿ ನಡೆಸಲು ಕಾರಣ ಇದರ ಕೊರತೆ ಮತ್ತು ಬೆದರಿಕೆಯನ್ನು ಹತ್ತಿಕ್ಕುವುದಾಗಿದೆ.
ನವಜಾತ ಮೊಲಗಳು ಕುರುಡಾಗಿದ್ದು, ಅಸಹಾಯಕವಾಗಿರುತ್ತವೆ. ಮೊಲಗಳು ಅವುಗಳ ಮರಿಗಳ ಬಗ್ಗೆ ಹೆಚ್ಚು ಕಾಳಜಿವಹಿಸುವುದಿಲ್ಲ. ತಾಯಿ ತನ್ನ ಮರಿಯನ್ನು ದಿನಕ್ಕೆ ಒಮ್ಮೆ ಮಾತ್ರ ಕೇವಲ ಕೆಲವು ನಿಮಿಷ ಆರೈಕೆ ಮಾಡುತ್ತದೆ. ತಾಯಿಯ ಪೋಷಣೆ ಸರಿದೂಗಿಸಲು ಇದು ಹೆಚ್ಚು ಪೌಷ್ಟಿಕ ಹಾಲನ್ನು ನೀಡುತ್ತದೆ. ಗಂಡು ಮೊಲಗಳು ಕೂಡ ಮರಿಗಳ ಆರೈಕೆಗೆ ಸಹಾಯ ಮಾಡುವುದಿಲ್ಲ. ಇವು ವೇಗವಾಗಿ ಬೆಳೆದು ತಿಂಗಳೊಳಗೆ ತಾಯಿ ಹಾಲು ಸೇವನೆಯಿಂದ ದೂರವಾಗುತ್ತವೆ.