ಕರ್ನಾಟಕ

karnataka

ETV Bharat / bharat

ಹಣವಿಲ್ಲದೆ ರಾಜಕೀಯ ಪಕ್ಷ ನಡೆಸಲು ಸಾಧ್ಯವಿಲ್ಲ, ಚುನಾವಣಾ ಬಾಂಡ್ ಯೋಜನೆ ಹಿಂದೆ ಒಳ್ಳೆಯ ಉದ್ದೇಶವಿದೆ: ನಿತಿನ್ ಗಡ್ಕರಿ - electoral bonds - ELECTORAL BONDS

ಚುನಾವಣಾ ಬಾಂಡ್‌ಗಳ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ''ಹಣವಿಲ್ಲದೆ ರಾಜಕೀಯ ಪಕ್ಷ ನಡೆಸಲು ಸಾಧ್ಯವಿಲ್ಲ. ಚುನಾವಣಾ ಬಾಂಡ್ ಯೋಜನೆ ತರುವುದರ ಹಿಂದಿನ ನಮ್ಮ ಉದ್ದೇಶ ಉತ್ತಮವಾಗಿದೆ'' ಎಂದು ಹೇಳಿದರು.

Union minister Nitin Gadkari  electoral bonds scheme  no party can survive sans funds
ಹಣವಿಲ್ಲದೆ ರಾಜಕೀಯ ಪಕ್ಷ ನಡೆಸಲು ಸಾಧ್ಯವಿಲ್ಲ, ಚುನಾವಣಾ ಬಾಂಡ್ ಯೋಜನೆ ಹಿಂದೆ ಒಳ್ಳೆಯ ಉದ್ದೇಶವಿದೆ: ನಿತಿನ್ ಗಡ್ಕರಿ

By PTI

Published : Mar 23, 2024, 1:55 PM IST

ಅಹಮದಾಬಾದ್ (ಗುಜರಾತ್): ''ಕೇಂದ್ರ ಸರ್ಕಾರವು 2017ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಉತ್ತಮ ಉದ್ದೇಶದಿಂದ ಪ್ರಾರಂಭಿಸಿದೆ. ಚುನಾವಣಾ ಬಾಂಡ್​ ಅನ್ನು ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ಘೋಷಿಸಿದೆ'' ಎಂದು ಕೇಂದ್ರ ನಿತಿನ್ ಗಡ್ಕರಿ ಶುಕ್ರವಾರ ತಿಳಿಸಿದರು.

ಗಾಂಧಿನಗರ ಸಮೀಪದ ಗಿಫ್ಟ್ ಸಿಟಿಯಲ್ಲಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ''ಸುಪ್ರೀಂ ಕೋರ್ಟ್ ಈ ವಿಷಯದ ಕುರಿತು ಯಾವುದೇ ಸೂಚನೆಗಳನ್ನು ನೀಡಿದರೆ, ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಿಗೆ ಕುಳಿತು ಚರ್ಚಿಸಬೇಕಾಗಿದೆ'' ಎಂದರು.

''ಅರುಣ್ ಜೇಟ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಚರ್ಚೆಯಲ್ಲಿ ನಾನು ಭಾಗಿಯಾಗಿದ್ದೆ. ಸಂಪನ್ಮೂಲವಿಲ್ಲದೆ ಯಾವುದೇ ಪಕ್ಷ ನಡೆಯಲು ಸಾಧ್ಯವಿಲ್ಲ. ಕೆಲವು ದೇಶಗಳಲ್ಲಿ ಸರ್ಕಾರಗಳು ರಾಜಕೀಯ ಪಕ್ಷಗಳಿಗೆ ಹಣ ನೀಡುತ್ತವೆ. ಭಾರತದಲ್ಲಿ ಅಂತಹ ವ್ಯವಸ್ಥೆ ಇಲ್ಲ'' ಎಂದು ಹೇಳಿದರು.

''ರಾಜಕೀಯ ಪಕ್ಷಗಳನ್ನು ಆರ್ಥಿಕವಾಗಿ ಸದೃಢವಾಗಿಡಲು ನಾವು ಬಯಸುತ್ತೇವೆ. ಚುನಾವಣಾ ಬಾಂಡ್‌ಗಳನ್ನು ಪರಿಚಯಿಸುವ ಹಿಂದಿನ ಮುಖ್ಯ ಉದ್ದೇಶವೆಂದರೆ ರಾಜಕೀಯ ಪಕ್ಷಗಳು ನೇರವಾಗಿ ಹಣವನ್ನು ಪಡೆಯಬೇಕು. ಆದರೆ, ಅಧಿಕಾರದಲ್ಲಿರುವ ಪಕ್ಷ ಬದಲಾದರೆ ಅದು ಸಮಸ್ಯೆಗಳನ್ನು ಉಂಟುಮಾಡುವ ಕಾರಣ (ದಾನಿಗಳ) ಹೆಸರನ್ನು ಬಹಿರಂಗಪಡಿಸುವುದಿಲ್ಲ'' ಎಂದು ಅವರು, ''ರಾಜಕೀಯ ಪಕ್ಷಗಳು ತಮ್ಮ ವ್ಯವಹಾರ ನಡೆಸಲು ಹಣದ ಅಗತ್ಯವಿದೆ'' ಎಂದು ನಿತಿನ್ ಗಡ್ಕರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್​:ಪಾರದರ್ಶಕತೆ ತರಲು ನಾವು ಈ ಚುನಾವಣಾ ಬಾಂಡ್‌ಗಳ ವ್ಯವಸ್ಥೆಯನ್ನು ತಂದಿದ್ದೇವೆ. ಆದ್ದರಿಂದ, ನಾವು ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದಾಗ, ನಮ್ಮ ಉದ್ದೇಶಗಳು ಉತ್ತಮವಾಗಿದ್ದವು. ಈ ಯೋಜನೆಯಲ್ಲಿ ಏನಾದರೂ ಲೋಪ ಕಂಡು ಬಂದಲ್ಲಿ ಅದನ್ನು ಸುಧಾರಿಸಲು ಸುಪ್ರೀಂ ಕೊರ್ಟ್​ ಹೇಳಿದರೆ, ಎಲ್ಲಾ ಪಕ್ಷಗಳು ಒಟ್ಟಾಗಿ ಕುಳಿತು ಸರ್ವಾನುಮತದಿಂದ ಚರ್ಚಿಸುತ್ತೇವೆ. ಏಕೆಂದರೆ ಹಣವಿಲ್ಲದೆ ಪಕ್ಷಗಳು ಯಾವುದೇ ಚಟುವಟಿಕೆ ಮಾಡಲು ಸಾಧ್ಯವಿಲ್ಲ ಎಂದು ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು.

''ಈ ಯೋಜನೆಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕು ಹಾಗೂ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ'' ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ವಿವಿಧ ಅಂಕಿ ಅಂಶಗಳನ್ನು ಚುನಾವಣಾ ಆಯೋಗಕ್ಕೆ ನೀಡಿತ್ತು. ಈ ಯೋಜನೆಯಡಿಯಲ್ಲಿ ರಾಜಕೀಯ ಪಕ್ಷಗಳು ಪಡೆದ ಹಣದ ವಿವರಗಳನ್ನು ಚುನಾವಣಾ ಆಯೋಗವು ತನ್ನ ವೆಬ್​ಸೈಟ್​ನಲ್ಲಿ ಪ್ರಕಟ ಮಾಡಿದೆ.

ಇದನ್ನೂ ಓದಿ:ಮಾಸ್ಕೋದಲ್ಲಿನ ಉಗ್ರರ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ - terror attack

ABOUT THE AUTHOR

...view details