ಕರ್ನಾಟಕ

karnataka

ETV Bharat / bharat

ಸ್ವಚ್ಛ ನಗರ ಪಟ್ಟಿಯೊಂದಿಗೆ ಭಿಕ್ಷುಕ ಮುಕ್ತ ನಗರವಾಗಿ ಹೊರಹೊಮ್ಮಿದ ಸಿಟಿ: ಭಿಕ್ಷುಕರನ್ನು ಹುಡುಕಿಕೊಟ್ಟವರಿಗೆ 1 ಸಾವಿರ ಬಹುಮಾನ! - BEGGAR FREE CITY

ಮಧ್ಯ ಪ್ರದೇಶದ ಇಂಧೋರ್ ದೇಶದ ಅತ್ಯಂತ ಸ್ವಚ್ಛ ನಗರ ಪಟ್ಟಿಯೊಂದಿಗೆ ದೇಶದ ಮೊದಲ ಭಿಕ್ಷುಕ ಮುಕ್ತ ನಗರವಾಗಿ ಹೊರಹೊಮ್ಮಿದೆ. ಈ ಬದಲಾವಣೆಗೆ ತೆಗೆದುಕೊಂಡ ಕ್ರಮ ಏನು ಗೊತ್ತಾ?..ಸುದ್ದಿ ಓದಿ.

INDORE BECOMES BEGGAR FREE  BEGGAR FREE INDORE  INDIA 1ST BEGGAR FREE CITY INDORE  CLEANEST CITY
ಸ್ವಚ್ಛನಗರ ಪಟ್ಟಿಯೊಂದಿಗೆ ಭಿಕ್ಷುಕ ಮುಕ್ತ ನಗರವಾಗಿ ಹೊರಹೊಮ್ಮಿದ ಇಂಧೋರ್ (ETV Bharat)

By ETV Bharat Karnataka Team

Published : Jan 4, 2025, 8:01 PM IST

ಭೋಪಾಲ್/ಇಂದೋರ್​(ಮಧ್ಯ ಪ್ರದೇಶ):ನೀತಿ ಆಯೋಗದ ವರದಿಯ ಪ್ರಕಾರ, ಮಧ್ಯಪ್ರದೇಶವು ಬಡತನದಲ್ಲಿ ಶೇಕಡಾ 15.94 ರಷ್ಟು ಭಾರೀ ಇಳಿಕೆಯೊಂದಿಗೆ ಬಡ ರಾಜ್ಯ ಎಂಬ ಪಟ್ಟಿಯಿಂದ ಹೊರಬರಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ದೇಶದ ಅತ್ಯಂತ ಸ್ವಚ್ಛ ನಗರ ಇಂದೋರ್‌ನಲ್ಲಿ ಭಿಕ್ಷುಕರ ಸಂಖ್ಯೆ ಕೂಡ ಇಳಿಮುಖವಾಗಿದ್ದು, ಜನವರಿ 1 ರಿಂದ ದೇಶದ ಮೊದಲ ಭಿಕ್ಷುಕ ಮುಕ್ತ ನಗರವಾಗಿದೆ ಹೊರ ಹೊಮ್ಮಿದೆ.

ಇಡೀ ದೇಶಕ್ಕೆ ಮಾದರಿಯಾಗಿರುವ ಇಂದೋರ್‌ನಲ್ಲಿ ಯಾವ ಕಾನೂನು ಭಿಕ್ಷುಕರಿಂದ ಮುಕ್ತಗೊಳಿಸಿದೆ? ಭಿಕ್ಷುಕರನ್ನು ಹುಡುಕಿಕೊಟ್ಟವರಿಗೆ ಬಹುಮಾನ ಮತ್ತು ಭಿಕ್ಷೆ ನೀಡಿದರೆ ದಂಡ ವಿಧಿಸುವ ಇಂದೋರ್ ಜಿಲ್ಲಾಡಳಿತದ ನಿರ್ಧಾರದ ವಿರುದ್ಧ ಮಾನವ ಹಕ್ಕುಗಳ ಸಂಘಟನೆಗಳು ಏಕೆ ಧ್ವನಿ ಎತ್ತುತ್ತಿವೆ? ಭಿಕ್ಷಾಟನೆಯು ಇಲ್ಲಿ ಅಪರಾಧದ ವ್ಯಾಪ್ತಿಗೆ ಬಂದಿದ್ದು ಹೇಗೆ?, ಈ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುವ ಮಾರ್ಗವೇನು?. ಇಲ್ಲಿದೆ ಕ್ಲೀನ್ ಸಿಟಿ ಇಂದೋರ್​ನ್ನು ಭಿಕ್ಷುಕರಿಂದ ಮುಕ್ತಿ ನೀಡಿದ ಕುರಿತು ಸಂಪೂರ್ಣ ವಿವರಣೆ.

ಇಂದೋರ್​ಗೆ 2ನೇ ಪಟ್ಟ: ಜನವರಿ 1 ರಿಂದ ದೇಶದ ಸ್ವಚ್ಛ ನಗರವಾಗಿರುವ ಇಂದೋರ್ ಇನ್ನು ಮುಂದೆಯೂ ಸಂಪೂರ್ಣವಾಗಿ ಭಿಕ್ಷುಕರ ಮುಕ್ತ ನಗರವಾಗಿ ಇರಲು ಸಿದ್ಧತೆ ನಡೆಸಿದೆ. ಭಿಕ್ಷುಕನ ಬಗ್ಗೆ ಮಾಹಿತಿ ನೀಡುವವರಿಗೆ ಒಂದು ಸಾವಿರ ರೂಪಾಯಿ ಬಹುಮಾನ ನೀಡಲಾಗುವ ದೇಶದ ಮೊದಲ ನಗರ ಇದಾಗಿದೆ. ಹೌದು ಭಿಕ್ಷೆ ತೆಗೆದುಕೊಳ್ಳುವುದು ಮತ್ತು ಭಿಕ್ಷೆ ನೀಡುವುದು ಎರಡೂ ಅಪರಾಧದ ವರ್ಗಕ್ಕೆ ಬರಲಿದೆ. ಸಿವಿಲ್ ಕೋಡ್ 2023 ಮತ್ತು ಸಿವಿಲ್ ಪ್ರೊಟೆಕ್ಷನ್ ಆಕ್ಟ್‌ನ ಸೆಕ್ಷನ್ 163 (1-2) ಅಡಿ ನಿರ್ಬಂಧಿತ ಆದೇಶಗಳನ್ನು ನೀಡಲಾಗಿದೆ. ಇದರ ಅಡಿ ಈಗ ಇಂದೋರ್‌ನಲ್ಲಿ ಭಿಕ್ಷೆ ಬೇಡುವುದು ಅಪರಾಧದ ವ್ಯಾಪ್ತಿಗೆ ಬರುತ್ತದೆ. ಹಾಗೇ ಭಿಕ್ಷೆ ಬೇಡುವವರ ವಿರುದ್ಧ ಸೆಕ್ಷನ್ 144ರ ಅಡಿ ಕ್ರಮ ಕೈಗೊಳ್ಳಲಾಗುವುದು.

ಈ ಬಗ್ಗೆ ಇಲ್ಲಿನ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಮಾಹಿತಿ ನೀಡಿದ್ದಾರೆ. "ಇಂದೋರ್​​ ಸಂಪೂರ್ಣ ಭಿಕ್ಷುಕ ಮುಕ್ತಗೊಳಿಸಲು ನಾವು ಶ್ರಮಿಸಿದ್ದೇವೆ. ಮೊದಲು ಸಮೀಕ್ಷೆ ನಡೆಸಿ, ನಂತರ ಅವರಿಗೆ ಉದ್ಯೋಗ ಸಂಪರ್ಕ ಕಲ್ಪಿಸುವ ಕೆಲಸ ನಡೆದಿದೆ. ಹೊರಗಿನಿಂದ ಜನರನ್ನು ಕರೆತಂದು ಭಿಕ್ಷೆ ಬೇಡಿಸಲಾಗುತ್ತಿತ್ತು ಎಂಬ ಕೆಲ ಅಂಶಗಳೂ ಇವೆ. ಈ ಬಗ್ಗೆ ಮಾಹಿತಿಯೂ ಬೆಳಕಿಗೆ ಬಂದಿದೆ. ಕೆಲ ಕುಟುಂಬದಲ್ಲಿ ಸದಸ್ಯರನ್ನು ಭಿಕ್ಷೆ ಬೇಡುವಂತೆ ಒತ್ತಾಯಿಸಲಾಗುತ್ತಿದೆ. ಇಲ್ಲಿಯವರೆಗೆ, ನಾವು ಇಂದೋರ್ ಅನ್ನು ಬಹುತೇಕ ಭಿಕ್ಷುಕ ಮುಕ್ತಗೊಳಿಸಿದ್ದೇವೆ. ಅವರಿಗೂ ಉತ್ತಮ ರೀತಿಯಲ್ಲಿ ಪುನರ್ವಸತಿ ಕಲ್ಪಿಸುತ್ತಿದ್ದೇವೆ. ನಾವು ಅವರಿಗೆ ಉದ್ಯೋಗ ನೀಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ಭಿಕ್ಷುಕನ ಬಗ್ಗೆ ಮಾಹಿತಿ ನೀಡಿದವರಿಗೆ 1 ಸಾವಿರ ಬಹುಮಾನ: ಭಿಕ್ಷುಕರ ಪತ್ತೆಯೇ ಜಿಲ್ಲಾಡಳಿತದ ಮುಂದಿರುವ ದೊಡ್ಡ ಸವಾಲು. ಹೀಗಾಗಿ ಇಂದೋರ್‌ನ ಯಾವುದೇ ಸ್ಥಳದಲ್ಲಿ ಭಿಕ್ಷುಕ ಅಥವಾ ಭಿಕ್ಷುಕರಿದ್ದರೆ, ಅವರ ಬಗ್ಗೆ ಮಾಹಿತಿ ನೀಡಿದರೆ ಜಿಲ್ಲಾಡಳಿತವು ಬಹುಮಾನವನ್ನು ನೀಡುತ್ತದೆ. ಇದಕ್ಕಾಗಿ ಭಿಕ್ಷುಕರ ಮಾಹಿತಿ ಸಂಖ್ಯೆ (9691494951) ನೀಡಲಾಗಿದೆ. ಈ ಸಂಖ್ಯೆಗೆ ನಗರದ ಯಾವುದೇ ಭಾಗದಲ್ಲಿರುವ ಭಿಕ್ಷುಕನ ಬಗ್ಗೆ ಯಾರು ಬೇಕಾದರೂ ಮಾಹಿತಿ ನೀಡಬಹುದು. ಮೊದಲು ಮಾಹಿತಿಯು ಸರಿಯಾಗಿದ್ದರೆ, ಭಿಕ್ಷುಕನ ಭೌತಿಕ ಪರಿಶೀಲನೆಯ ನಂತರ, ಮಾಹಿತಿದಾರರಿಗೆ ಒಂದು ಸಾವಿರ ರೂಪಾಯಿ ಬಹುಮಾನ ಅಥವಾ ಪ್ರೋತ್ಸಾಹಕ ಮೊತ್ತವನ್ನು ನೀಡಲಾಗುತ್ತದೆ.

ಭಿಕ್ಷುಕರು ಸಂಗ್ರಹಿಸುವ ಮೊತ್ತ ಕೇಳಿದರೆ ಶಾಕ್​: ಇತ್ತೀಚೆಗೆ ಭಿಕ್ಷೆ ಬೇಡಲೆಂದೇ ಹೈದರಾಬಾದಿನಿಂದ ಒಬ್ಬ ಬಂದಿದ್ದ. ರಾಜಸ್ಥಾನದ ತಂಡವೊಂದು ಭಿಕ್ಷೆ ಬೇಡಲು ಇಂದೋರ್‌ಗೆ ಬಂದಿತ್ತು. ಸದ್ಯ ಅವರನ್ನು ಜಿಲ್ಲಾಡಳಿತ ರಕ್ಷಿಸಿದೆ. ಇದಲ್ಲದೇ ಇಂದೋರ್‌ನ ರಾಜ್‌ವಾಡದ ಶನಿ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ಭಿಕ್ಷೆ ಬೇಡುತ್ತಿದ್ದಾಗ ಸೀರೆಯ ಕೆಳಗೆ ಸುಮಾರು 75 ಸಾವಿರ ರೂಪಾಯಿಗಳನ್ನು ಬಚ್ಚಿಟ್ಟಿದ್ದರು. ಇದು ಅವರು ಹತ್ತು ದಿನಗಳಲ್ಲಿ ಭಿಕ್ಷೆಯಾಗಿ ಸಂಗ್ರಹಿಸಿದ ಮೊತ್ತ. ಇದೇ ರೀತಿ ಇನ್ನೂ ಅನೇಕ ಕುಟುಂಬಗಳು ಸಿಕ್ಕಿಬಿದ್ದಿವೆ, ಇದರಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಭಿಕ್ಷಾಟನೆಯ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂದೋರ್ ಮಾತ್ರವಲ್ಲ, ದೇಶದ ಇನ್ನೂ ಹತ್ತು ನಗರಗಳು ಭಿಕ್ಷುಕ ಮುಕ್ತವಾಗಲಿವೆ:ಇಂದೋರ್ ಅನ್ನು ಭಿಕ್ಷುಕ ಮುಕ್ತಗೊಳಿಸುವ ಅಭಿಯಾನವನ್ನು ಪ್ರಾಯೋಗಿಕ ಯೋಜನೆಯಡಿ ತರಲಾಗಿದೆ. ಅದಕ್ಕೆ ಸ್ಮೈಲ್ ಯೋಜನೆ ಎಂದು ಹೆಸರಿಡಲಾಗಿದೆ. ಭಿಕ್ಷಾಟನೆಯಲ್ಲಿ ತೊಡಗಿರುವ ಜನರಿಗೆ ಪುನರ್ವಸತಿ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಅವರನ್ನು ಬೀದಿಗೆ ತಳ್ಳುವ ಬದಲು ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ದಾರಿ ಮಾಡಿಕೊಡುವ ಮೂಲಕ ಪುನರ್ವಸತಿ ಮಾಡಲಾಗುತ್ತದೆ. ಈ ಯೋಜನೆಯು ದೇಶದ 30 ನಗರಗಳನ್ನು ಒಳಗೊಂಡಿದೆ. ದೆಹಲಿ, ಲಖನೌ, ಹೈದರಾಬಾದ್, ಚೆನ್ನೈ, ಅಹಮದಾಬಾದ್, ಮುಂಬೈ, ಪಾಟ್ನಾ, ಬೆಂಗಳೂರು ಮತ್ತು ನಾಗ್ಪುರ ಸೇರಿದಂತೆ ಒಟ್ಟು 10 ನಗರಗಳನ್ನು ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಲಾಗಿದೆ.

ಭಾರತದಲ್ಲಿದ್ದಾರೆ 4 ಲಕ್ಷಕ್ಕೂ ಅಧಿಕ ಭಿಕ್ಷುಕರು: ನಿಮಗೆ ಗೊತ್ತೇ, ದೇಶಾದ್ಯಂತ ಭಿಕ್ಷುಕರ ಅಧಿಕೃತ ಮಾಹಿತಿ ಪ್ರಕಾರ, ಇಡೀ ದೇಶದಲ್ಲಿ 4 ಲಕ್ಷ 13 ಸಾವಿರಕ್ಕೂ ಹೆಚ್ಚು ಭಿಕ್ಷುಕರಿದ್ದಾರೆ. ಮಧ್ಯಪ್ರದೇಶವೊಂದರಲ್ಲೇ ಸರಾಸರಿ ಭಿಕ್ಷುಕರ ಸಂಖ್ಯೆ 28 ಸಾವಿರದ 695. ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಪ್ರಕಾರ, ಇಂದೋರ್ ಒಂದರಲ್ಲೇ 45 ಮಕ್ಕಳೊಂದಿಗೆ 354 ವಯಸ್ಕರನ್ನು ಭಿಕ್ಷಾಟನೆಯಿಂದ ರಕ್ಷಿಸಲಾಗಿದೆ. ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕದ ಎರಡನೇ ವರದಿಯ ಪ್ರಕಾರ, ಮಧ್ಯಪ್ರದೇಶದಲ್ಲಿ ಬಡವರ ಸಂಖ್ಯೆ 15.94 ಪ್ರತಿಶತದಷ್ಟು ಕಡಿಮೆಯಾಗಿದೆ. ಮಧ್ಯಪ್ರದೇಶದಲ್ಲಿ ಈ ಹಿಂದೆ ಶೇ.36.57 ರಷ್ಟಿದ್ದ ಬಡತನದ ಪ್ರಮಾಣ ಈಗ ಶೇ.20.63ಕ್ಕೆ ಇಳಿದಿದೆ. ರಾಜ್ಯದ ಅತ್ಯಂತ ಬಡ ಜಿಲ್ಲೆ ಎಂಬ ಕಳಂಕವನ್ನು ಹೊತ್ತಿದ್ದ ಅಲಿರಾಜಪುರದಿಂದ ಬರ್ವಾನಿ, ಖಾಂಡ್ವಾ, ಬಾಲಘಾಟ್ ಮತ್ತು ಟಿಕಾಮ್‌ಗಢದವರೆಗೆ ಪರಿಸ್ಥಿತಿ ಸುಧಾರಿಸಿದೆ.

ಇದನ್ನೂ ಓದಿ:ರೈತನ ಮದುವೆ ಮೆರವಣಿಗೆಗೆ ಬಾರದ ಹೆಲಿಕಾಪ್ಟರ್: ₹7 ಲಕ್ಷ ಪರಿಹಾರ ಕೊಡುವಂತೆ ಸಂಸ್ಥೆಗೆ ಗ್ರಾಹಕರ ವೇದಿಕೆ ಆದೇಶ

ABOUT THE AUTHOR

...view details