ಪ್ರಸಕ್ತ ಆರ್ಥಿಕ ವರ್ಷ 2023-24ರ ಮುಕ್ತಾಯಕ್ಕೆ ಇನ್ನು 7 ದಿನಗಳು ಮಾತ್ರ ಬಾಕಿ ಉಳಿದಿವೆ. ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸದವರಿಗೆ ಮಾ.31ರ ವರೆಗೆ ಸಮಯವಿದ್ದು ರಿಟರ್ನ್ಸ್ ಸಲ್ಲಿಸಬುಹದಾಗಿದೆ.
ರಿಟರ್ನ್ಸ್ ಸಲ್ಲಿಸುವುದು ಹೇಗೆ?: ಇದಕ್ಕಾಗಿ ತೆರಿಗೆ ಇಲಾಖೆ 7 ಬಗೆಯ ITR-1, ITR-2, ITR-3, ITR-4, ITR-5, ITR-6 & ITR-7 ಫಾರ್ಮ್‌ಗಳನ್ನು ಸೂಚಿಸಿದೆ. ತೆರಿಗೆದಾರರ ಆದಾಯದ ಮೂಲಗಳು, ಗಳಿಸಿದ ಮೊತ್ತ ಮತ್ತು ತೆರಿಗೆದಾರರು ಯಾವ ವರ್ಗಕ್ಕೆ ಸೇರಿದ್ದಾರೆ ಎಂಬುದರ ಆಧಾರದ ಮೇಲೆ ಸೂಕ್ತವಾದ ITR ಫಾರ್ಮ್ ಅನ್ನು ಆಯ್ಕೆ ಮಾಡಿಕೊಂಡು ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ.
ಸರಿಯಾದ ITR ಫಾರ್ಮ್ ಅನ್ನು ಹೇಗೆ ಆಯ್ಕೆ ಮಾಡುವುದು?
ಪ್ರತಿ ವರ್ಷ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಹಿಂದಿನ ಹಣಕಾಸು ವರ್ಷದ ITR ಫಾರ್ಮ್‌ಗಳನ್ನು ತಿಳಿಸುತ್ತದೆ. ಕೆಳಗೆ ತಿಳಿಸಲಾದ ಯಾವುದೇ ಷರತ್ತುಗಳು ನಿಮಗೆ ಅನ್ವಯಿಸಿದರೆ, ನೀವು ಖಂಡಿತವಾಗಿಯೂ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬೇಕಾಗುತ್ತದೆ.
ITR-1 ಅಥವಾ SAHAJ: ವ್ಯಕ್ತಿಗಳು ಭಾರತದಲ್ಲಿ ನೆಲೆಸಿರುವ ಸಾಮಾನ್ಯ ನಾಗರಿಕರು ಮತ್ತು ರೂ. 50 ಲಕ್ಷದವರೆಗಿನ ಆದಾಯವನ್ನು ಹೊಂದಿರುವವರು ITR-1 ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ. ಸಂಬಳ, ಮನೆಯಿಂದ ಬರುವ ಆದಾಯ, ಇತರ ಮೂಲಗಳಿಂದ ಬರುವ ಆದಾಯ, ಸಂಗಾತಿ ಅಥವಾ ಮಕ್ಕಳಿಂದ ಬರುವ ಆದಾಯ ಸೇರಿ ಎಲ್ಲವೂ ರೂ.50 ಲಕ್ಷದವರೆಗೆ ಇದ್ದರೆ, ಐಟಿಆರ್-1ರ ಅಡಿ ರಿಟರ್ನ್ಸ್ ಸಲ್ಲಿಸಬೇಕು.
ITR-2:ವೃತ್ತಿ, ವ್ಯಾಪಾರ, ಹಿಂದೂ ಅವಿಭಜಿತ ಕುಟುಂಬಗಳಿಂದ ಆದಾಯ ಗಳಿಸದ ವ್ಯಕ್ತಿಗಳು ಈ ITR ಫಾರ್ಮ್-2 ಅನ್ನು ಸಲ್ಲಿಸಬೇಕು. ರೂ.50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿ, ಕಂಪನಿಯ ನಿರ್ದೇಶಕರು, ಪಟ್ಟಿ ಮಾಡದ ಈಕ್ವಿಟಿ ಷೇರುಗಳನ್ನು ಹೊಂದಿರುವವರು ಈ ಐಟಿಆರ್ ಫಾರ್ಮ್-2 ಅನ್ನು ಸಲ್ಲಿಸಬೇಕು. ಮಾಸಿಕ ಸಂಬಳ ಹೊಂದಿರುವವರು, ಬಹು ಕುಟುಂಬಗಳು, ಬಂಡವಾಳ ಲಾಭಗಳು, ವಿದೇಶಗಳಲ್ಲಿ ಆಸ್ತಿಗಳು ಮತ್ತು ಆದಾಯದ ಮಾರ್ಗಗಳನ್ನು ಹೊಂದಿರುವವರು ITR-2 ಫಾರ್ಮ್ ಅನ್ನು ಸಲ್ಲಿಸಬೇಕು.