ನವದೆಹಲಿ: ವಾಯುವ್ಯ ಮಧ್ಯಪ್ರದೇಶ ಮತ್ತು ಪೂರ್ವ ರಾಜಸ್ಥಾನದಲ್ಲಿ ವಾಯುಭಾರ ಕುಸಿತ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್, ಗೋವಾಗಳ ಕೆಲವು ಭಾಗಗಳಲ್ಲಿ ಭಾರಿಯಿಂದ ಕೂಡಿದ ಅತ್ಯಂತ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಮಹಾರಾಷ್ಟ್ರದಲ್ಲೂ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಆಗಸ್ಟ್ 25ರ ರಾತ್ರಿ 11:30 ಕ್ಕೆ ಆಳವಾದ ವಾಯುಭಾರ ಕುಸಿತವಾಗಿದ್ದು, ರಾಜಸ್ಥಾನದ ಚಿತ್ತೋರ್‌ಗಢದ ದಕ್ಷಿಣ-ಆಗ್ನೇಯಕ್ಕೆ 70 ಕಿಮೀ ದೂರದಲ್ಲಿ ಈ ವಾಯುಭಾರ ಕುಸಿತ ಕೇಂದ್ರೀಕೃತವಾಗಿದೆ ಎಂದು ತಿಳಿಸಿರುವ ಹವಾಮಾನ ಇಲಾಖೆ, ದಕ್ಷಿಣ ರಾಜಸ್ಥಾನ ಮತ್ತು ಗುಜರಾತ್‌ನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ಕಡಿಮೆ ಒತ್ತಡದ ಪ್ರದೇಶವು ಬಾಂಗ್ಲಾದೇಶ ಮತ್ತು ಪಕ್ಕದ ಗಂಗಾನದಿ ಪಶ್ಚಿಮ ಬಂಗಾಳದ ಮೇಲೆ ನೆಲೆಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಇದು ಮತ್ತಷ್ಟು ತೀವ್ರಗೊಂಡು ಮುಂದಿನ ಎರಡು ದಿನಗಳಲ್ಲಿ ಗಂಗಾನದಿ ಪಶ್ಚಿಮ ಬಂಗಾಳ, ಉತ್ತರ ಒಡಿಶಾ ಮತ್ತು ಜಾರ್ಖಂಡ್ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.
ಆಗಸ್ಟ್ 26 ರಂದು ಪಶ್ಚಿಮ ಮಧ್ಯಪ್ರದೇಶದಲ್ಲಿ ಭಾರಿಯಿಂದ ಕೂಡಿದ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪೂರ್ವ ಮತ್ತು ದಕ್ಷಿಣ ರಾಜಸ್ಥಾನ, ಗುಜರಾತ್, ಸೌರಾಷ್ಟ್ರ ಮತ್ತು ಕಚ್‌ನಲ್ಲಿ ಆಗಸ್ಟ್ 26 ರಿಂದ 29 ರವರೆಗೆ ಇದೇ ರೀತಿಯ ಪರಿಸ್ಥಿತಿಗಳು ಇರಲಿದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿಯೂ ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದೂ ಸೂಚಿಸಲಾಗಿದೆ.
ಆಗಸ್ಟ್ 26 ರಂದು ಮಧ್ಯಪ್ರದೇಶದಲ್ಲಿ ಗಂಟೆಗೆ 50 ಕಿಮೀ ವೇಗದಲ್ಲಿ ಮತ್ತು ಆಗಸ್ಟ್ 26 - 27 ರಂದು ದಕ್ಷಿಣ ರಾಜಸ್ಥಾನದಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು IMD ಎಚ್ಚರಿಸಿದೆ. ಗುಜರಾತ್, ಪಾಕಿಸ್ತಾನ, ಉತ್ತರ ಮಹಾರಾಷ್ಟ್ರ ಮತ್ತು ಈಶಾನ್ಯ ಅರಬ್ಬಿ ಸಮುದ್ರದಲ್ಲಿ ಆಗಸ್ಟ್ 26 ರಂದು ಗಂಟೆಗೆ 55 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ, ಆಗಸ್ಟ್ 27 ಮತ್ತು 28 ರಂದು ಗಂಟೆಗೆ 60 ಕಿಮೀ ವೇಗದಲ್ಲಿ ಈ ಗಾಳಿ ಹೆಚ್ಚಾಗುತ್ತದೆ IMD ತನ್ನ ವರದಿಯಲ್ಲಿ ತಿಳಿಸಿದೆ.
ಆಗಸ್ಟ್ 30 ರವರೆಗೆ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಿಶೇಷವಾಗಿ ಗುಜರಾತ್, ಪಾಕಿಸ್ತಾನ ಮತ್ತು ಮಹಾರಾಷ್ಟ್ರದ ಕರಾವಳಿಯ ಸುತ್ತ ಮುತ್ತ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಸಲಹೆ ನೀಡಿದೆ.
ಇದನ್ನು ಓದಿ:ರಾಜ್ಯ ಸ್ಥಾನಮಾನ ಮರು ಸ್ಥಾಪನೆಗೆ ಒತ್ತಾಯಿಸಿ ಲಡಾಖ್ ಜನರಿಂದ ಲೇಹ್ TO ದೆಹಲಿ ಪಾದಯಾತ್ರೆ - Ladakh statehood demand