ಕರ್ನಾಟಕ

karnataka

ETV Bharat / bharat

ತಿರುಮಲದ ಶ್ರೀವಾಣಿ ದರ್ಶನ ಟಿಕೆಟ್‌ಗಾಗಿ ಮುಗಿ ಬಿದ್ದ ಜನ: ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರ ದಂಡು - SRIVANI TRUST DHARSHANAM TICKETS

ಶ್ರೀವಾಣಿ ಟ್ರಸ್ಟ್ ದರ್ಶನ ಟಿಕೆಟ್‌ಗಳನ್ನ ಖರೀದಿಸಲು ಭಕ್ತರು ಮುಗಿಬಿದ್ದಿದ್ದಾರೆ. ಟಿಟಿಡಿ 10,500ರೂ ಗೆ ಶ್ರೀವಾಣಿ ಟ್ರಸ್ಟ್ ದರ್ಶನ ಟಿಕೆಟ್‌ಗಳನ್ನು ನೀಡುತ್ತಿದೆ.

huge-demand-for-tirumala-srivani-trust-darshan-tickets-ttd-updates
ತಿರುಮಲ ಶ್ರೀವಾಣಿ ದರ್ಶನ ಟಿಕೆಟ್‌ ಮಾರಾಟ: ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರ ದಂಡು (ETV Bharat)

By ETV Bharat Karnataka Team

Published : Dec 23, 2024, 7:52 AM IST

ತಿರುಪತಿ, ಆಂಧ್ರಪ್ರದೇಶ: ಶ್ರೀವಾಣಿ ಟ್ರಸ್ಟ್ ದರ್ಶನ್ ಟಿಕೆಟ್​​​ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ತಿರುಮಲ ಗೋಕುಲಂ ಕಚೇರಿಯಲ್ಲಿ ಟಿಟಿಡಿ ಪ್ರತಿದಿನ 800 ಕೋಟಾ ಟಿಕೆಟ್‌ಗಳನ್ನು ನೀಡುತ್ತಿದ್ದು, ಇವುಗಳನ್ನು ಖರೀದಿಸಲು ಭಕ್ತರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕಳೆದ 10 ದಿನಗಳಿಂದ ಶ್ರೀವಾಣಿ ಟ್ರಸ್ಟ್ ಟಿಕೆಟ್ ವಿತರಣೆ ಪ್ರಕ್ರಿಯೆ ಮಧ್ಯಾಹ್ನ 1 ಗಂಟೆಗೆಲ್ಲ ಮುಗಿಯುತ್ತಿದೆ. ತಿರುಮಲ ತಿರುಪತಿ ದೇವಸ್ಥಾನ 10,500 ರೂ.ಗೆ ಶ್ರೀವಾಣಿ ಟ್ರಸ್ಟ್ ದರ್ಶನ ಟಿಕೆಟ್‌ಗಳನ್ನು ನೀಡುತ್ತಿದೆ. ಸಾಮಾನ್ಯವಾಗಿ ಟಿಕೆಟ್ ವಿತರಣೆ ಬೆಳಗ್ಗೆ 8:30 ಕ್ಕೆ ಪ್ರಾರಂಭವಾಗುತ್ತದೆ.

ಇವುಗಳಿಗಾಗಿ ಬೆಳಗ್ಗೆ 6 ಗಂಟೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಶ್ರೀವಾಣಿ ಟಿಕೆಟ್‌ ಬಯಸುವ ಭಕ್ತರ ಕುಟುಂಬದ ಪ್ರತಿಯೊಬ್ಬರೂ ಕೌಂಟರ್‌ಗೆ ತೆರಳಿ ಟಿಕೆಟ್ ಖರೀದಿಸಬೇಕು. ಚಿಕ್ಕ ಮಕ್ಕಳನ್ನು ಕೂಡ ಸರತಿ ಸಾಲಿನಲ್ಲಿ ನಿಲ್ಲಿಸಲು ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಶ್ರೀವಾಣಿ ಟ್ರಸ್ಟ್‌ನ ದರ್ಶನ ಟಿಕೆಟ್‌ಗೆ ಭಾರಿ ಬೇಡಿಕೆ ಹೆಚ್ಚಿದ್ದು, ಒಂದು ಗಂಟೆ ಕಳೆದರೂ ಟಿಕೆಟ್ ಇಲ್ಲದೇ ಇರುವುದರಿಂದ ಟಿಕೆಟ್ ಸಿಗದ ಭಕ್ತರು ನಿರಾಸೆಯಿಂದ ಹಿಂತಿರುಗುತ್ತಿದ್ದಾರೆ.

ತಿರುಮಲ ವಿಷನ್-2047: ಇದೇ ವೇಳೆ, ಟಿಟಿಡಿ ಶುದ್ಧೀಕರಣದ ಭಾಗವಾಗಿರುವ ಕೆಲಸ ಆರು ತಿಂಗಳಲ್ಲಿ ಶೇ 10ರಷ್ಟು ಮಾತ್ರ ಮಾಡಲಾಗಿದೆ ಎಂದು ಇವೊ ಶ್ಯಾಮಲಾ ರಾವ್ ಹೇಳಿದ್ದಾರೆ. ಸ್ಥಳೀಯ ಅನ್ನಮಯ್ಯ ಭವನದಲ್ಲಿ ಸ್ವರ್ಣಾಂಧ್ರ ವಿಷನ್-2047 ಹಾಗೂ ತಿರುಮಲ ವಿಷನ್-2047ರ ಪ್ರಕಾರ ದೇವಸ್ಥಾನದಿಂದ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಕುರಿತು ಇವೊ ಶ್ಯಾಮಲಾ ರಾವ್ ಹಾಗೂ ಹೆಚ್ಚುವರಿ ಇವೊ ವೆಂಕಯ್ಯ ಚೌಧರಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದರು. ಸಿಎಂ ಚಂದ್ರಬಾಬು ನಾಯ್ಡು ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಪವಿತ್ರ ಲಡ್ಡು ಪ್ರಸಾದದಲ್ಲಿ ತುಪ್ಪದ ಗುಣಮಟ್ಟ ಹೆಚ್ಚಿಸುವ ಕೆಲಸ ಮಾಡಿದ್ದೇನೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಭಗವಂತನಿಗೆ ಅರ್ಪಿಸುವ ಪ್ರಸಾದ ಮತ್ತು ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪ, ಶುದ್ಧ ಹಸುವಿನ ತುಪ್ಪ ಎಂದು ಅವರು ತಿಳಿಸಿದರು.

ಪವಿತ್ರತೆಯೇ ನಮ್ಮ ಗುರಿ: ವೆಂಕಮಾಂಬ ಎಂಬ ವಿತರಣಾ ಕೇಂದ್ರದಲ್ಲಿ ಭಕ್ತರಿಗೆ ನೀಡುವ ಅನ್ನಸಂತರ್ಪಣೆಯ ಗುಣಮಟ್ಟವನ್ನೂ ಹೆಚ್ಚಿಸಿದ್ದೇವೆ ಎಂದು ಇವೊ ಶ್ಯಾಮಲಾ ರಾವ್ ಹೇಳಿದರು. ಅಲ್ಲದೆ, ಭಕ್ತರು ತಿಮ್ಮಪ್ಪನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಿ ಸ್ವಚ್ಛತೆಗೆ ವಿಶೇಷ ಗಮನ ಹರಿಸಲಾಗಿದೆ. ವೆಂಕಟೇಶ್ವರನ ಸಾಲಕಟ್ಲ ಬ್ರಹ್ಮೋತ್ಸವ ಹಾಗೂ ಶ್ರೀ ಪದ್ಮಾವತಿ ಅಮ್ಮನವರ ಬ್ರಹ್ಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ತಿರುಮಲನ ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ಉತ್ತಮ ಅನುಭವ ನೀಡಲು ಟಿಟಿಡಿ ಬದ್ಧ ಎಂದು ಅವರು ವಾಗ್ದಾನ ಮಾಡಿದರು. ತಿರುಮಲದ ಆಧ್ಯಾತ್ಮಿಕತೆ ಮತ್ತು ಪಾವಿತ್ರ್ಯತೆಯನ್ನು ರಕ್ಷಿಸುವುದು ತಮ್ಮ ಮುಖ್ಯ ಗುರಿಯಾಗಿದೆ ಎಂದು ಅವರು ಇದೇವೇಳೆ ಬಹಿರಂಗಪಡಿಸಿದರು.

ಇದನ್ನು ಓದಿ:ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ಇಂದಿನಿಂದ 'ಮಾರ್ಚ್ 2025'ರ ದರ್ಶನ ಟಿಕೆಟ್ ರಿಲೀಸ್​

ABOUT THE AUTHOR

...view details