ಕರ್ನಾಟಕ

karnataka

ETV Bharat / bharat

ಚಟ್ನಿ ಪುಡಿಯೊಂದಿಗೆ ಇಡ್ಲಿ ತಿನ್ನೋಕೆ ಬಯಸುತ್ತೀರಾ?: ಇಲ್ಲಿದೆ ಅದ್ಭುತವಾದ ರೆಸಿಪಿ - idli podi recipe - IDLI PODI RECIPE

ಚಟ್ನಿ ಮತ್ತು ಮೆಣಸಿನ ಪುಡಿಯೊಂದಿಗೆ ಬಿಸಿ ಇಡ್ಲಿ ತಿನ್ನೋಕೆ ಯಾರು ತಾನೆ ಇಷ್ಟಪಡಲ್ಲ ಹೇಳಿ. ಇವತ್ತು ನಾವು ನಿಮಗೆ ರುಚಿಯಾದ ಚಟ್ನಿ ಪುಡಿ ತಯಾರಿಸೋದು ಹೇಗೆ? ಎಂಬುದನ್ನ ತಿಳಿಸಿಕೊಡುತ್ತೇವೆ.

CHUTNEY POWDER
ಚಟ್ನಿ ಪುಡಿ (ETV Bharat)

By ETV Bharat Karnataka Team

Published : Sep 28, 2024, 8:48 PM IST

ಹೈದರಾಬಾದ್​ : ಬಿಸಿ ಇಡ್ಲಿ, ಚಟ್ನಿ ಮತ್ತು ಮೆಣಸಿನ ಪುಡಿಯ ಸಂಯೋಜನೆ ಅತ್ಯಂತ ರುಚಿಕರ. ಹೀಗೆ ತಿನ್ನುವುದರಿಂದ ನಾವು ಒಂದಕ್ಕೆ ಎರಡು ಇಡ್ಲಿಗಳನ್ನು ಸೇರಿಸಿ ಹೆಚ್ಚಿಗೆ ತಿನ್ನುತ್ತೇವೆ. ಆದರೆ, ಟಿಫನ್ ಸೆಂಟರ್​ನಲ್ಲಿ ಮಾತ್ರ ಈ ಮೆಣಸಿನ ಚಟ್ನಿ ಪುಡಿ ಸೂಪರ್. ಮನೆಯಲ್ಲೇ ಮಾಡಿದರೆ ರುಚಿ ಬರುವುದಿಲ್ಲ. ಒಂದಿಷ್ಟು ಟಿಪ್ಸ್ ಪಾಲಿಸಿದರೆ ಸಾಕು ಅದ್ಭುತವಾದ ರುಚಿಯನ್ನು ಪಡೆಯಬಹುದು. ಹಾಗಾದರೆ ಅದನ್ನ ತಯಾರಿಸೋದು ಹೇಗೆಂದು ಇಳಿಯೋಣ.

ಚಟ್ನಿ ಪುಡಿ ಮಾಡುವ ವಿಧಾನ : ಬಿಸಿ ಇಡ್ಲಿಯನ್ನು ಚಟ್ನಿ ಮತ್ತು ಮೆಣಸಿನ ಕಾರ ಚಟ್ನಿ( ಕಾರ್​ ಚಟ್ನಿ) ಪುಡಿಯೊಂದಿಗೆ ತಿನ್ನಲು ಹಲವರು ಇಷ್ಟಪಡುತ್ತಾರೆ. ರಸ್ತೆ ಬದಿಯ ಟಿಫನ್ ಗಾಡಿಗಳಲ್ಲಿ ಮತ್ತು ಟಿಫಿನ್ ಸೆಂಟರ್‌ಗಳಲ್ಲಿ ಒಂದು ಚಮಚ ಮೆಣಸಿನ ಕಾರ್​ ಚಟ್ನಿ ಪುಡಿಯೊಂದಿಗೆ ಇಡ್ಲಿ ಸವಿಯಲು ಬಡಿಸುತ್ತಾರೆ. ಮೆಣಸಿನ ಕಾರಪುಡಿಯೊಂದಿಗೆ, ಚಟ್ನಿ ಸೇರಿಸಿ ಇಡ್ಲಿ ತಿಂದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.

ಅದೇನೇ ಇರಲಿ, ಈ ರೀತಿಯ ಮೆಣಸಿನ ಪುಡಿಯನ್ನು ಮನೆಯಲ್ಲೇ ತಯಾರು ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೆಲವರು ಏನು ಮಾಡಬೇಕು ಎಂದು ತೋಚದೇ ಹತಾಶರಾಗುತ್ತಾರೆ. ಅಂತಹವರಿಗಾಗಿಯೇ ಈ ಸೂಪರ್ ರೆಸಿಪಿ. ಇಲ್ಲಿ ಹೇಳಿದಂತೆ ಮೆಣಸಿನ ಪುಡಿ ತಯಾರಿಸಿದರೆ, ಅದ್ಬುತವಾಗಿರುತ್ತದೆ. ಮೇಲಾಗಿ ಇದನ್ನು ಹಲವು ದಿನಗಳವರೆಗೆ ಸಂಗ್ರಹಿಸಿಡಬಹುದು. ಮತ್ತು ಇದನ್ನು ಹೇಗೆ ಮಾಡುವುದು? ಎಂಬುದನ್ನ ಈಗ ನೋಡೋಣ.

ಬೇಕಾಗುವ ಸಾಮಗ್ರಿಗಳು :

  • ಒಂದು ಕಪ್ ಕಡಲೆಬೇಳೆ
  • ಉದ್ದಿನಬೇಳೆ - ಅರ್ಧಕಪ್
  • ಬ್ಯಾಡಗಿ ಮಿರ್ಚಿ-8
  • ಕರಿಮೆಣಸು - 8
  • ಎಳ್ಳು ಬೀಜಗಳು - 2 ಟೇಬಲ್​ ಸ್ಪೂನ್
  • ಹುರಿಗಡಲೆ - 3 ಚಮಚ
  • ಕರಿಬೇವಿನ ಎಲೆಗಳು -2
  • ಜೀರಿಗೆ-2 ಚಿಟಿಕೆ
  • ಬೆಳ್ಳುಳ್ಳಿ ಎಸಳು - 12

ತಯಾರಿಕೆಯ ವಿಧಾನ :

  • ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಕಡಲೆಬೇಳೆಯನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಕಡಲೆಯನ್ನು ಹುರಿದ ನಂತರ, ಅವುಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ಹುರಿಗಡಲೆ ಹಾಕಿ ಡೀಪ್ ಫ್ರೈ ಮಾಡಿ. ಬೇಳೆಕಾಳುಗಳನ್ನು ಹೀಗೆ ಬೇರೆ ಬೇರೆಯಾಗಿ ಹುರಿಯಿರಿ. ಬೇಳೆಕಾಳುಗಳನ್ನು ಕಡಿಮೆ ಉರಿಯಲ್ಲಿ ಹುರಿಯಲು ಮಾತ್ರ ಮರೆಯದಿರಿ. ಈ ರೀತಿ ಹುರಿದರೆ ಮಾತ್ರ ಪುಡಿ ತುಂಬಾ ರುಚಿಯಾಗಿರುತ್ತದೆ.
  • ಅದೇ ಬಾಣಲೆಯಲ್ಲಿ ಸ್ವಲ್ಪ ಎಳ್ಳು ಎಣ್ಣೆ ಹಾಕಿ ಬ್ಯಾಡಗಿ ಮಿರ್ಚಿ ಮತ್ತು ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ. ನಿಮ್ಮ ಬಳಿ ಬ್ಯಾಡಗಿ ಮಿರ್ಚಿ ಇಲ್ಲದಿದ್ದರೆ 15 ಮಸಾಲೆ ಕರಿಮೆಣಸು ಸೇರಿಸಿ ಮತ್ತು ಫ್ರೈ ಮಾಡಿ.
  • ಮೆಣಸಿನಕಾಯಿ ಹುರಿದಾದ ಮೇಲೆ ಎಳ್ಳು ಸೇರಿಸಿ ಮತ್ತು ಮಿಶ್ರಣ ಮಾಡಿ. ಎಳ್ಳು ಹುರಿದ ನಂತರ ಉದ್ದಿನ ಬೇಳೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ತಟ್ಟೆಯಲ್ಲಿ ತೆಗೆದುಕೊಳ್ಳಿ.
  • ಉದ್ದಿನಬೇಳೆ ತಣ್ಣಗಾದ ನಂತರ ಮಿಕ್ಸಿಂಗ್ ಜಾರ್​ ತೆಗೆದುಕೊಂಡು ಬೆಳ್ಳುಳ್ಳಿ ಎಸಳು ಮತ್ತು ಇಂಗು ಹಾಕಿ ಪೇಸ್ಟ್​ನಂತೆ ರುಬ್ಬಿಕೊಳ್ಳಿ. ಹೀಗೆ ತಯಾರಿಸಿದರೆ ಚಟ್ನಿ ಪುಡಿ ರೆಡಿ.
  • ಈ ರೀತಿ ಮಾಡಿದರೆ ಇಡ್ಲಿ ಪುಡಿಯನ್ನು ಕನಿಷ್ಠ ಎರಡು ತಿಂಗಳವರೆಗೆ ಸಂಗ್ರಹಿಸಬಹುದು. ಬಿಸಿ ಬಿಸಿಯಾದ ಇಡ್ಲಿಗಳಿಗೆ ಸ್ವಲ್ಪ ತುಪ್ಪ ಹಾಕಿ ಈ ಪುಡಿಯೊಂದಿಗೆ ತಿನ್ನಿ. ಇಷ್ಟವಾದಲ್ಲಿ ನೀವೂ ಈ ಪೌಡರ್ ಟ್ರೈ ಮಾಡಬಹುದು.

ಇದನ್ನೂ ಓದಿ :ಅದ್ಭುತ ರುಚಿಯ ಮೈಸೂರು ಸ್ಟೈಲ್​ನ ಟೊಮೆಟೊ ರಸಂ ರೆಡಿ ಮಾಡೋದು ಹೇಗೆ ಗೊತ್ತಾ? - Mysuru Tomato Rasam

ABOUT THE AUTHOR

...view details