ಹೈದರಾಬಾದ್:2024ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ವೋಟಿಂಗ್ ಸ್ಲಿಪ್ ಎಂದರೇನು?: ಚುನಾವಣಾ ಆಯೋಗದಿಂದ ಮತದಾನ ಮಾಡಲು, ಮತದಾನದ ಚೀಟಿ ನೀಡಲಾಗುತ್ತದೆ. ಈ ಚೀಟಿಯಲ್ಲಿ ಹೆಸರು, ವಯಸ್ಸು, ಲಿಂಗ, ವಿಧಾನಸಭಾ ಕ್ಷೇತ್ರ, ಮತಗಟ್ಟೆ ಸ್ಥಳ, ಕೊಠಡಿ ಸಂಖ್ಯೆ, ಮತದಾನದ ದಿನಾಂಕ ಮತ್ತು ಮತದಾನದ ಸಮಯದಂತಹ ಮಾಹಿತಿಯನ್ನು ನೀಡಲಾಗಿರುತ್ತದೆ. ಈ ಚೀಟಿ ಇದ್ದರೆ ಸುಲಭವಾಗಿ ನಿಮ್ಮ ಮತಗಟ್ಟೆ ಯಾವುದು ಎಂದು ಮೊದಲೇ ಗುರುತಿಸಿ, ಮತದಾನ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಸ್ಮಾರ್ಟ್‌ಫೋನ್ ಬಳಸುವ ಮೂಲಕ ನೀವು ಆನ್‌ಲೈನ್‌ನಲ್ಲಿ ಮತದಾನದ ಸ್ಲಿಪ್‌ಗಳನ್ನು ಹೇಗೆ ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ
- ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್‌ಗೆ ಹೋಗಿ 'ವೋಟರ್ ಹೆಲ್ಪ್‌ಲೈನ್' ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
- 'E-EPIC' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ನೋಂದಾಯಿತ ಸೆಲ್ ಫೋನ್ ಸಂಖ್ಯೆ, ಪಾಸ್‌ವರ್ಡ್ ಮತ್ತು OTP ಬಳಸಿ ಲಾಗ್ ಇನ್ ಆಗಿ
- EPIC ಸಂಖ್ಯೆಯನ್ನು ಹಾಕಿ ಆಗ ನಿಮ್ಮ ಸಂಪೂರ್ಣ ಮಾಹಿತಿ ಅದರಲ್ಲಿ ಬರುತ್ತದೆ.
- ಡಾಕ್ಯುಮೆಂಟ್ ತೆರೆಯಲು ಮತ್ತೊಮ್ಮೆ OTP ಹಾಕಿ