ಕವರ್ಧಾ (ಛತ್ತೀಸ್ಗಢ) : ಟೆಂಡು ಎಲೆಗಳನ್ನು ಕಿತ್ತು ಕಾಡಿನಿಂದ ಹಿಂದಿರುಗುತ್ತಿದ್ದ 17 ಮಹಿಳೆಯರು ಸೇರಿ 19 ಬೈಗಾ ಆದಿವಾಸಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಕವರ್ಧಾದಲ್ಲಿ ನಡೆದಿದೆ. ಈ ವೇಳೆ, 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ದಾರಿ ಮಧ್ಯೆ ಪಿಕಪ್ ವಾಹನ ನಿಯಂತ್ರಣ ತಪ್ಪಿ 20 ಅಡಿ ಹೊಂಡಕ್ಕೆ ಬಿದ್ದು ಪಲ್ಟಿಯಾಗಿದೆ. ವಾಹನದಲ್ಲಿ ಸುಮಾರು 35 ರಿಂದ 40 ಮಂದಿ ಇದ್ದರು. ಇವರೆಲ್ಲರೂ ಸೆಮ್ಹಾರ ಗ್ರಾಮದ ನಿವಾಸಿಗಳು ಎಂಬುದಾಗಿ ತಿಳಿದು ಬಂದಿದೆ.
18ಕ್ಕೂ ಹೆಚ್ಚು ಬೈಗಾ ಆದಿವಾಸಿಗಳ ಸಾವು : ಈ ಘಟನೆಯು ಕವರ್ಧಾದ ಕುಕ್ದೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಹಪಾನಿ ಗ್ರಾಮದ ಬಳಿ ನಡೆದಿದೆ. ಘಟನೆ ಬಳಿಕ ಸ್ಥಳದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತಂಡ ಹಾಗೂ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಏತನ್ಮಧ್ಯೆ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.