ಕರ್ನಾಟಕ

karnataka

ETV Bharat / bharat

ಪುಣೆಯಲ್ಲಿ ಹೆಲಿಕಾಪ್ಟರ್​ ಪತನ: ಇಂಜಿನಿಯರ್, ಇಬ್ಬರು ಪೈಲಟ್​ಗಳು ಸಾವು - HELICOPTER CRASH

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಆಕ್ಸ್‌ಫರ್ಡ್ ಗಾಲ್ಫ್ ಕೋರ್ಸ್‌ಗೆ ಸಮೀಪದ ಬವ್ಧಾನ್​ನ ಗುಡ್ಡಗಾಡು ಪ್ರದೇಶದ ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

helicopter crashed
ಹೆಲಿಕಾಪ್ಟರ್​ ಪತನ (ETV Bharat)

By ETV Bharat Karnataka Team

Published : Oct 2, 2024, 9:12 AM IST

ಪುಣೆ (ಮಹಾರಾಷ್ಟ್ರ): ಪುಣೆಯ ಬವ್ಧಾನ್ ಗುಡ್ಡಗಾಡು ಪ್ರದೇಶದಲ್ಲಿ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿದೆ. ಈ ಅವಘಡದಲ್ಲಿ ಓರ್ವ ಇಂಜಿನಿಯರ್ ಹಾಗೂ ಇಬ್ಬರು ಪೈಲಟ್​ಗಳು ಸಾವನ್ನಪ್ಪಿದ್ದಾರೆ. ಪೊಲೀಸರು, ಇತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪುಣೆ ನಗರ ಪ್ರದೇಶದಲ್ಲಿ ಮಂಜು ಕವಿದಿದ್ದು, ಈ ಹಿನ್ನೆಲೆ ಹೆಲಿಕಾಪ್ಟರ್ ಪತನಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆಕ್ಸ್‌ಫರ್ಡ್ ಗಾಲ್ಫ್ ಕ್ಲಬ್‌ನಲ್ಲಿರುವ ಹೆಲಿಪ್ಯಾಡ್‌ನಿಂದ ಟೇಕಾಫ್ ಆದ ನಂತರ ಹೆಲಿಕಾಪ್ಟರ್ ಪತನಗೊಂಡಿದೆ. ಬೆಳಗ್ಗೆ 6.45ರ ಸುಮಾರಿಗೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ನಂತರ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪುಣೆಯಲ್ಲಿ ಹೆಲಿಕಾಪ್ಟರ್​ ಪತನ (ETV Bharat)

ದೆಹಲಿ ಮೂಲದ ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಇದಾಗಿದೆ. ಆಕ್ಸ್‌ಫರ್ಡ್ ಗಾಲ್ಫ್ ಕೋರ್ಸ್ ಹೆಲಿಪ್ಯಾಡ್‌ನಿಂದ ಹೊರಟು ಮುಂಬೈನ ಜುಹುಗೆ ತೆರಳುತ್ತಿತ್ತು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಹೆಲಿಕಾಪ್ಟರ್ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಇಲಾಖೆ ವಾಹನಗಳೊಂದಿಗೆ ಪೊಲೀಸ್​ ತಂಡಗಳು ಸ್ಥಳಕ್ಕೆ ತಲುಪಿವೆ" ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಕಮಿಷನರ್ ವಿನಯ್ ಕುಮಾರ್ ಚೌಬೆ ಮಾಹಿತಿ ನೀಡಿದ್ದಾರೆ.

ವಿಮಾನಗಳಿಗಿಂತ ಹೆಲಿಕಾಪ್ಟರ್​ ಅಪಘಾತವೇ ಹೆಚ್ಚು:ಹಿಂದಿನಿಂದಲೂ ಸುರಕ್ಷತಾ ಮಾನದಂಡಗಳನ್ನು ಸುಧಾರಿಸಿದ್ದರೂ ಸಹ ಹೆಲಿಕಾಪ್ಟರ್ ಅಪಘಾತಗಳು ಸಂಭವಿಸುತ್ತಲೇ ಇವೆ. ಅದರಲ್ಲೂ, ವಿಮಾನಗಳಿಗಿಂತ ಹೆಲಿಕಾಪ್ಟರ್​ಗಳೇ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿವೆ. ವರದಿಗಳ ಪ್ರಕಾರ, ಹೆಲಿಕಾಪ್ಟರ್‌ಗಳ ಅಪಘಾತದ ಪ್ರಮಾಣವು ಶೇಕಡಾ 9.84ರಷ್ಟಿದ್ದರೆ, ಶೇ.7.26ರಷ್ಟು ವಿಮಾನ ಅಪಘಾತಗಳು ಸಂಭವಿಸಿವೆ.

ವಿನ್ಯಾಸದಲ್ಲಿ ವಿಮಾನಗಳಿಗೆ ಹೋಲಿಸಿದರೆ ಹೆಲಿಕಾಪ್ಟರ್‌ಗಳು ಅನೇಕ ವಿಶಿಷ್ಟ ಸಾಮರ್ಥ್ಯಗಳನ್ನು ಹೊಂದಿವೆ. ಹೆಲಿಕಾಪ್ಟರ್‌ಗೆ ವಿಮಾನದಂತೆ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಮಾಡಲು ರನ್‌ವೇ ಅಗತ್ಯವಿಲ್ಲ. ಹೆಲಿಕಾಪ್ಟರ್ ನೇರವಾಗಿ ಗಾಳಿಯಲ್ಲಿ ಮೇಲೇರಬಹುದು. ಅದೇ ರೀತಿಯಲ್ಲಿ ಲ್ಯಾಂಡಿಂಗ್​ ಮಾಡಬಹುದು. ಹೆಲಿಕಾಪ್ಟರ್ ಒಂದೇ ಸ್ಥಳದಲ್ಲಿ ದೀರ್ಘಕಾಲ ಉಳಿಯಬಹುದು. ಕಡಿಮೆ ಎತ್ತರದಿಂದಲೂ ಹಾರಬಲ್ಲದು. ಆದರೆ, ಸ್ವಲ್ಪ ಎಡವಿದರೂ ಹೆಲಿಕಾಪ್ಟರ್ ಅಪಘಾತದ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಓದಿ:ಕಲಬುರಗಿ: ಕಲುಷಿತ ನೀರು ಸೇವಿಸಿ 80 ಜನ ಅಸ್ವಸ್ಥ, ಪಿಡಿಒ ಅಮಾನತು - PDO Suspend

ABOUT THE AUTHOR

...view details