ಚಾಮರಾಜನಗರ: ಪೋನ್ ಮೂಲಕ ಪರಿಚಯವಾಗಿದ್ದ ಅಪ್ರಾಪ್ತೆ ಅಪಹರಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಯುವಕನಿಗೆ ಐಪಿಸಿ ಕಲಂ 366ರ ಪ್ರಕಾರ 3 ವರ್ಷ, ಪೋಕ್ಸೋ ಕಾಯ್ದೆ ಕಲಂ 12ರ ಪ್ರಕಾರ 1 ವರ್ಷ ಶಿಕ್ಷೆ ವಿಧಿಸಿ ನಗರದ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿ ಎಸ್ಸಿ ನ್ಯಾಯಾಲಯ ಆದೇಶಿಸಿದೆ.
ಹಿರಿಯೂರು ತಾಲೂಕಿನ 19 ವರ್ಷದ ಶಿಕ್ಷೆಗೊಳಗಾದ ಅಪರಾಧಿ. ಈತ ಫೋನ್ ಮೂಲಕ ಪರಿಚಯವಾಗಿದ್ದ ಅಪ್ರಾಪ್ತೆ ಅಪಹರಿಸಿ ಬಸ್ನಲ್ಲಿ ಕರೆದೊಯ್ಯುವಾಗ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಸಂಬಂಧ ಚಾಮರಾಜನಗರ ಮಹಿಳಾ ಠಾಣೆಯಲ್ಲಿ 2020ರಲ್ಲಿ ಪ್ರಕರಣ ದಾಖಲಾಗಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಸಾಕ್ಷ್ಯಾಧಾರಗಳಿಂದ ಯುವಕನ ಅಪರಾಧ ಸಾಬೀತಾದ ಹಿನ್ನೆಲೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾ. ಎಸ್.ಜೆ.ಕೃಷ್ಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.
ಇದನ್ನು ಓದಿ: ಕೇರಳ ಪೊಲೀಸರಿಂದ ಶಬರಿಮಲೆ ಸಂಪ್ರದಾಯಕ್ಕೆ ಧಕ್ಕೆ ಆರೋಪ: ವಿವಾದ ಸೃಷ್ಟಿಸಿದ ವೈರಲ್ ಫೋಟೋ