ಜೈಪುರ್: ಫಾಸ್ಟ್ ಫುಡ್ ಮತ್ತು ಜಂಕ್ ಆಹಾರಗಳಿಂದ ಮಕ್ಕಳನ್ನು ದೂರವಿಡಬೇಕು ಎಂದು ನಿರ್ಧರಿಸಿರುವ ರಾಜಸ್ಥಾನ ಶಿಕ್ಷಣ ಇಲಾಖೆ ಇದಕ್ಕಾಗಿ ಹೊಸ ಹೆಜ್ಜೆಯನ್ನು ಮುಂದಿಟ್ಟಿದೆ. ಶಾಲೆಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮ ನಡೆಸುವ ಜೊತೆಗೆ ಆರೋಗ್ಯ ಕ್ಲಬ್ಗಳನ್ನು ಆಯೋಜಿಸುತ್ತಿದೆ. ಈ ಹೆಲ್ತ್ ಕ್ಲಬ್ನಲ್ಲಿ ಮಕ್ಕಳಿಗೆ ಫಾಸ್ಟ್ ಫುಡ್ಗಳು ಹೇಗೆ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತವೆ ಎಂದು ತಿಳಿಸುವ ಪ್ರಯತ್ನ ನಡೆಸಿದೆ.
ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ಗಳು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಪೋಷಕರು ಕೂಡ ಈ ಬಗ್ಗೆ ಅರಿವು ಹೊಂದಿದ್ದರೂ, ಮಕ್ಕಳನ್ನು ಇದರಿಂದ ದೂರವಿಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ಹೊರಲು ಮುಂದಾಗಿದೆ.
ಸರ್ಕಾರದಿಂದ ಶಾಲೆಗಳಲ್ಲಿ ಹೆಲ್ತ್ ಕ್ಲಬ್ ರಚಿಸಲಾಗಿದ್ದು, ಇದರಲ್ಲಿ ಮಕ್ಕಳಿಗೆ ಆಹಾರ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸುವ ಯತ್ನ ನಡೆಸಲಾಗಿದೆ. ಹಾಗೇ ಮಾನಸಿಕವಾಗಿ ಮಕ್ಕಳನ್ನು ಇಂತಹ ಆರೋಗ್ಯದಿಂದ ದೂರವಿರುವ ಪ್ರಯತ್ನ ನಡೆಸಿದೆ. ಇಲಾಖೆ ಆದೇಶದ ಪ್ರಕಾರ, ಶಾಲೆಗಳಲ್ಲಿರುವ ಆರೋಗ್ಯ ಕ್ಲಬ್ಗಳಲ್ಲಿ ಮಕ್ಕಳು ತರುವ ಆಹಾರದ ಬಗ್ಗೆ ಶಿಕ್ಷಕರು ಮತ್ತು ಸಹಪಾಠಿಗಳಿಗೆ ತಿಳಿಹೇಳುವ ಪ್ರಯತ್ನ ನಡೆಸಲಾಗಿದೆ.
ಹೆಲ್ತ್ ಕ್ಲಬ್ ಕಾರ್ಯ :
- ಪ್ರತಿಯೊಂದು ಹೆಲ್ತ್ ಕ್ಲಬ್ನಲ್ಲಿ 15 ಸದಸ್ಯರಿರುತ್ತಾರೆ.
- ಇದರಲ್ಲಿ ಓರ್ವ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ಮಾಡಲಾಗುವುದು.
- ದೈಹಿಕ ಶಿಕ್ಷಕರು ಮತ್ತು ಸಮಾಜ ವಿಜ್ಞಾನ ಶಿಕ್ಷಕರು ಈ ಕ್ಲಬ್ ಸದಸ್ಯರಾಗಿರುತ್ತಾರೆ.
- ಪ್ರತಿಯೊಂದು ತರಗತಿಯಿಂದ ಓರ್ವ ವಿದ್ಯಾರ್ಥಿ ಕ್ಲಬ್ ಪ್ರತಿನಿಧಿಸುತ್ತಾರೆ.
- ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ನಡೆಸಲಾಗುತ್ತದೆ.
- ಸಭೆಯಲ್ಲಿ ಆದ ಕೆಲಸ ಮತ್ತು ಮುಂದಿನ ಕೆಲಸದ ಸಿದ್ಧತೆಗಳ ಕುರಿತು ಕಾರ್ಯತಂತ್ರ ರೂಪಿಸಲಾಗುವುದು
- ಆಹಾರ ಸುರಕ್ಷತೆ ಮತ್ತು ಸರಿಯಾದ ಡಯಟ್ ಮೇಲೆ ಗಮನ ಹರಿಸಲಾಗುತ್ತದೆ
- ಶಾಲೆಯನ್ನು ತಂಬಾಕು ಮುಕ್ತಾವಾಗಿಸುವ ನಿಟ್ಟಿನಲ್ಲಿ ಪ್ರಯತ್ನ
- ಈ ಮೂಲಕ ಮಕ್ಕಳಿಗೆ ಫಾಸ್ಟ್ ಫುಡ್ನಿಂದ ದೂರುವಿರುವಂತೆ ಜಾಗೃತಿ ಮೂಡಿಸಲಾಗುವುದು
- ಆರೋಗ್ಯಕರ ತಿಂಡಿಗಳ ಬಗ್ಗೆ ಮಕ್ಕಳ ಗಮನ ಕೇಂದ್ರಿಕರಿಸುವುದು.
ಈ ಕುರಿತು ಮಾತನಾಡಿದ ಪ್ರಾಥಮಿಕ ಶಾಲಾ ನಿರ್ದೇಶಕರಾದ ಸೀತಾರಾಮ್ ಜಾಟ್, ಆರೋಗ್ಯ ಕ್ಲಬ್ಗಳು ಮಕ್ಕಳಲ್ಲಿ ಆರೋಗ್ಯಕರ ಆಹಾರದ ಕುರಿತು ಅರಿವು ಮೂಡಿಸುತ್ತವೆ. ಮಕ್ಕಳು ಶಾಲಾ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೊಂದುತ್ತಾರೆ. ಇದರಿಂದ ಅವರನ್ನು ಹಾಗೂ ಕುಟುಂಬದವರನ್ನು ಆರೋಗ್ಯಕರವಾಗಿಸುತ್ತಾರೆ. ಕುಟುಂಬಗಳು ಕೂಡ ಈ ಆರೋಗ್ಯ ಕ್ಲಬ್ ಬಗ್ಗೆ ಮಾಹಿತಿ ಹೊಂದುವಂತೆ ಪ್ರೇರೇಪಿಸಲಾಗುವುದು. ಈ ಪ್ರಯತ್ನ ಮಕ್ಕಳನ್ನು ದುಶ್ಚಟಗಳಿಂದ ದೂರುವಿರಿಸಲು ಸಹಾಯ ಮಾಡುತ್ತದೆ.