ರಾಯ್‌ಬರೇಲಿ(ಉತ್ತರ ಪ್ರದೇಶ):ನನ್ನ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ವಾರಣಾಸಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ 2-3 ಲಕ್ಷ ಮತಗಳ ಅಂತರದಿಂದ ಸೋಲುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಇಂದು ರಾಯ್‌ಬರೇಲಿಯಲ್ಲಿ ಕೃತಜ್ಞತಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಬಲ ಕಡಿಮೆ ಮಾಡಲು 'ಇಂಡಿಯಾ' ಮೈತ್ರಿಕೂಟವು ರಾಯ್‌ಬರೇಲಿ, ಅಮೇಥಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಹೋರಾಡಿದವು. ಚುನಾವಣಾ ಫಲಿತಾಂಶದ ಬಗ್ಗೆ ನಾನಾಗಲೀ ಮತ್ತು ಪಕ್ಷದ ಇತರ ಸಂಸದರಾಗಲೀ ಅಹಂಕಾರ ಪಡುವುದಿಲ್ಲ. ನಾವು ಜನಸಾಮಾನ್ಯರಿಗಾಗಿ ಕೆಲಸ ಮಾಡುತ್ತೇವೆ ಎಂದರು.