ಕರ್ನಾಟಕ

karnataka

ತಮಿಳುನಾಡು ಸಿಎಂಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ IAS​ ಅಧಿಕಾರಿಯ ಪತ್ನಿ - IAS Officers Wife Commits Suicide

By ETV Bharat Karnataka Team

Published : Jul 24, 2024, 2:25 PM IST

ಐಎಎಸ್​ ಅಧಿಕಾರಿ ರಂಜೀತ್​ ಕುಮಾರ್​ ಜೆ ಎಂಬವರ ಪತ್ನಿ ತಮಿಳುನಾಡು ಸಿಎಂಗೆ ಪತ್ರ ಬರೆದು ಶನಿವಾರ ಸರ್ಕಾರಿ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Gujarat cadre IAS officers estranged wife who died by suicide
ಸಾಂದರ್ಭಿಕ ಚಿತ್ರ (IANS)

ಚೆನ್ನೈ: ಗುಜರಾತ್​ ಕೇಡರ್​ನ ಐಎಎಸ್​ ಅಧಿಕಾರಿಯ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ತಮಿಳುನಾಡು ಸಿಎಂಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ತಮ್ಮ ವಿರುದ್ಧ ಮಾಡಲಾದ ಸುಳ್ಳು ಆರೋಪಗಳಿಂದ ತೀವ್ರ ಸಂಕಟ ಅನುಭವಿಸಿದ್ದಾಗಿ ವಿವರಿಸಿದ್ದಾರೆ ಎಂದು ಗಾಂಧಿನಗರ ಜಿಲ್ಲಾ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದರು.

ಸುರ್ಯಾ(45) ಸಾವನ್ನಪ್ಪಿದ ಮಹಿಳೆ. ಶನಿವಾರ ತಮ್ಮ ಪತಿ ಐಎಎಸ್​ ಅಧಿಕಾರಿ ರಂಜೀತ್​ ಕುಮಾರ್​ ಜೆ ಅವರ ಸರ್ಕಾರಿ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಜೀತ್​ ಕುಮಾರ್​ ಗುಜರಾತ್​ನ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಮಿಳುನಾಡು ಸಿಎಂಗೆ ಉದ್ದೇಶಿಸಿ ತಮಿಳಿನಲ್ಲಿ ಬರೆದ ಪತ್ರದಲ್ಲಿ, ತಮ್ಮ ವಿರುದ್ಧ ಇರುವ ಎರಡು ಪ್ರಕರಣದಲ್ಲಿ ನಿರ್ದೋಷಿ ಎಂದು ವಿವರಣೆ ನೀಡಿದ್ದಾರೆ. ಅಲ್ಲದೇ, ತಮ್ಮ ಪತಿ ಉತ್ತಮ ವ್ಯಕ್ತಿಯಾಗಿದ್ದು, ನಾನು ಅವರನ್ನು ತೊರೆದ ಬಳಿಕವೂ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

'ರಾಜಾ ಎಂಬ ಆರೋಪಿಯ ಕ್ರಿಮಿನಲ್ ಹಿನ್ನೆಲೆಯ ಅರಿವಿಲ್ಲದೇ ನಾನು ಆತನೊಂದಿಗೆ ಉದ್ಯಮಕ್ಕೆ ಮುಂದಾಗಿದ್ದೆ. ಕಡೆಗೆ ಬೇರೆ ಆಯ್ಕೆ ಇಲ್ಲದೇ ಆತನ ಮೋಸದ ಸುಳಿಯಲ್ಲಿ ಸಿಲುಕಿದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಫರ್ನಿಚರ್​ ಗೋದಾಮಿಗೆ ಬೆಂಕಿ; ತಂದೆ-ಮಗಳು ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ABOUT THE AUTHOR

...view details