ಚೆನ್ನೈ, ತಮಿಳುನಾಡು: ಮುಖ್ಯಮಂತ್ರಿ ಎಂ.ಕೆ. ತಮಿಳುನಾಡಿನಲ್ಲಿ ಕೈಗಾರಿಕಾ ಸಂಪನ್ಮೂಲಗಳನ್ನು ಹೆಚ್ಚಿಸಲು ಇನ್ನಿಲ್ಲದ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರಣೆ ಮಾಡುವ ಸಲುವಾಗಿ ಸ್ಟಾಲಿನ್ ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಸೆ.28ರಂದು ರಾಣಿಪೇಟೆ ಪಣಂಪಕ್ಕಂನಲ್ಲಿ ಟಾಟಾದ ಪ್ರೀಮಿಯಂ ಕಾರು ಕಂಪನಿ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ ಆರಂಭವಾಗಲಿದೆ. ಇದಕ್ಕೆ ಸ್ವತಃ ಸಿಎಂ ಎಂ ಕೆ ಸ್ಟಾಲಿನ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
🚨MOUs to Groundbreaking #TamilNadu CM Mk Stalin to lay the foundation stone for 9,000 Crs Tata-JLR Manufacturing Plant & the 400 Crs leather park at Ranipet on Sept 28. 🔹25k-30k new jobs to be created
— Chennai Updates (@UpdatesChennai) September 16, 2024
🔹1,200+ acres with 470 for JLR Project
🔹Basic infra work underway pic.twitter.com/rSXDFL4EfR
ಇದಕ್ಕೂ ಮುನ್ನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸಮ್ಮುಖದಲ್ಲಿ ಮಾರ್ಚ್ 13 (13.03.2024) ರಂದು ಟಾಟಾ ಮೋಟಾರ್ಸ್ ಗ್ರೂಪ್ ಮತ್ತು ಸರ್ಕಾರದ ನಡುವೆ ಕೈಗಾರಿಕಾ ಇಲಾಖೆಯ ಪರವಾಗಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿತ್ತು.
5 ಸಾವಿರ ಜನರಿಗೆ ನೇರ ಉದ್ಯೋಗ: ಈ ಹಿನ್ನೆಲೆಯಲ್ಲಿ ಟಾಟಾ ಮೋಟರ್‌ನ ವಾಹನ ತಯಾರಿಕಾ ಘಟಕವು ರಾಣಿಪೇಟ್ ಜಿಲ್ಲೆಯ ಸಿಪ್‌ಕಾಟ್ ಸಂಕೀರ್ಣದಲ್ಲಿ ಸ್ಥಾಪನೆಯಾಗಲಿದೆ ಎಂದು ಹೇಳಲಾಗಿದೆ. ಸದ್ಯ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ದಿನಾಂಕವನ್ನು ಕೈಗಾರಿಕೆ ಅಧಿಕಾರಿಗಳು ಪ್ರಕಟಿಸಿದ್ದಾರೆ. ಇದರಿಂದ 5,000 ಜನರಿಗೆ ನೇರವಾಗಿ ಮತ್ತು 15,000 ಕ್ಕೂ ಹೆಚ್ಚು ಜನರಿಗೆ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಈ ವಿಚಾರವನ್ನು ತಮಿಳುನಾಡು ಕೈಗಾರಿಕಾ ಸಚಿವ ಟಿಆರ್ ಪಿ ರಾಜಾ ತಮ್ಮ ಎಕ್ಸ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.
ಟಾಟಾದ ಪ್ರೀಮಿಯಂ ಕಾರ್ ಫ್ಯಾಕ್ಟರಿ: ಟಾಟಾ ಮೋಟಾರ್ಸ್ ವಿದೇಶಿ ಜಾಗ್ವಾರ್ ಲ್ಯಾಂಡ್ ರೋವರ್ ಶ್ರೇಣಿಯ ಪ್ರೀಮಿಯಂ ಕಾರುಗಳನ್ನು ಈಗ ತಮಿಳುನಾಡಿನಲ್ಲಿ ಉತ್ಪಾದಿಸಲಿದೆ. ಪ್ರಮುಖವಾಗಿ ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಹಲವು ಗಣ್ಯರು ಬಳಸುವ ರೇಂಜ್ ರೋವರ್, ಲ್ಯಾಂಡ್ ರೋವರ್, ಡಿಫೆಂಡರ್, ಜಾಗ್ವಾರ್ ಸೆಡಾನ್ ಮಾದರಿಗಳು ನೂತನ ರಾಣಿಪೇಟೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗಲಿವೆ. ಇದರಿಂದ ವಿದ್ಯಾವಂತ ಪದವೀಧರರಿಗೆ ಉದ್ಯೋಗಾವಕಾಶಗಳೂ ದೊರೆಯಲಿವೆ.
ವರ್ಷಕ್ಕೆ 2 ಲಕ್ಷ ಜಾಗ್ವಾರ್, ಲ್ಯಾಂಡ್‌ರೋವರ್ ಕಾರು: ಅಲ್ಲದೇ, ಹೊಸ ಕಾರ್ಖಾನೆಯಲ್ಲಿ ಆರಂಭದಲ್ಲಿ ವರ್ಷಕ್ಕೆ 2 ಲಕ್ಷ ಜಾಗ್ವಾರ್, ಲ್ಯಾಂಡ್ ರೋವರ್ ಕಾರುಗಳನ್ನು ಉತ್ಪಾದಿಸಲು ಟಾಟಾ ಮೋಟಾರ್ಸ್ ಉದ್ದೇಶಿಸಿದೆ. ಕ್ರಮೇಣ ಉತ್ಪಾದನೆ ಹೆಚ್ಚಿಸುವುದು ಕಂಪನಿಯ ಗುರಿಯಾಗಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಪಣಪ್ಪಕ್ಕಂನ ರಾಣಿಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಕಾರ್ಖಾನೆಯಲ್ಲಿ ಕಂಪನಿಯು ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳು ಸಹ ತಯಾರಾಗಲಿವೆ ಎಂಬ ಸುದ್ದಿಗಳು ಹೊರ ಬಿದ್ದಿವೆ. ಹೊಸದಾಗಿ ಅಭಿವೃದ್ಧಿಗೊಂಡಿರುವ ರಾಣಿಪೇಟ್ ಜಿಲ್ಲೆಯ ಹೊಸ ಟಾಟಾ ಕಾರ್ಖಾನೆಯು ಅಲ್ಲಿನ ಜನರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಯೋಜನ ನೀಡುವುದಂತೂ ಸತ್ಯ.
ಇದನ್ನು ಓದಿ: ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಇನ್ಫಿನಿಕ್ಸ್ ಹೊಸ ಟ್ಯಾಬ್ಲೆಟ್! - Infinix XPad LTE launched