ETV Bharat / state

ಮಕ್ಕಳ ಮಡಿಲು ಸೇರಿದ 'ಸಾಕಮ್ಮ': ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ ಬಳ್ಳಾರಿ - SAKAMMA REUNITED WITH HER FAMILY

ಸುಮಾರು 25 ವರ್ಷಗಳ ಹಿಂದೆ ತನ್ನ ಮನೆಯವರಿಂದ ಕಾಣೆಯಾಗಿದ್ದ ಹೊಸಪೇಟೆಯ ಸಾಕಮ್ಮ ಮಹಿಳೆಯನ್ನು ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ ಆಕೆಯ ಕುಟುಂಬದವರಿಗೆ ಹಸ್ತಾಂತರಿಸಿದೆ.

BALLARI  ಸಾಕಮ್ಮ  VIJAYANAGARA  MISSING WOMAN SAKAMMA
ಮಕ್ಕಳ ಮಡಿಲು ಸೇರಿದ 'ಸಾಕಮ್ಮ': ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ ಬಳ್ಳಾರಿ (ETV Bharat)
author img

By ETV Bharat Karnataka Team

Published : 12 hours ago

ಬಳ್ಳಾರಿ: ಅಂತು ಇಂತೂ ಸುಮಾರು 25 ವರ್ಷಗಳ ಬಳಿಕ ಮಕ್ಕಳ ಮಡಿಲು ಸೇರಿದ್ದಾರೆ ಸಾಕಮ್ಮ. ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ.

ತನಗರಿವಿಲ್ಲದೇ ಹಗರಿಬೊಮ್ಮನ ಹಳ್ಳಿ ತಾಲೂಕಿನ ಪೊತಲ ಕಟ್ಟಿ ಗ್ರಾಮದ ಸಾಕಮ್ಮ ಹೊಸಪೇಟೆ ರೈಲ್ವೆ ನಿಲ್ದಾಣದಿಂದ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಅನಾಥಶ್ರಮ ಸೇರಿದ್ದರು. ಕನ್ನಡಿಗ ಐಪಿಎಸ್ ಅಧಿಕಾರಿ ಅವರನ್ನು ಗುರುತಿಸಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮನ್ವಯದಿಂದ ಸಾಕಮ್ಮ ಅವರನ್ನು ಬಳ್ಳಾರಿಗೆ ಕರೆತಂದಿದ್ದಾರೆ.

ಮಕ್ಕಳ ಮಡಿಲು ಸೇರಿದ ಸಾಕಮ್ಮ: ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ ಬಳ್ಳಾರಿ (ETV Bharat)

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರ ಜೊತೆಗೆ ಭೇಟಿ ಮಾಡಿಸಿದ್ದ ಅಧಿಕಾರಿಗಳು, ಬಳ್ಳಾರಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಒಂದಷ್ಟು ಫಾರ್ಮಲಿಟಿಸ್ ಮುಗಿಸಿ ಅಜ್ಜಿಯನ್ನು ಮಕ್ಕಳ ಜೊತೆಗೆ ಕಳುಹಿಸಿಕೊಟ್ಟರು. ಅಧಿಕಾರಿಗಳ ಸಮನ್ವಯತೆ ಮತ್ತು ತಾಯಿ ಮಕ್ಕಳನ್ನು ಒಂದು ಮಾಡಬೇಕೆಂಬ ವಿಧಿ ಲಿಖಿತ ಯಶಸ್ಸಿಯಾಗಿದೆ.

ಬಳ್ಳಾರಿ ನಿರಾಶ್ರಿತರ ಕೇಂದ್ರದ ವಾರ್ಡನ್ ಜೆ. ಮಣಿಕಂಠ ಮಾತನಾಡಿ, " ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಕಾರ್ಜುನ್​, ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿಗಳಾದ ನಾಗೇಶ್ ಮತ್ತು ಬಳ್ಳಾರಿಯ ಜಿಲ್ಲಾಧಿಕಾರಿಗಳಾದಂತಹ ಪ್ರಶಾಂತ್​ ಮಿಶ್ರಾ ಅವರ ಆದೇಶದ ಮೇರೆಗೆ ಹಿಮಾಚಲದ ಮಂಡಿಯ ಜಿಲ್ಲೆಯ ವೃದ್ಧಾಶ್ರಮದಲ್ಲಿ ಸಾಕಮ್ಮ ಮಹಿಳೆ ಇದ್ದರು. ಅವರನ್ನು ಮಾತನಾಡಿಸಿದಾಗ ಕನ್ನಡದವರು ಎಂದು ಪ್ರೀತಿಯಿಂದ ಮಾತನಾಡಿಸಿದರು. ನಮ್ಮ ಜೊತೆ ಬರುತ್ತೀರಾ ಎಂದಾಗ ಬರುತ್ತೇನೆ ಎಂದರು".

"ಬಳಿಕ ಇಲ್ಲ ನಿಮ್ಮ ತರಹ ಬಹಳ ಜನ ಬರುತ್ತಾರೆ, ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾರೆ. ಆದರೆ ಯಾರು ಕರೆದುಕೊಂಡು ಹೋಗಿಲ್ಲ. ನೀವು ಕೂಡ ಹೀಗೆ ಮಾಡುತ್ತೀರಾ ಎಂದಿದ್ದರು. ಅಲ್ಲಿ ನಮ್ಮ ಮೇಡಂ ಭಾರತಿ ಅವರೊಂದಿಗೆ ಸಾಕಮ್ಮ ತುಂಬ ಹೊಂದಿಕೊಂಡರು. ನಾವು 2 ದಿನ ಅಲ್ಲೇ ಇದ್ದೆವು. ನೀವು ಬಳ್ಳಾರಿಗೆ ಬಂದ ಮೇಲೆ ಯಾರ ಜೊತೆ ಇರುತ್ತೀರಿ ಎಂದಾಗ ಅವರ ಅಕ್ಕನ ಬಳಿ ಇರುತ್ತೇನೆ ಎಂದರು. ಈಗಲು ಅವರು ಅವರ ಮಕ್ಕಳನ್ನು ಸ್ಪಷ್ಟವಾಗಿ ಕಂಡು ಹಿಡಿಯುತ್ತಿಲ್ಲ. ಅವರನ್ನು ಬೇರೆ ಏನಾದರು ಕೇಳಿದರೂ 2 ವರ್ಷದ ಹಿಂದಿನದು ಮಾತ್ರ ಹೇಳುತ್ತಾರೆ. 25 ವರ್ಷದ ಹಿಂದೆ ಯಾವುದೋ ಕಾರ್ಯಕ್ರಮದಲ್ಲಿ ಮಿಸ್​ ಆಗಿ ಯಾವುದೋ ಒಂದು ರೈಲು​ ಹತ್ತಿ ಹಿಮಾಚಲಯಕ್ಕೆ ತಲುಪಿದ್ದರು. 2021ರಲ್ಲಿ ಅಲ್ಲಿನ ವೃದ್ಧಾಶ್ರಮದಲ್ಲಿ ದಾಖಲಾತಿಗೊಳ್ಳುತ್ತಾರೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: 23 ವರ್ಷಗಳ ನಂತರ ತನ್ನ ಕುಟುಂಬ ಸೇರಿದ ಸಾಕಮ್ಮ! ಇದಕ್ಕೆ ಕಾರಣ ಸಾಮಾಜಿಕ ಜಾಲತಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.