ETV Bharat / bharat

ಇಲ್ಲಿನ 1,864 ಸರ್ಕಾರಿ ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಇಲ್ಲ: ಆಘಾತಕಾರಿ ಮಾಹಿತಿ ಬಹಿರಂಗ - Telangana Schools

author img

By ETV Bharat Karnataka Team

Published : Sep 16, 2024, 6:51 PM IST

ತೆಲಂಗಾಣದ 1,864 ಸರ್ಕಾರಿ ಶಾಲೆಗಳಲ್ಲಿ ಒಬ್ಬನೂ ವಿದ್ಯಾರ್ಥಿ ಇಲ್ಲ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಶಾಲಾ ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)
ಇಲ್ಲಿನ 1,864 ಸರ್ಕಾರಿ ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಇಲ್ಲ (ETV Bharat)

ಹೈದರಾಬಾದ್: ತೆಲಂಗಾಣದ 1,864 ಸರ್ಕಾರಿ ಶಾಲೆಗಳಲ್ಲಿ ಒಬ್ಬೇ ಒಬ್ಬ ವಿದ್ಯಾರ್ಥಿಯೂ ಇಲ್ಲ ಎಂಬ ಕಳವಳಕಾರಿ ಮಾಹಿತಿ ಬಹಿರಂಗವಾಗಿದೆ. ಇನ್ನು 26,287 ಸರ್ಕಾರಿ ಶಾಲೆಗಳ ಪೈಕಿ ಕೇವಲ 5,367 ಶಾಲೆಗಳಲ್ಲಿ (20.41%) ಮಾತ್ರ 100 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಎಂದು ಶಿಕ್ಷಣ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ರಾಜ್ಯ ಸರ್ಕಾರವು ಶಾಲಾ ನೈರ್ಮಲ್ಯದ ಜವಾಬ್ದಾರಿಯನ್ನು ಅಮ್ಮ ಆದರ್ಶ ಶಾಲಾ ಸಮಿತಿಗಳಿಗೆ ವಹಿಸಿದೆ. ಈ ನೈರ್ಮಲ್ಯ ಕಾರ್ಯಗಳಿಗಾಗಿ ಆಯಾ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಧನಸಹಾಯ ನೀಡಲಾಗುತ್ತದೆ. ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (ಡಿಎಂಎಫ್​​ಟಿ) ನಿಂದ ನೈರ್ಮಲ್ಯ ಕಾರ್ಯಗಳಿಗಾಗಿ ಹಣ ಒದಗಿಸಲಾಗುತ್ತದೆ.

ಶಿಕ್ಷಣ ಇಲಾಖೆಯು ಶಾಲಾ ವಿದ್ಯಾರ್ಥಿಗಳ ಜಿಲ್ಲಾವಾರು ದತ್ತಾಂಶವನ್ನು ಗಣಿ ಇಲಾಖೆಗೆ ಒದಗಿಸಿದ್ದು, ಅದರ ಆಧಾರದ ಮೇಲೆ ಗಣಿ ನಿರ್ದೇಶಕ ಬಿಆರ್​ವಿ ಸುಶೀಲ್ ಕುಮಾರ್ ಅವರು ಸಿಂಗರೇಣಿ ಕೊಲಿಯರೀಸ್ ಸಿಎಂಡಿಗೆ ಪತ್ರ ಬರೆದು ಡಿಎಂಎಫ್​ಟಿ ಅಡಿ ಮೂರು ತಿಂಗಳಿಗೆ 40.83 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ.

ಹೆಚ್ಚಾಗುತ್ತಿದೆ ವಿದ್ಯಾರ್ಥಿಗಳಿಲ್ಲದ ಶಾಲೆಗಳ ಸಂಖ್ಯೆ: ಈ ವರ್ಷದ ಆರಂಭದಲ್ಲಿ, ರಾಜ್ಯ ಸರ್ಕಾರವು ಸಮಗ್ರ ಶಿಕ್ಷೆ ಯೋಜನೆಗಾಗಿ ಕೇಂದ್ರ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿದ್ದು, 2023-24ರ ಶೈಕ್ಷಣಿಕ ವರ್ಷದಲ್ಲಿ 1,213 ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ ಎಂದು ಹೇಳಿದೆ. ಆದಾಗ್ಯೂ, ಇತ್ತೀಚಿನ ಅಂಕಿ - ಅಂಶಗಳ ಪ್ರಕಾರ 1,864 ಶಾಲೆಗಳಲ್ಲಿ ಒಬ್ಬನೇ ವಿದ್ಯಾರ್ಥಿಯೂ ಇಲ್ಲ ಎಂಬುದು ಕಂಡು ಬಂದಿದೆ.

ಉತ್ತರ ಸಿಗದ ಪ್ರಶ್ನೆಗಳು: ಮಕ್ಕಳಿಲ್ಲದ ಈ ಶಾಲೆಗಳು ಮಕ್ಕಳು ಶಾಲೆಗೆ ಬರಲು ಬಯಸದ ಪ್ರದೇಶಗಳಲ್ಲಿವೆಯೇ ಅಥವಾ ಶಾಲಾ ವಯಸ್ಸಿನ ಮಕ್ಕಳೇ ಆ ಪ್ರದೇಶದಲ್ಲಿ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಒಟ್ಟಾರೆಯಾಗಿ ಹೆಚ್ಚುತ್ತಿರುವ ವಿದ್ಯಾರ್ಥಿ-ರಹಿತ ಶಾಲೆಗಳ ಸಂಖ್ಯೆಯು ಎಲ್ಲರಿಗೂ ಶಿಕ್ಷಣ ಎಂಬ ಮೂಲಭೂತ ನೀತಿಗೆ ಹಲವಾರು ಸವಾಲುಗಳನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ : 'ಕೇಜ್ರಿವಾಲ್ ಮಂಗಳವಾರ ರಾಜೀನಾಮೆ ನೀಡುವುದು ಖಚಿತ': ದೆಹಲಿ ಆರೋಗ್ಯ ಸಚಿವ ಭಾರದ್ವಾಜ್ ಸ್ಪಷ್ಟನೆ - Arvind Kejriwal Resignation

ETV Bharat Logo

Copyright © 2024 Ushodaya Enterprises Pvt. Ltd., All Rights Reserved.