ETV Bharat / bharat

ನಮೋ ಭಾರತ್​​ ರ‍್ಯಾಪಿಡ್​​ ರೈಲಾಗಿ ಬದಲಾದ ವಂದೇ ಮೆಟ್ರೋ; ಪ್ರಧಾನಿ ಮೋದಿಯಿಂದ ಚಾಲನೆ - ಏನೇನೆಲ್ಲ ವಿಶೇಷತೆ ಇದೆ? - Namo Bharat Rapid Rail

author img

By ETV Bharat Karnataka Team

Published : Sep 16, 2024, 5:50 PM IST

ವಂದೇ ಮೆಟ್ರೋ ರೈಲು ಹೆಸರನ್ನು ನಮೋ ಭಾರತ್​​ ರ‍್ಯಾಪಿಡ್​​ ರೈಲು ಎಂದು ನಾಮಕರಣ ಮಾಡಲಾಗಿದೆ. ಮೊದಲ ರ‍್ಯಾಪಿಡ್​ ರೈಲಿಗೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಿದರು.

ನಮೋ ಭಾರತ್​​ ರ್ಯಾಪಿಡ್​​ ರೈಲಾಗಿ ಬದಲಾದ ವಂದೇ ಮೆಟ್ರೋ
ನಮೋ ಭಾರತ್​​ ರ್ಯಾಪಿಡ್​​ ರೈಲಾಗಿ ಬದಲಾದ ವಂದೇ ಮೆಟ್ರೋ (PTI)

ಭುಜ್ (ಗುಜರಾತ್): ವಂದೇ ಮೆಟ್ರೋವನ್ನು ರೈಲ್ವೆ ಇಲಾಖೆ 'ನಮೋ ಭಾರತ್​​ ರ‍್ಯಾಪಿಡ್​​ ರೈಲು' ಎಂದು ಮರುನಾಮಕರಣ ಮಾಡಲಾಗಿದೆ. ಗುಜರಾತ್​ನ ಭುಜ್ ಮತ್ತು ಅಹಮದಾಬಾದ್ ನಡುವಿನ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹಸಿರು ನಿಶಾನೆ ತೋರಿಸಿದರು.

ಪ್ರಮುಖ ನಗರಗಳ ನಡುವೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ನಮೋ ಭಾರತ್​ ರ‍್ಯಾಪಿಡ್ ರೈಲು ಹೊಂದಿದೆ. ಭುಜ್‌ನಿಂದ ಅಹಮದಾಬಾದ್‌ಗೆ 359 ಕಿಮೀ ದೂರವನ್ನು 5:45 ಗಂಟೆಗಳಲ್ಲಿ ಕ್ರಮಿಸುತ್ತದೆ. ಒಂಬತ್ತು ನಿಲ್ದಾಣಗಳಲ್ಲಿ ರೈಲು ನಿಲ್ಲುತ್ತದೆ. ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಧ್ರ, ವಿರಾಮ್ಗಮ್, ಚಂದ್ಲೋಡಿಯಾ ಮತ್ತು ಸಬರಮತಿ ನಿಲ್ದಾಣಗಳಲ್ಲಿ ಇದು ನಿಲ್ಲಲಿದೆ. ಸೆಪ್ಟೆಂಬರ್ 17 ರಿಂದ ಈ ಮೆಟ್ರೋ ಸೇವೆ ಲಭ್ಯವಾಗಲಿದೆ. ಒಟ್ಟು ಪ್ರಯಾಣ ದರ 455 ರೂಪಾಯಿ ಆಗಿದೆ.

ವಂದೇ ಮೆಟ್ರೋವನ್ನು ನಮೋ ಭಾರತ್ ರ‍್ಯಾಪಿಡ್ ರೈಲ್ ಎಂದು ಮರುನಾಮಕರಣ ಮಾಡಲು ಸಚಿವಾಲಯ ನಿರ್ಧರಿಸಿದೆ. ಇತರ ಮೆಟ್ರೋಗಳು ಕಡಿಮೆ ದೂರ ಕ್ರಮಿಸಿದರೆ, ನಮೋ ಭಾರತ್ ರೈಲುಗಳು ಅಹಮದಾಬಾದ್‌ನ ಹೃದಯಭಾಗವನ್ನು ಅದರ ಬಾಹ್ಯ ನಗರಗಳೊಂದಿಗೆ ಸಂಪರ್ಕಿಸುತ್ತದೆ ಎಂದು ರೈಲ್ವೆ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ರೈಲಿನ ವಿಶೇಷತೆ: 1,150 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಹೊಂದಿರುವ ಈ ರೈಲು 12 ಎಸಿ ಕೋಚ್‌ಗಳನ್ನು ಒಳಗೊಂಡಿದೆ. ನವೀನ ವೈಶಿಷ್ಟ್ಯಗಳುಳ್ಳ ಈ ರೈಲನ್ನು ದಕ್ಷತೆಯ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ದರ್ಜೆಯ ಸೀಟುಗಳು, ಹವಾನಿಯಂತ್ರಿತ ಕ್ಯಾಬಿನ್‌ಗಳು, ಮಾಡ್ಯುಲರ್ ಇಂಟೀರಿಯರ್​​ ಹೊಂದಿದೆ. ಇತರ ಮೆಟ್ರೋಗಳಿಗಿಂತ ಉತ್ತಮ ದರ್ಜೆಯಲ್ಲಿ ರೈಲು ಇದಾಗಿದೆ ಎಂದು ರೈಲ್ವೆ ಹೇಳಿದೆ.

ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೀತ್ ಅಭಿಷೇಕ್ ಮಾತನಾಡಿ, ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಕೋಚ್‌ಗಳು, ಕೇಂದ್ರೀಯ ನಿಯಂತ್ರಿತ ಸ್ವಯಂಚಾಲಿತ ಸ್ಲೈಡಿಂಗ್ ಡೋರ್‌ಗಳು, ಮಾಡ್ಯುಲರ್ ಇಂಟೀರಿಯರ್‌ಗಳು, ಎಲ್‌ಇಡಿ ಲೈಟಿಂಗ್, ಶೌಚಾಲಯಗಳು, ಮಾರ್ಗ ನಕ್ಷೆ ಸೂಚಕಗಳು, ಕಿಟಕಿಗಳು, ಸಿಸಿಟಿವಿ, ಫೋನ್ ಚಾರ್ಜಿಂಗ್ ಸೌಲಭ್ಯಗಳು, ಅಲಾರಾಂ, ಬೆಂಕಿ ನಂದಿಸುವ ವ್ಯವಸ್ಥೆಯಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಗಂಟೆಗೆ 110 ಕಿಮೀ ವೇಗದಲ್ಲಿ ಚಲಿಸಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಕುಸಿಯುತ್ತಿದೆ ಪೌಷ್ಟಿಕಾಂಶದ ಕಣಜ 'ಕೌನಿ' ಸಿರಿಧಾನ್ಯದ ಉತ್ಪಾದನೆ! - uttarakhands kauni millet

ETV Bharat Logo

Copyright © 2024 Ushodaya Enterprises Pvt. Ltd., All Rights Reserved.