ಕರ್ನಾಟಕ

karnataka

ETV Bharat / bharat

ಜೈಸಲ್ಮೇರ್​ನಲ್ಲಿ ನಾಳೆ ಜಿಎಸ್​ಟಿ ಕೌನ್ಸಿಲ್ ಸಭೆ: ಯಾವೆಲ್ಲ ವಸ್ತುಗಳ ಬೆಲೆ ಏರುತ್ತೆ, ಇನ್ಯಾವುದು ಇಳಿಯುತ್ತೆ? - GST COUNCIL MEET

20 ಮತ್ತು 21 ರಂದು ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯಲಿದೆ.

ಜಿಎಸ್​ಸಿ ಮಂಡಳಿ ಸಭೆ ನಡೆಯಲಿರುವ ಜೈಸಲ್ಮೇರ್​ನ ಮ್ಯಾರಿಯಟ್ ಹೋಟೆಲ್
ಜಿಎಸ್​ಸಿ ಮಂಡಳಿ ಸಭೆ ನಡೆಯಲಿರುವ ಜೈಸಲ್ಮೇರ್​ನ ಮ್ಯಾರಿಯಟ್ ಹೋಟೆಲ್ (etv bharat)

By ETV Bharat Karnataka Team

Published : 11 hours ago

ಜೈಸಲ್ಮೇರ್, ರಾಜಸ್ಥಾನ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ದಿನಗಳ ಭೇಟಿಗಾಗಿ ಇಂದು ಜೈಸಲ್ಮೇರ್ ಗೆ ಆಗಮಿಸಲಿದ್ದಾರೆ. ಅವರು ಡಿಸೆಂಬರ್ 20 ರಂದು ಮಧ್ಯಾಹ್ನ 12:30 ಕ್ಕೆ ದೆಹಲಿಯಿಂದ ಹೊರಟು ಮಧ್ಯಾಹ್ನ 2:20 ಕ್ಕೆ ಜೈಸಲ್ಮೇರ್ ತಲುಪಲಿದ್ದಾರೆ. ನಂತರ ಇಲ್ಲಿನ ಹೋಟೆಲ್ ಮ್ಯಾರಿಯಟ್​ನಲ್ಲಿ ಸಂಜೆ 4 ರಿಂದ 7:30 ರವರೆಗೆ ರಾಜ್ಯಗಳ ಹಣಕಾಸು ಸಚಿವರೊಂದಿಗೆ ಬಜೆಟ್ ಪೂರ್ವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ಅವರು ಜೈಸಲ್ಮೇರ್​ನಲ್ಲಿಯೇ ತಂಗಲಿದ್ದು, ಡಿಸೆಂಬರ್ 21 ರಂದು 55 ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಡಿಸೆಂಬರ್ 21 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1:45 ರವರೆಗೆ ಹೋಟೆಲ್ ಮ್ಯಾರಿಯಟ್​ನಲ್ಲಿ ನಡೆಯಲಿರುವ 55 ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ. ಈ ಮಹತ್ವದ ಸಭೆಯಲ್ಲಿ ಹಣಕಾಸು ಸಚಿವರು, ಉಪಮುಖ್ಯಮಂತ್ರಿಗಳು ಮತ್ತು ರಾಜ್ಯಗಳ ಇತರ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಸಭೆಯಲ್ಲಿ ಭಾಗವಹಿಸಲು ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ, ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಇತರ ಪ್ರಮುಖ ನಾಯಕರು ಜೈಸಲ್ಮೇರ್ ತಲುಪಲಿದ್ದಾರೆ. ದಿಯಾ ಕುಮಾರಿ ಮೂರು ದಿನಗಳ ಕಾಲ ಜೈಸಲ್ಮೇರ್ ನಲ್ಲಿ ಉಳಿಯಲಿದ್ದು, ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಡಿಸೆಂಬರ್ 21 ರಂದು ಜೈಸಲ್ಮೇರ್ ತಲುಪಲಿದ್ದಾರೆ.

ಈ ಎಲ್ಲ ಸಿಎಂಗಳು ಭಾಗಿ :ದೆಹಲಿ ಮುಖ್ಯಮಂತ್ರಿ ಅತಿಶಿ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಗೋವಾ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಪ್ರಮೋದ್ ಸಾವಂತ್, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ರಾಜ್ಯಗಳಿಂದ ಉಪ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗಿ:ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದಿಯೋರಾ, ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ ಚೌನಾ ಮೇ, ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್, ಉತ್ತರಾಖಂಡದ ಹಣಕಾಸು ಸಚಿವ ಪ್ರೇಮ್ ಚಂದ್ ಅಗರ್ವಾಲ್, ನಾಗಾಲ್ಯಾಂಡ್ ಉಪಮುಖ್ಯಮಂತ್ರಿ ಟಿ.ಆರ್.ಜೆಲಿಯಾಂಗ್, ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅಂತಾ ನಾಗೇಶ್ವರನ್, ಮಣಿಪುರ ಆರೋಗ್ಯ ಸಚಿವ ಡಾ.ಸಪರಮ್ ರಂಜನ್ ಸಿಂಗ್, ಹಣಕಾಸು ರಾಜ್ಯ ಸಚಿವ ಪಂಕಜ್ ಚವಾಣ್ ಕೂಡ ಸಭೆಯಲ್ಲಿ ಭಾಗವಹಿಸಲು ಜೈಸಲ್ಮೇರ್ ತಲುಪಲಿದ್ದಾರೆ.

ಜಿಎಸ್​ಟಿ ಸಭೆಯ ಹಿನ್ನೆಲೆಯಲ್ಲಿ ಜೈಸಲ್ಮೇರ್​ನಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಸುಮಾರು 2,000 ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಜೈಪುರ - ಅಜ್ಮೀರ್​ ಹೈವೇಯಲ್ಲಿ ಗ್ಯಾಸ್​ ಟ್ಯಾಂಕರ್​​ ​ಸ್ಫೋಟ : ಐದು ಮಂದಿ ಸಜೀವ ದಹನ, 37 ಜನರಿಗೆ ಗಾಯ - TRUCK CARRYING CHEMICAL COLLIDES

ABOUT THE AUTHOR

...view details