ETV Bharat / bharat

ಯುಎಸ್​ ವೀಸಾ ಸಂದರ್ಶನ ನಿಯಮ ಮಾರ್ಪಾಡು: ಕಾಯುವ ಸಮಯ ಕಡಿಮೆಯಾಗುವ ನಿರೀಕ್ಷೆ - US VISA APPOINTMENT

ಯುಎಸ್ ತನ್ನ ವೀಸಾ ಸಂದರ್ಶನ ನಿಯಮಗಳಲ್ಲಿ ಬದಲಾವಣೆ ಮಾಡಿದೆ.

ಯುಎಸ್​ ವೀಸಾ ಸಂದರ್ಶನ ನಿಯಮ ಮಾರ್ಪಾಡು
ಯುಎಸ್​ ವೀಸಾ ಸಂದರ್ಶನ ನಿಯಮ ಮಾರ್ಪಾಡು (IANS)
author img

By ETV Bharat Karnataka Team

Published : Dec 20, 2024, 3:59 PM IST

ನವದೆಹಲಿ: ವೀಸಾ ಸಂದರ್ಶನ ದಿನಾಂಕಗಳ ಮರುಹೊಂದಾಣಿಕೆ ನೀತಿಯಲ್ಲಿ ಯುಎಸ್ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ಹೊಸ ನಿಯಮಗಳು ಜನವರಿ 1, 2025 ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳ ಅಡಿಯಲ್ಲಿ, ಅರ್ಜಿದಾರರು ತಮ್ಮ ಯುಎಸ್ ವೀಸಾ ಸಂದರ್ಶನ ದಿನಾಂಕ ಮತ್ತು ಸ್ಥಳವನ್ನು ಒಮ್ಮೆ ಮಾತ್ರ ಮರುಹೊಂದಿಸಲು ಅವಕಾಶವಿರುತ್ತದೆ. ಈ ಹಿಂದೆ, ವೀಸಾ ಅರ್ಜಿದಾರರು ತಮ್ಮ ಸಂದರ್ಶನದ ದಿನಾಂಕ ಅಥವಾ ಸ್ಥಳವನ್ನು ಮೂರು ಬಾರಿ ಬದಲಾಯಿಸುವ ಅವಕಾಶವನ್ನು ಹೊಂದಿದ್ದರು.

ಪ್ರಸ್ತುತ, ವಲಸೆಯೇತರ ವೀಸಾ ಸಂದರ್ಶನವನ್ನು ನಿಗದಿಪಡಿಸಿದ ನಂತರ ಅರ್ಜಿದಾರರು ದೆಹಲಿ, ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ ಹಲವಾರು ಯುಎಸ್ ಕಾನ್ಸುಲೇಟ್ ಸ್ಥಳಗಳ ಪೈಕಿ ಯಾವುದನ್ನಾದರೂ ಆಯ್ಕೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಆದರೆ ಹೊಸ ಬದಲಾವಣೆಗಳ ಅನುಸಾರ ಅರ್ಜಿದಾರರು ಸಂದರ್ಶನದ ದಿನಾಂಕ ಅಥವಾ ಸ್ಥಳವನ್ನು ಕೇವಲ ಒಂದು ಬಾರಿ ಮಾತ್ರ ಬದಲಾವಣೆ ಮಾಡಬಹುದು. ಹೆಚ್ಚಿನ ಬದಲಾವಣೆಗಳ ಅಗತ್ಯವಿದ್ದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಸದ್ಯ ಸ್ಟ್ಯಾಂಡರ್ಡ್ ನಾನ್-ಇಮಿಗ್ರೆಂಟ್ ವೀಸಾ ಅರ್ಜಿ ಶುಲ್ಕ 185 ಯುಎಸ್ ಡಾಲರ್ ಆಗಿದೆ.

ಒಂದೊಮ್ಮೆ ಮರುಹೊಂದಿಸಿದ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ ಅಥವಾ ಸಂದರ್ಶನವನ್ನು ಮತ್ತೆ ಮರುಹೊಂದಿಸಬೇಕಾದ ಅಗತ್ಯವಿದ್ದರೆ ಅಂಥ ಅರ್ಜಿದಾರರು ಹೊಸದಾಗಿ ಸಂದರ್ಶನಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಮತ್ತೆ ಅರ್ಜಿ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.

ಎಲ್ಲಾ ಅರ್ಜಿದಾರರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸುವ ಪ್ರಯತ್ನವಾಗಿ ಯುಎಸ್ ರಾಯಭಾರ ಕಚೇರಿ ಈ ಬದಲಾವಣೆಗಳನ್ನು ಮಾಡಿದೆ.

ವೀಸಾ ಸಂದರ್ಶನಗಳಲ್ಲಿನ ವಿಳಂಬ ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆಯಾದರೂ ಭಾರತೀಯ ಅರ್ಜಿದಾರರ ಕಾಯುವಿಕೆ ಸಮಯ ಈಗಲೂ ಸುದೀರ್ಘವಾಗಿದೆ. ಪ್ರಸ್ತುತ ಬಿ 1 / ಬಿ 2 ಸಂದರ್ಶಕ ವೀಸಾ ಸಂದರ್ಶನ ನಿಗದಿಯಾಗುವ ಸಮಯಾವಧಿ ಮುಂಬೈನಲ್ಲಿ 438 ದಿನಗಳು, ಚೆನ್ನೈನಲ್ಲಿ 479 ದಿನಗಳು, ದೆಹಲಿಯಲ್ಲಿ 441 ದಿನಗಳು, ಕೋಲ್ಕತ್ತಾದಲ್ಲಿ 436 ದಿನಗಳು ಮತ್ತು ಹೈದರಾಬಾದ್​ನಲ್ಲಿ 429 ದಿನ ಆಗಿವೆ. ವಿದ್ಯಾರ್ಥಿ ವೀಸಾಗಳಂತಹ ಇತರ ವೀಸಾ ವಿಭಾಗಗಳಲ್ಲಿ ಕೂಡ ಕಾಯುವ ಸಮಯ ದೀರ್ಘವಾಗಿದೆ. ಇದು ಮುಂಬೈನಲ್ಲಿ 193 ದಿನಗಳು, ಚೆನ್ನೈನಲ್ಲಿ 106 ದಿನಗಳು, ದೆಹಲಿಯಲ್ಲಿ 150 ದಿನಗಳು, ಕೋಲ್ಕತ್ತಾದಲ್ಲಿ 143 ದಿನಗಳು ಮತ್ತು ಹೈದರಾಬಾದ್ ನಲ್ಲಿ 115 ದಿನಗಳು ಆಗಿದೆ.

ಇದನ್ನೂ ಓದಿ : AI ಮೂಲಕ ಪ್ರಧಾನಿ ಮೋದಿ - ಜಾರ್ಜಿಯಾ ವಿಡಿಯೋ ಟ್ಯಾಂಪರ್: ದೂರು ದಾಖಲು - PM MODI VIDEO TAMPERED

ETV Bharat Logo

Copyright © 2025 Ushodaya Enterprises Pvt. Ltd., All Rights Reserved.