ಹೈದರಾಬಾದ್(ತೆಲಂಗಾಣ): ಮಾರ್ಗದರ್ಶಿ ಚಿಟ್ ಫಂಡ್ನ 121ನೇ ಶಾಖೆಯು ಹೈದರಾಬಾದ್‌ನ ಗಚ್ಚಿಬೌಲಿಯ ಸ್ಕೈ ಸಿಟಿಯಲ್ಲಿ ಇಂದು (ಡಿ.20) ಕಾರ್ಯಾರಂಭ ಮಾಡಿದೆ. ಗ್ರಾಹಕರಿಗೆ ಉನ್ನತ ದರ್ಜೆಯ ಸೇವೆಗಳನ್ನು ಒದಗಿಸುವಲ್ಲಿ ಮಾರ್ಗದರ್ಶಿಯು ಅಚಲ ಬದ್ಧತೆ ಹೊಂದಿದೆ ಎಂದು ಹೊಸ ಶಾಖೆಯನ್ನು ಉದ್ಘಾಟಿಸಿದ ರಾಮೋಜಿ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಎಚ್.ಕಿರಣ್ ಹೇಳಿದರು.
ಹೊಸ ಶಾಖೆಯ ಮೊದಲ ಗ್ರಾಹಕರಾದ ಜಂಪಾನಿ ಕಲ್ಪನಾ ದಂಪತಿಗೆ ಸಿ.ಎಚ್.ಕಿರಣ್ ಅವರು ಔಪಚಾರಿಕವಾಗಿ ಶಾಖೆಯ ಮೊದಲ ಚಿಟ್ ರಸೀದಿ ನೀಡಿದರು.
ಮಾರ್ಗದರ್ಶಿ ಚಿಟ್ಸ್ನ ಎಂಡಿ ಶೈಲಜಾ ಕಿರಣ್, ರಾಮೋಜಿ ಫಿಲ್ಮ್ ಸಿಟಿ ಎಂಡಿ ವಿಜಯೇಶ್ವರಿ, ಈಟಿವಿ ಭಾರತ್ ನಿರ್ದೇಶಕಿ ಬೃಹತಿ, ಸಬಲಾ ಮಿಲ್ಲೆಟ್ಸ್ ನಿರ್ದೇಶಕ ಸಹರಿ, ರಾಮೋಜಿ ರಾವ್ ಅವರ ಮೊಮ್ಮಗ ಸುಜಯ್ ಮತ್ತು ಈಟಿವಿ ಸಿಇಒ ಬಾಪಿನೀಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈನಾಡು ತೆಲಂಗಾಣ ಸಂಪಾದಕ ಡಿ.ಎನ್.ಪ್ರಸಾದ್, ಈನಾಡು ಆಂಧ್ರ ಪ್ರದೇಶ ಸಂಪಾದಕ ಎಂ.ನಾಗೇಶ್ವರ ರಾವ್, ಮಾರ್ಗದರ್ಶಿ ಸಿಇಒ ಸತ್ಯನಾರಾಯಣ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಬೆಳವಣಿಗೆ ಮತ್ತು ಗ್ರಾಹಕ ಸೇವೆಗೆ ಬದ್ಧತೆ: ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಚ್.ಕಿರಣ್, "ಮಾರ್ಗದರ್ಶಿ ಸದಾ ತನ್ನ ಗ್ರಾಹಕರ ಸೇವೆಗೆ ಬದ್ಧವಾಗಿದೆ. ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುವ ವ್ಯಾಪಕ ಶ್ರೇಣಿಯ ಚಿಟ್ ಆಯ್ಕೆಗಳನ್ನು ನೀಡುವ ಮೂಲಕ 60 ವರ್ಷಗಳಿಂದ ಕಟ್ಟಲಾದ ನಂಬಿಕೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರ ಅಡಿಯಲ್ಲಿ ಕಂಪನಿಯ ದೃಷ್ಟಿಕೋನವನ್ನು ತಿಳಿಸಿದ ಅವರು, "ಮಾರ್ಗದರ್ಶಿ ಎಂಡಿ ಶೈಲಜಾ ಕಿರಣ್ ಕಂಪನಿಯ ಬೆಳವಣಿಗೆಗೆ ಬದ್ಧರಾಗಿದ್ದಾರೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಮತ್ತು ಕಂಪನಿಯ ಧ್ಯೇಯವನ್ನು ಮುನ್ನಡೆಸಲು ಶ್ರಮಿಸುತ್ತಿದ್ದಾರೆ" ಎಂದರು.
ಕಂಪನಿಯ ಯಶಸ್ಸಿನ ಬಗ್ಗೆ ಬೆಳಕು ಚೆಲ್ಲಿದ ಶೈಲಜಾ ಕಿರಣ್, "ಸಣ್ಣ ಚೀಟಿಗಳಿಂದ ಪ್ರಾರಂಭಿಸಿ, ನಾವು ಈಗ ಎರಡರಿಂದ ಮೂರು ಕೋಟಿಯವರೆಗಿನ ಚೀಟಿಗಳನ್ನು ಹೊಂದಿದ್ದೇವೆ. ಗ್ರಾಹಕರಿಗೆ ನಮ್ಮ ಸ್ಪಷ್ಟ ಮಾರ್ಗದರ್ಶನ ನೀಡುವಿಕೆ ಮತ್ತು ಎರಡರಿಂದ ಮೂರು ವಾರಗಳಲ್ಲಿ ತ್ವರಿತವಾಗಿ ಪಾವತಿಯ ಖಚಿತತೆಯ ಕಾರಣಗಳಿಂದ ಕಂಪನಿಯು ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ. ಮಾರ್ಗದರ್ಶಿ ಈಗ ಭಾರತದ ನಂಬರ್ ಒನ್ ಚಿಟ್ ಫಂಡ್ ಕಂಪನಿಯಾಗಿ ಬೆಳೆದು ನಿಂತಿದೆ" ಎಂದು ನುಡಿದರು.
ತನ್ನ 121ನೇ ಶಾಖೆಯೊಂದಿಗೆ ಮಾರ್ಗದರ್ಶಿ ತನ್ನ ನಂಬಿಕೆ ಮತ್ತು ಶ್ರೇಷ್ಠತೆಯ ಪರಂಪರೆಯನ್ನು ಮತ್ತಷ್ಟು ಬಲಪಡಿಸಿದ್ದು, ಚಿಟ್ ಫಂಡ್ ಉದ್ಯಮದಲ್ಲಿ ನಾಯಕನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಇದನ್ನೂ ಓದಿ: ತಮಿಳುನಾಡಿನ ಹೊಸೂರಿನಲ್ಲಿ ಮಾರ್ಗದರ್ಶಿ ಚಿಟ್ಫಂಡ್ನ 120ನೇ ಶಾಖೆ ಉದ್ಘಾಟಿಸಿದ ಎಂಡಿ ಶೈಲಜಾ ಕಿರಣ್ - MD SAILAJA KIRON