ETV Bharat / state

ಸಕ್ಕರೆ ನಾಡಿನಲ್ಲಿ 3 ದಿನದ ಸಾಹಿತ್ಯ ಹಬ್ಬಕ್ಕೆ ಅದ್ಧೂರಿ ಚಾಲನೆ: ಸಾಹಿತ್ಯಾಸ್ತಕರು ಹೇಳಿದ್ದೇನು? - KANNADA SAHITYA SAMMELANA

ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಸಾಹಿತ್ಯಾಸಕ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

kannada-sahitya-sammelana
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ETV Bharat)
author img

By ETV Bharat Karnataka Team

Published : Dec 20, 2024, 10:45 PM IST

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ 3 ದಿನಗಳ ಕಾಲ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದೆ. ಸಾಹಿತ್ಯ ಹಬ್ಬಕ್ಕೆ ಲಕ್ಷಾಂತರ ಜನ ಆಗಮಿಸಿ ಉದ್ಘಾಟನಾ ಸಮಾರಂಭ, ಪುಸ್ತಕ ಮೇಳ, ಕೃಷಿ ಪ್ರದರ್ಶನ ಹಾಗೂ ಬಗೆಬಗೆ ಊಟ ಸವಿದಿದ್ದಾರೆ. ಈ ಬಗ್ಗೆ ಸಾಹಿತ್ಯಾಸಕ್ತರಿಗೆ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಶಿಕ್ಷಕ ದಯಾನಂದ ಮಾತನಾಡಿ, "ನಾವು ತುಮಕೂರಿನ ಗುಬ್ಬಿ ತಾಲೂಕಿನಿಂದ ಸಮ್ಮೇಳನಕ್ಕೆ ಬಂದಿದ್ದೇವೆ. ಎಲ್ಲವನ್ನೂ ಚೆನ್ನಾಗಿ ಮಾಡಿದ್ದಾರೆ. ಪ್ರತಿ ಕಾರ್ಯಕ್ರಮವನ್ನೂ ವ್ಯವಸ್ಥಿತವಾಗಿ ಮಾಡಿದ್ದಾರೆ. ಸಮ್ಮೇಳನಕ್ಕೆ ಬರುವವರಿಗೆ ಇಲ್ಲಿ ಹೋಗಬೇಕು, ಅಲ್ಲಿ‌ ಹೋಗಬೇಕು ಎಂಬ ಲ್ಯಾಂಡ್ ಮಾರ್ಕ್​ಗಳನ್ನು ನೀಡಿದ್ದಾರೆ. ಎರಡು ದಿನಗಳ‌ ಕಾಲ ಸಮ್ಮೇಳನದ ‌ರಸದೌತಣವನ್ನು ಸ್ವೀಕಾರ ಮಾಡುತ್ತೇವೆ" ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಸಾಹಿತ್ಯಾಸಕ್ತರು ಮಾತನಾಡಿದ್ದಾರೆ (ETV Bharat)

ಸಾಹಿತ್ಯಾಸಕ್ತರಾದ ಶ್ಯಾಮಲ ಕೆ.ಆರ್. ಅವರು ಮಾತನಾಡಿ, "ನಾವು ಕೃಷ್ಣರಾಜಪೇಟೆಯಿಂದ ಬಂದಿದ್ದೇವೆ. ಸಕ್ಕರೆ ನಾಡು ಜನಪದದ ಬೀಡು. ಈ ನಾಡಿನಲ್ಲಿ ಇಂದು ಅತ್ಯಂತ ಸಂಭ್ರಮದ ಹಬ್ಬ ನಡೆಯುತ್ತಿದೆ. 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ‌ ನಾಡಿನ‌ ಮನೆ ಮನಗಳ ಹೆಮ್ಮೆಯ ಹಬ್ಬ. ಇಲ್ಲಿ ಪಾಲ್ಗೊಂಡಿರುವುದು ಅತ್ಯಂತ ಖುಷಿ ತಂದಿದೆ. ಜನಪದ ಪ್ರಕಾರಗಳು, ಪುಸ್ತಕ ‌ಮೇಳ ಎಲ್ಲಾ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡಿದ್ದೇವೆ" ಎಂದು ಹೇಳಿದ್ದಾರೆ.

kannada-sahitya-sammelana
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ETV Bharat)

ಇನ್ನೋರ್ವ ಸಾಹಿತ್ಯಾಸಕ್ತರಾದ ಸಂತೋಷ್ ಕುಡಲಿ ಅವರು ಮಾತನಾಡಿ, "ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಊಟದ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ. ಸಮ್ಮೇಳನದ ನೋಂದಾಯಿತ ಪ್ರತಿನಿಧಿಗಳಿಗೆ ಕಿಟ್ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು‌ ಹಾಗೂ ಅವರ ತಂಡ ಬಹಳ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಮತ್ತು ಇತರೆ ಎಲ್ಲ ಇಲಾಖೆಗಳು ಒಂದು ತಿಂಗಳು ಕಾಲ ಹಾರ್ಡ್​ವರ್ಕ್ ಮಾಡಿದ್ದಾರೆ. ಜಿಲ್ಲೆಯಲ್ಲಿ ಇದು ಅಭೂತಪೂರ್ವ ಕಾರ್ಯಕ್ರಮವಾಗಿದೆ" ಎಂದು ತಿಳಿಸಿದರು.

ಶಿಕ್ಷಕಿ ರೂಪ ಮಾತನಾಡಿ, "ನಾನು ಮೂಲತಃ ಮಂಡ್ಯ ಜಿಲ್ಲೆಯವಳು. ಆದರೆ ದಾವಣಗೆರೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಕಷ್ಟು ಆಸಕ್ತಿ ಇತ್ತು. ಹೀಗಾಗಿ, ನಾನು ಮತ್ತು ನನ್ನ ಕುಟುಂಬದವರೆಲ್ಲಾ ಭಾಗವಹಿಸಿದ್ದೇವೆ. ಇಲ್ಲಿ ಮೂರು ದಿನಗಳ ಕಾಲ ಕನ್ನಡ ನುಡಿ ಜಾತ್ರೆ ನಡೆಯುತ್ತದೆ. ಜನರು ಜಾಸ್ತಿ ಇದ್ದಾರೆ. ಎಲ್ಲಾ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ" ಎಂದು ಹೇಳಿದ್ದಾರೆ.

ದ್ವಿತೀಯ ಎಂ.ಎ ವಿದ್ಯಾರ್ಥಿ ಅಭಿಷೇಕ್ ಹರ್ಲಾಪುರ ಅವರು ಮಾತನಾಡಿ, "ನಾವು ನಮ್ಮ ಹುಡುಗರೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಇಲ್ಲಿಗೆ ಬಂದಿದ್ದೇವೆ. ಇಂತಹ ದೊಡ್ಡ ಮಟ್ಟದ ವೇದಿಕೆ ನಾವು ನೋಡಿರಲಿಲ್ಲ. ನಾನು ಇದೇ ಮೊದಲನೇ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದೇನೆ. ಈ ವೇದಿಕೆ ನೋಡಿ ಅಚ್ಚರಿಯಾಗಿ ಕನ್ನಡದ ಮೇಲೆ ಮತ್ತಷ್ಟು ಅಭಿಮಾನ ಮೂಡಿತು" ಎಂದು ತಿಳಿಸಿದ್ದಾರೆ.

kannada-sahitya-sammelana
ಕನ್ನಡಾಂಬೆಯ ತೇರು (ETV Bharat)

ಪುಸ್ತಕಗಳಿಗೆ ಕೇವಲ 10% ರಿಯಾಯಿತಿ: ಈ ಹಿಂದೆ ನಾವು ಸಮ್ಮೇಳನದ ಪತ್ರದಲ್ಲಿ ನೋಡಿದಂತೆ ಪುಸ್ತಕಗಳ ಮೇಲೆ 40% ರಿಯಾಯಿತಿ ದರ ಇರುತ್ತದೆ ಎಂದುಕೊಂಡೆವು. ಆದರೆ ಇಲ್ಲಿ ಕೇವಲ 10% ಇದೆ, ಇದು ಸ್ವಲ್ಪ ಬೇಜಾರಾಯಿತು ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಸಾಹಿತ್ಯಾಸಕ್ತರಾದ ನಜೀರ್ ಅಹ್ಮದ್ ಮಾತನಾಡಿ, "ನಾನು ಕನ್ನಡ ಸಾಹಿತ್ಯ ಸಮ್ಮೇಳನದ ಸದಸ್ಯ. ಈ ಕಾರ್ಯಕ್ರಮಕ್ಕೆ ನನ್ನ ಹೆಸರನ್ನು 15 ದಿನಗಳ ಹಿಂದೆ ನೋಂದಾಯಿಸಿಕೊಂಡಿದ್ದೇನೆ. ನೋಂದಣಿ ಮಾಡಿಕೊಂಡ ಪ್ರತಿನಿಧಿಗಳಿಗೆ ಮುಖ್ಯ ವೇದಿಕೆಯಲ್ಲಿ ಪ್ರತ್ಯೇಕ ಕೌಂಟರ್ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಅದು ಮಾಡಿಲ್ಲ. ಎಲ್ಲರಿಗೂ ಒಂದೇ ವೇದಿಕೆ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕನ್ನಡ ಬೆಳೆಯುತ್ತಿದೆ, ಆದರೆ ಅದಕ್ಕೆ ತಕ್ಕಂತೆ ಬಳಕೆಯಾಗುತ್ತಿಲ್ಲ: ಗೊ.ರು.ಚನ್ನಬಸಪ್ಪ - KANNADA SAHITYA SAMMELANA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.