ಕರ್ನಾಟಕ

karnataka

ETV Bharat / bharat

'ನ್ಯಾಯಾಂಗದ ಮೇಲೆ ಪಟ್ಟಭದ್ರ ಹಿತಾಸಕ್ತಿ ಗುಂಪುಗಳ ಒತ್ತಡ': ಸಿಜೆಐಗೆ 600 ವಕೀಲರಿಂದ ಪತ್ರ - Group Of Lawyers Write To CJI - GROUP OF LAWYERS WRITE TO CJI

ಸುಪ್ರೀಂ ಕೋರ್ಟ್​ಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಸುಮಾರು 600 ಜನ ವಕೀಲರು ಪತ್ರ ಬರೆದಿದ್ದಾರೆ.

Group Of Lawyers Write To CJI Against 'Vested Interest' Trying To 'Pressure' Judiciary
'ನ್ಯಾಯಾಂಗದ ಮೇಲೆ ಪಟ್ಟಭದ್ರ ಹಿತಾಸಕ್ತಿ ಗುಂಪಿನ ಒತ್ತಡ': ಸಿಜೆಐಗೆ 600 ವಕೀಲರಿಂದ ಪತ್ರ

By ETV Bharat Karnataka Team

Published : Mar 28, 2024, 10:05 PM IST

ನವದೆಹಲಿ: ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ನ್ಯಾಯಾಲಯಗಳಿಗೆ ಮಾನಹಾನಿ ಮಾಡಲು ಪಟ್ಟಭದ್ರ ಹಿತಾಸಕ್ತಿ ಗುಂಪು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್​ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ ಹಲವು ವಕೀಲರು ಸುಪ್ರೀಂ ಕೋರ್ಟ್​ಗೆ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

ರಾಜಕೀಯ ಪ್ರಕರಣಗಳಲ್ಲಿ ವಿಶೇಷವಾಗಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡಂತೆ ಪಟ್ಟಭದ್ರ ಹಿತಾಸಕ್ತಿ ಗುಂಪಿನ ಒತ್ತಡದ ತಂತ್ರಗಳು ಅತ್ಯಂತ ಸ್ಪಷ್ಟವಾಗಿವೆ. ಈ ತಂತ್ರಗಳು ನಮ್ಮ ನ್ಯಾಯಾಲಯಗಳಿಗೆ ಹಾನಿಯುಂಟು ಮಾಡುತ್ತವೆ. ನಮ್ಮ ಪ್ರಜಾಪ್ರಭುತ್ವದ ರಚನೆಗೆ ಧಕ್ಕೆ ತರುತ್ತವೆ ಎಂದು ಮಾರ್ಚ್ 26ರಂದು ಸಿಜೆಐ ಡಿ.ವೈ.ಚಂದ್ರಚೂಡ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಪತ್ರದಲ್ಲಿ ವಕೀಲರ ಆ ಗಂಪನ್ನು ನಿರ್ದಿಷ್ಟವಾಗಿ ಹೆಸರಿಸದೇ, ಹಗಲು ರಾಜಕಾರಣಿಗಳನ್ನು ಅವರು ಸಮರ್ಥಿಸಿಕೊಳ್ಳುತ್ತಾರೆ. ನಂತರ ರಾತ್ರಿಯಲ್ಲಿ ಮಾಧ್ಯಮಗಳ ಮೂಲಕ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ ಎಂದೂ ಗಂಭೀರ ಆರೋಪ ಮಾಡಲಾಗಿದೆ. ನ್ಯಾಯಾಲಯಗಳ ಪಾಲಿಗೆ ಹಿಂದೆ ಉತ್ತಮವಾಗಿತ್ತು ಮತ್ತು ಸುವರ್ಣ ಅವಧಿಯಾಗಿತ್ತು ಎನ್ನುವ ಈ ಹಿತಾಸಕ್ತಿ ಗುಂಪು, ಪ್ರಸ್ತುತ ನಡೆಯುತ್ತಿರುವ ಘಟನೆಗಳು ವ್ಯತಿರಿಕ್ತವಾಗಿ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುತ್ತದೆ. ಈ ಹೇಳಿಕೆಗಳು ನ್ಯಾಯಾಲಯಗಳ ಮೇಲೆ ಪ್ರಭಾವ ಬೀರುವ ಮತ್ತು ರಾಜಕೀಯ ಲಾಭಕ್ಕಾಗಿ ಮುಜುಗರಕ್ಕೀಡುಮಾಡುವ ಗುರಿಯನ್ನು ಹೊಂದಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ವಕೀಲರಾದ ಆದೀಶ್ ಅಗರ್ವಾಲಾ, ಚೇತನ್ ಮಿತ್ತಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್, ಉದಯ್ ಹೊಳ್ಳ ಮತ್ತು ಸ್ವರೂಪಮಾ ಚತುರ್ವೇದಿ ಸೇರಿದಂತೆ ಸುಮಾರು 600 ಜನರು ಈ ಪತ್ರ ಬರೆದಿದ್ದಾರೆ. ಈ ವಕೀಲರು ಯಾವುದೇ ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಿಲ್ಲ. ಆದರೆ, ಪಟ್ಟಭದ್ರ ಹಿತಾಸಕ್ತಿ ಗುಂಪಿನ ವರ್ತನೆಗಳು ನಂಬಿಕೆ ಮತ್ತು ಸಾಮರಸ್ಯದ ವಾತಾವರಣವನ್ನು ಹಾಳುಮಾಡುತ್ತಿದೆ. ಇದು ನ್ಯಾಯಾಂಗದ ಕಾರ್ಯನಿರ್ವಹಣೆಯನ್ನು ನಿರೂಪಿಸುತ್ತದೆ. 'ಬೆಂಚ್ ಫಿಕ್ಸಿಂಗ್'ನ ಸಂಪೂರ್ಣ ಸಿದ್ಧಾಂತವನ್ನು ರೂಪಿಸಲಾಗುತ್ತಿದೆ. ಇದು ಕೇವಲ ಅಗೌರವ ಮತ್ತು ಅವಹೇಳನವಲ್ಲ. ನ್ಯಾಯಾಲಯಗಳ ಗೌರವ ಮತ್ತು ಘನತೆಯ ಮೇಲಿನ ದಾಳಿಯಾಗಿದೆ. ನಮ್ಮ ನ್ಯಾಯಾಲಯಗಳನ್ನು ಕಾನೂನಿನ ನಿಯಮವಿಲ್ಲದ ದೇಶಗಳಿಗೆ ಹೋಲಿಸುವ ಮಟ್ಟಕ್ಕೆ ಇಳಿಯಲಾಗಿದೆ. ನಮ್ಮ ನ್ಯಾಯಾಂಗ ಸಂಸ್ಥೆಗಳನ್ನು ನ್ಯಾಯಾಂಗ ಸಮ್ಮತವಲ್ಲದ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಆರೋಪಿಸಲಾಗುತ್ತಿದೆ. ಈ ಎರಡು ಮುಖದ ನಡವಳಿಕೆಯು ನಮ್ಮ ಕಾನೂನು ವ್ಯವಸ್ಥೆ, ಸಾಮಾನ್ಯ ವ್ಯಕ್ತಿಗೆ ಸಿಗಬೇಕಾದ ಗೌರವಕ್ಕೆ ಹಾನಿಕಾರಕವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೆಲವು ಅಂಶಗಳು ತಮ್ಮ ಪ್ರಕರಣಗಳಲ್ಲಿ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿವೆ. ನಿರ್ದಿಷ್ಟ ರೀತಿಯಲ್ಲಿ ನಿರ್ಧಾರ ಪ್ರಕಟಿಸಲು ಮೇಲೆ ಒತ್ತಡ ಹೇರಲು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಗಳನ್ನು ಹರಡಲು ಪ್ರಯತ್ನಿಸುತ್ತಿವೆ. ಈ ಆಪಾದಿತ ದಾಳಿಗಳಿಂದ ನ್ಯಾಯಾಲಯಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ದೃಢವಾಗಿ ನಿಲ್ಲಬೇಕು ಮತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ:ಮತ್ತೆ ಇಡಿ ಕಸ್ಟಡಿಗೆ ಆಪ್ ನಾಯಕ: ಸಿಎಂ ಸ್ಥಾನಕ್ಕಿಲ್ಲ ಆಪತ್ತು, ಕೋರ್ಟ್​ನಲ್ಲಿ ಖುದ್ದಾಗಿ ವಾದ ಮಂಡಿಸಿದ ಕೇಜ್ರಿವಾಲ್ - Delhi Excise Policy Case

ABOUT THE AUTHOR

...view details