ಕರ್ನಾಟಕ

karnataka

ETV Bharat / bharat

ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿ, ಇಲ್ಲವೇ ಭದ್ರತಾ ಸಿಬ್ಬಂದಿಯ ಕಠಿಣ ಕ್ರಮ ಎದುರಿಸಿ: ಅಮಿತ್ ಶಾ - NAXAL FREE COUNTRY

ದೇಶದಿಂದ ನಕ್ಸಲ್​ವಾದವನ್ನು ನಿರ್ನಾಮ ಮಾಡಲು ಪಣ ತೊಟ್ಟಿರುವ ಕೇಂದ್ರ ಸರ್ಕಾರ ಮತ್ತೊಮ್ಮೆ, ಮಾವೋವಾದಿಗಳಿಗೆ ಶರಣಾಗಲು ಮನವಿ ಮಾಡಿದೆ.

ಅಮಿತ್ ಶಾ
ಅಮಿತ್ ಶಾ (PTI)

By PTI

Published : 4 hours ago

ಜಗದಲ್‌ಪುರ (ಛತ್ತೀಸ್‌ಗಢ):ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರುವಂತೆ ನಕ್ಸಲರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ಮನವಿ ಮಾಡಿದರು. ಇಲ್ಲವಾದಲ್ಲಿ ಭದ್ರತಾ ಪಡೆಗಳ ಕ್ರಮಗಳಿಗೆ ಬಲಿಯಾಗಬೇಕಾಗುತ್ತದೆ. ಶರಣಾದ ನಕ್ಸಲರ ಪುನರ್ವಸತಿ ಸರ್ಕಾರದ ಜವಾಬ್ದಾರಿ ಎಂದು ಇದೇ ವೇಳೆ ಭರವಸೆ ನೀಡಿದರು.

ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಭಾನುವಾರ ನಡೆದ ಬಸ್ತರ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಮಾರ್ಚ್ 31, 2026 ರ ವೇಳೆಗೆ ದೇಶದಲ್ಲಿ ನಕ್ಸಲ್​ವಾದ ಸಂಪೂರ್ಣವಾಗಿ ನಿರ್ನಾಮ ಮಾಡಲಿದ್ದೇವೆ. ಶಸ್ತ್ರಾಸ್ತ್ರ ತ್ಯಜಿಸಿ ಬಂದು, ಶರಣಾದವರಿಗೆ ಸರ್ಕಾರವೇ ಪುನರ್ವಸತಿ ಕಲ್ಪಿಸಿಕೊಡಲಿದೆ ಎಂದು ಹೇಳಿದರು.

2026 ರೊಳಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಈಡೇರಿಸಲು ಛತ್ತೀಸ್‌ಗಢ ಪೊಲೀಸರು ಬದ್ಧರಾಗಿದ್ದಾರೆ. ಇಲ್ಲಿನ ಪುನರ್ವಸತಿ ನೀತಿ ದೇಶದಲ್ಲೇ ಅತ್ಯುತ್ತಮವಾಗಿದೆ. ನೀವು ಶರಣಾಗಿ ಮುಖ್ಯವಾಹಿನಿಗೆ ಸೇರಿದಲ್ಲಿ, ಛತ್ತೀಸ್‌ಗಢ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.

ನಕ್ಸಲ್​ ನಿಗ್ರಹ ಕಾರ್ಯಾಚರಣೆ ತೀವ್ರ:ಛತ್ತೀಸ್​ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್​ ಆಡಳಿತದಲ್ಲಿ ಮಾವೋವಾದಿಗಳ ವಿರುದ್ಧದ ಕ್ರಮ ಆಮೆಗತಿಯಲ್ಲಿ ಸಾಗುತ್ತಿತ್ತು. ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕಳೆದ ಒಂದು ವರ್ಷದಲ್ಲಿ 287 ನಕ್ಸಲರ ಬೇಟೆ, 992 ನಕ್ಸಲರ ಬಂಧನ ಮತ್ತು 836 ಜನರ ಶರಣಾಗತಿ ಮಾಡಿಸಲಾಗಿದೆ ಎಂದು ಅಂಕಿಅಂಶವನ್ನು ಅಮಿತ್​ ಶಾ ಹಂಚಿಕೊಂಡರು.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಭದ್ರತಾ ಸಿಬ್ಬಂದಿಯ ಸಾವುನೋವಿನ ಪ್ರಮಾಣ ಶೇಕಡಾ 73 ರಷ್ಟು ಕಡಿಮೆಯಾಗಿದೆ. ನಾಗರಿಕರ ಸಾವು ಕೂಡ ಶೇಕಡಾ 70 ರಷ್ಟು ಇಳಿಕೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ಗೃಹ ಸಚಿವರು ತಿಳಿಸಿದರು.

ಛತ್ತೀಸ್‌ಗಢದಲ್ಲಿ ನಕ್ಸಲಿಸಂ ಅಂತ್ಯಗೊಂಡರೆ ಜಮ್ಮು- ಕಾಶ್ಮೀರಕ್ಕಿಂತ ಹೆಚ್ಚಿನ ಪ್ರವಾಸಿಗರನ್ನು ಇಲ್ಲಿಗೆ ಸೆಳೆಯಲು ಸಾಧ್ಯವಾಗಲಿದೆ. ನಕ್ಸಲ್​ಪೀಡಿತ ಎಂದು ಹಣೆಪಟ್ಟಿ ಹೊಂದಿರುವ 'ಬಸ್ತಾರ್​​ ಬದಲಾಗುತ್ತಿದೆ' ಎಂಬುದು ಹಲವರ ಬಾಯಲ್ಲಿದೆ. ಆದರೆ, 2026 ರ ವೇಳೆಗೆ 'ಬಸ್ತಾರ್​​ ಬದಲಾಗಿದೆ' ಎಂದು ನಾನೇ ಘೋಷಿಸುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಪ್ರಣಬ್ ಪ್ರಧಾನಿ, ಮನಮೋಹನ್ ಸಿಂಗ್​ ರಾಷ್ಟ್ರಪತಿ ಆಗಬೇಕಿತ್ತು: ಮಣಿಶಂಕರ್​​ ಅಯ್ಯರ್

ABOUT THE AUTHOR

...view details