ಚೆನ್ನೈ: ಭಾನುವಾರ ಬಂತು ಎಂದರೆ ಮಕ್ಕಳಿಗೆ ಹಬ್ಬ. ಕಾರಣ ಅಂದು ಪಾಠ ಬಿಟ್ಟು ಆಟ ಆಡಬಹುದು ಎಂಬ ಖುಷಿ ಮಕ್ಕಳದ್ದು. ನೀವೇನಾದರೂ ಭಾನುವಾರ ಸಾರ್ವಜನಿಕ ಆಟದ ಮೈದಾನಗಳಿಗೆ ಭೇಟಿ ನೀಡಿದರೆ ಅಲ್ಲಿ ಹುಡುಗರ ದಂಡೇ ಇರುತ್ತೆ. ಕ್ರಿಕೆಟ್ ಅಥವಾ ಫುಟ್ಬಾಲ್, ಹೀಗೆ ತಮ್ಮಿಷ್ಟದ ಆಟ ಆಡುವತ್ತ ಮಗ್ನರಾಗಿರುತ್ತಾರೆ. ಅಲ್ಲಿ ಹುಡುಗಿರ ದಂಡು ಕಂಡು ಬರುವುದು ಅಪರೂಪ. ಫಿಟ್ನೆಸ್ ಕುರಿತು ಜಾಗೃತಿ ಹೊರತಾಗಿಯೂ ಜಿಮ್ ಬಿಟ್ಟು ಆಟದ ಮೈದಾನದಲ್ಲಿ ಹುಡುಗಿಯರು ಆಟವಾಡುವುದನ್ನು ನೋಡಲು ಸಾಧ್ಯವಿಲ್ಲ.
ಜಿಮ್ಗಳಲ್ಲಿ ಯುವತಿಯರಿಗೆ ಅವಕಾಶ ಕಲ್ಪಿಸಿದರೂ ಅಲ್ಲಿನ ಸೌಲಭ್ಯ ಬಳಕೆಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ನಾವು ತುಂಬಾ ಮುಂದುವರೆದಿದ್ದೇವೆ ಎನ್ನುವ ಸಮಾಜ ಕೂಡ ಈ ಹಿಂದಿನ ಪೀಳಿಗೆಗೆ ಲಭ್ಯವಿದ್ದ ಆಟಗಳು ಇಂದಿನ ಬಾಲಕಿಯರಿಗೆ ಲಭ್ಯವಾಗುತ್ತಿಲ್ಲ ಎಂಬುದು ಗಮನಿಸಬೇಕಾದ ಅಂಶ.
ಈ ಕುರಿತು ಈಟಿವಿ ಭಾರತದ ಜತೆಗೆ ಮಾತನಾಡಿರುವ ಮಕ್ಕಳ ಕಲ್ಯಾಣ ಕಾರ್ಯಕರ್ತರಾದ ದೆವನೆಯನ್, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಲಭ್ಯವಾಗುವ ಮೈದಾನಗಳಲ್ಲಿ ಶೇ 99.9ರಷ್ಟು ಜನರು ಹುಡುಗರೇ ತುಂಬಿದ್ದು, ಅಲ್ಲಿ ಹುಡುಗಿಯರಿಗೆ ಆಟವಾಡಲು ಸ್ಥಳವಿಲ್ಲ ಎಂದಿದ್ದಾರೆ. ಭಾರತದ ಶೇ 50ರಷ್ಟು ಮಹಿಳೆಯರು ರಕ್ತಹೀನತೆ ಮತ್ತು ಅಪೌಷ್ಟಿಕಾತೆಗೆ ಒಳಗಾಗಲು ಕಾರಣ ಸರಿಯಾಗಿ ವ್ಯಾಯಾಮ ಮಾಡದಿರುವುದು. ಮಕ್ಕಳು ಹುಟ್ಟಿದ ಸಮಯದಲ್ಲಿ ತಾಯಂದಿರುವ ಸರಿಯಾದ ಆಹಾರದ ಜೊತೆಗೆ ವ್ಯಾಯಾಮ ಮಾಡದೇ ಇರುವುದು ಪ್ರಮುಖವಾಗಿ ಹೆಣ್ಣು ಮಕ್ಕಳು ಮತ್ತು ತಾಯಂದಿರಲ್ಲಿ ಅಪೌಷ್ಟಿಕತೆ ಕಾಡಲು ಕಾರಣವಾಗಿದೆ ಅಂತಾರೆ ದೆವನೆಯನ್.
ಕ್ರೀಡೆಯಲ್ಲಿ ಯುವತಿಯರ ಪಾಲ್ಗೊಳ್ಳುವಿಕೆ ಪ್ರಮಾಣ ಕಡಿಮೆ: ಕಳೆದ 15 ವರ್ಷದಲ್ಲಿ ಹುಡುಗಿಯರು ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವಿಕೆ ಕ್ಷೀಣಿಸುತ್ತಿದೆ. ಶಾಲೆ ಅಥವಾ ಮೈದಾನದಲ್ಲಿ ಹುಡುಗರು ಭಾಗಿಯಾಗುವಂತೆ ಹುಡುಗಿಯರು ಭಾಗಿಯಾಗುತ್ತಿಲ್ಲ. ರಾಜ್ಯದಲ್ಲಿ ದೈಹಿಕ ಮಹಿಳಾ ಶಿಕ್ಷಕಿಯರ ಸಂಖ್ಯೆ ಕೂಡ ಬೆರಳು ಎಣಿಕೆಯಷ್ಟಿದೆ. ಹುಡುಗಿಯರ ದೈಹಿಕ ಚಟುವಟಿಕೆ ಪಾಲ್ಗೊಳ್ಳುದಿರುವಿಕೆಯು ಮಧ್ಯಮ ವರ್ಗದ ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ ಎನ್ನುತ್ತಿವೆ ಅಂಕಿ- ಅಂಶಗಳು.
ಹದಿವಯಸ್ಸಿನ ಸಮಸ್ಯೆ: ಹದಿವಯಸ್ಸಿನ ಹುಡುಗಿಯರ ಮೇಲೆ ಇಂದು ಸ್ಮಾರ್ಟ್ ಫೋನ್ಗಳು ಹೆಚ್ಚಿನ ಪ್ರಭಾವ ಬೀರುತ್ತಿವೆ. ಕಳೆದ 10 ವರ್ಷದಿಂದ ದೈಹಿಕ ಸಮಸ್ಯೆ, ಆತ್ಮಹತ್ಯೆ, ಮತ್ತು ಹದಿವಯಸ್ಸಿನ ಗರ್ಭವಸ್ಥೆಯಂತಹ ಸಮಸ್ಯೆಗೆ ಅವರು ಒಳಗಾಗಿದ್ದು, ಕ್ರೀಡೆ ಕೂಡ ಇದರೊಂದಿಗೆ ಸಂಬಂಧ ಹೊಂದಿದೆ ಎನ್ನುತ್ತಾರೆ ಮಕ್ಕಳ ಕಲ್ಯಾಣ ಕಾರ್ಯಕರ್ತರಾದ ದೆವನೆಯನ್.
ಮಹಿಳೆಯರು ಕ್ರೀಡಾ ಮೈದಾನ: ಲ್ಯಾನ್ಸೆಟ್ನಲ್ಲಿ ಪ್ರಕಟವಾದ ವರದಿಯಂತೆ ಶೇ 57ರಷ್ಟು ಮಹಿಳೆಯರು ದೈಹಿಕವಾಗಿ ಸಕ್ರಿಯವಾಗಿಲ್ಲ. ಪೋಷಕರು ಕೂಡ ಮಕ್ಕಳೊಂದಿಗೆ ಸಮಯ ಕಳೆಯಬೇಕು. ದಿನವೊಂದಕ್ಕೆ ಕನಿಷ್ಠ 2 ಗಂಟೆ ಆಟದಲ್ಲಿ ಪಾಲ್ಗೊಳ್ಳುವುದು ಅಷ್ಟೇ ಮುಖ್ಯ. ಈ ರೀತಿ ಹುಡುಗಿಯರಿಗೆ ಎಲ್ಲೆಡೆ ಮುಕ್ತವಾಗಿ ಮತ್ತು ಸುರಕ್ಷಿತ ಆಟದ ವಾತಾವರಣವನ್ನು ತಮಿಳುನಾಡು ಸರ್ಕಾರ ಸೃಷ್ಟಿಸಿದೆ ಎಂದ ದೆವನೆಯನ್, ಮಹಿಳೆಯರಿಗಾಗಿ ಜಿಮ್ ಸೃಷ್ಟಿ ಉಪಕ್ರಮಕ್ಕೆ ಚೆನ್ನೈ ಕಾರ್ಪೊರೇಷನ್ ಶ್ಲಾಘಿಸಿದ್ದಾರೆ.