ಆಗ್ರಾ: ಮೂವರು ಯುವಕರು ಸೇರಿಕೊಂಡು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಆಗ್ರಾದಲ್ಲಿ ಶನಿವಾರ ಸಂಜೆ ನಡೆದಿದೆ. ದುರುಳರು ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಕೈಲಾಶ್ ದೇವಸ್ಥಾನದ ಬಳಿ ಇರುವ ಕಾಡಿನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಮೂವರಲ್ಲಿ ಒಬ್ಬ ಸಂತ್ರಸ್ತೆಯ ಸ್ನೇಹಿತನೆಂದು ತಿಳಿದು ಬಂದಿದೆ. ಮಾತನಾಡಬೇಕೆಂದು ಯುವತಿಯನ್ನು ಕಾಡಿಗೆ ಕರೊದೊಯ್ದ ಪ್ರಿಯತಮ ಬಳಿಕ ಆಕೆಯನ್ನು ತನ್ನ ಇತರ ಸ್ನೇಹಿತರಿಗೆ ಒಪ್ಪಿಸಿದ್ದಾನೆ. ಈ ವೇಳೆ ಪ್ರತಿಭಟಿಸಿದರೂ ಬಿಡದ ಕಾಮುಕರು, ಬೆದರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ. ಮನೆಗೆ ಬಂದ ಬಳಿಕ ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ. ಪೋಷಕರು ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು, 24 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ನೀರಜ್ ಶರ್ಮಾ ತಿಳಿಸಿದ್ದಾರೆ.