ಜೈಪುರ, ರಾಜಸ್ಥಾನ: ನೂರಾರು ದೇಗುಲಗಳಿದ್ದರೂ ಇಲ್ಲಿ ಮಾತೆ ಮಹಾಲಕ್ಷ್ಮಿಯ ದೇವಸ್ಥಾನ ಭಾರಿ ಮಹತ್ವ ಹಾಗೂ ಖ್ಯಾತಿ ಪಡೆದುಕೊಂಡಿದೆ. ಗಜಲಕ್ಷ್ಮಿ ಮತ್ತು ವೈಭವ ಲಕ್ಷ್ಮಿ ಎಂದು ಕರೆಯಲ್ಪಡುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನವು ಸಿದ್ಧಾಂತ ಮತ್ತು ಧರ್ಮಕ್ಕೆ ಸಮರ್ಪಿತವಾದ ದೇವಾಲಯಗಳಲ್ಲಿ ಒಂದಾಗಿದೆ.
ಇಲ್ಲಿ ಮಾತೃದೇವತೆಯನ್ನು ಪೂಜಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬುದು ಈ ಭಾಗದ ಜನರ ಅಚಲ ನಂಬಿಕೆ ಕೂಡಾ ಆಗಿದೆ. ಇಲ್ಲಿನ ವಿಶೇಷ ಎಂದರೆ ಅವಿವಾಹಿತ ಹುಡುಗಿಯರು, ಈ ದೇವಿಯ ದರ್ಶನ ಮಾಡಿ, ಬೇಡಿಕೊಂಡರೆ ಸಾಕು ಬೇಗ ಕಂಕಣಭಾಗ್ಯ ಕೂಡಿ ಬರಲಿದೆಯಂತೆ. ಇದು ಮಹಾಲಕ್ಷ್ಮಿಗೆ ನಡೆದುಕೊಳ್ಳುವ ಬಹುತೇಕ ಭಕ್ತರ ಮಾತಾಗಿದೆ.
ಛೋಟಿ ಕಾಶಿಯಲ್ಲಿ ಅನೇಕ ದೊಡ್ಡ ಮತ್ತು ಪ್ರಸಿದ್ಧ ದೇವಾಲಯಗಳಿವೆ, ಆದರೆ ಇಲ್ಲಿ ಸುಮಾರು 160 ವರ್ಷಗಳಷ್ಟು ಹಳೆಯದಾದ ಮತ್ತು ವಿಶಿಷ್ಟವಾದ ಲಕ್ಷ್ಮಿ ದೇವಾಲಯವಿದೆ. ಲಕ್ಷ್ಮಿ ದೇವಿಯು ಗಜಲಕ್ಷ್ಮಿ ರೂಪದಲ್ಲಿ ಇರುವ ಏಕೈಕ ದೇವಾಲಯ ಇದಾಗಿದೆ. ತಾಯಿ ಲಕ್ಷ್ಮಿ ಇಲ್ಲಿ ಎರಡು ಆನೆಗಳ ಮೇಲೆ ಸವಾರಿ ಮಾಡುತ್ತಿದ್ದಾಳೆ. ಜೈಪುರದ ಮಹಾರಾಜ ಸವಾಯಿ ರಾಮ್ ಸಿಂಗ್ II ರ ಆಳ್ವಿಕೆಯಲ್ಲಿ ಈ ಮಹಾಲಕ್ಷ್ಮಿ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ದೇವಾಲಯದ ಸೇವಾದಾರ ಪಂಡಿತ್ ಸಂತೋಷ್ ದವೆ ಹೇಳಿದ್ದಾರೆ.
ಪಂಚದ್ರಾವಿಡ ಶ್ರೀಮಾಲಿ ಬ್ರಾಹ್ಮಣ ಸಮುದಾಯದ ಪರವಾಗಿ ಮಹಾಲಕ್ಷ್ಮಿಯವರ ಬದುಕನ್ನೇ ಇಲ್ಲಿ ಅರ್ಪಿಸಲಾಯಿತು. ಈ ಕಾರಣದಿಂದಲೇ ಈ ಶ್ರೀಮಾಲಿಯು ಬ್ರಾಹ್ಮಣರ ಕುಲದೇವತೆಯೂ ಆಗಿದ್ದು, ಈ ಪುರಾತನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಸಮುದಾಯದ ಬ್ರಾಹ್ಮಣರು ಸೇವಾ ಕೈಂಕರ್ಯ ಮಾಡುತ್ತಾ ಬಂದಿದ್ದಾರೆ.
ಮದುವೆಯಾಗದ ಹೆಣ್ಣುಮಕ್ಕಳು ಪೂಜೆ ಸಲ್ಲಿಸಿದರೆ ಶೀಘ್ರ ವಿವಾಹ: ಮಹಾಲಕ್ಷ್ಮಿ ದೇವಾಲಯದ ಪವಾಡದ ಬಗ್ಗೆ ಪಂಡಿತ್ ಸಂತೋಷ್ ದವೆ ಮಾತನಾಡಿ, ’ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಇರುವ ಮಾತೆಯ ವಿಗ್ರಹವನ್ನು ಗಜಲಕ್ಷ್ಮಿ ಮತ್ತು ವೈಭವ ಲಕ್ಷ್ಮಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ದೀಪಾವಳಿಯಂದು ಇಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಈ ಸಮಯದಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಮನಃಪೂರ್ವಕವಾಗಿ ಪೂಜಿಸುವುದರಿಂದ ಸಂಪತ್ತು ಮತ್ತು ಧನ ಪ್ರಾಪ್ತಿಯಾಗುವುದಲ್ಲದೆ, ಲಕ್ಷ್ಮಿ ದೇವಿ ಆರಾಧನೆ ಮಾಡುವುದರಿಂದ ಅವಿವಾಹಿತ ಹೆಣ್ಣುಮಕ್ಕಳು ಶೀಘ್ರದಲ್ಲಿ ವಿವಾಹವಾಗುತ್ತಾರೆ ಎಂದು ನಂಬುತ್ತಾರೆ‘‘ ಎಂದು ಹೇಳಿದ್ದಾರೆ.
ತಲೆಮಾರುಗಳಿಂದ ನಡೆಯುತ್ತಿದೆ ಆರಾಧನೆ: ಈಗ ಈ ದೇವಸ್ಥಾನದ ಸುತ್ತ ದೊಡ್ಡ ಮಾರುಕಟ್ಟೆ ನಿರ್ಮಿಸಲಾಗಿದೆ. ಎದುರುಗಡೆ ಖಾಸಗಿ ಕಾಲೇಜು ಕೂಡ ಇದೆ. ಉದ್ಯಮಿಗಳು, ವಿದ್ಯಾರ್ಥಿಗಳು ಗಜಲಕ್ಷ್ಮಿಯ ದರ್ಶನದೊಂದಿಗೆ ತಮ್ಮ ದಿನವನ್ನು ಆರಂಭಿಸುತ್ತಾರೆ. ಉದ್ಯಮಿ ವಿಷ್ಣು ಖಂಡೇಲ್ವಾಲ್ ಅವರು ತಮ್ಮ ಅಂಗಡಿಗೆ ಹೋಗುವ ಮೊದಲು ಮಾತೆಯ ದರ್ಶನವ ಮಾಡುತ್ತಾರಂತೆ. ಇದೇ ವೇಳೆ ಮಾತನಾಡಿರುವ ಶಿಕ್ಷಕ ರಾಹುಲ್ ಅವರು 2 ವರ್ಷಗಳಿಂದ ಇಲ್ಲಿಗೆ ನಿತ್ಯ ಬರುತ್ತಿರುವುದಾಗಿ ತಿಳಿಸಿದರು. ಮೊದಲು ಈ ದೇವಾಲಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಅಂತಾರೆ ಅವರು.
ವಿದ್ಯಾರ್ಥಿನಿ ದೂರ್ವಾ ಮಾತನಾಡಿ, ತಾನು ಬಾಲ್ಯದಿಂದಲೂ ಅಜ್ಜ ಮತ್ತು ತಂದೆಯೊಂದಿಗೆ ಇಲ್ಲಿಗೆ ಆಗಾಗ ಬರುತ್ತಿದ್ದೇನೆ. ಇಲ್ಲಿಗೆ ಬಂದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ಪ್ರತಿ ಶುಕ್ರವಾರ ತನ್ನ ಸ್ನೇಹಿತರನ್ನೂ ಇಲ್ಲಿಗೆ ಕರೆತರುತ್ತೇನೆ ಎಂದಿದ್ದಾರೆ.
ಇದನ್ನು ಓದಿ:ಮೃತರ 13ನೇ ದಿನದ ತಿಥಿ ಕಾರ್ಯ ನಿಷೇಧಿಸಿ ಸುಗ್ರೀವಾಜ್ಞೆ: ಎಲ್ಲಿ, ಯಾಕೆ ಗೊತ್ತಾ?
ಕಾಶ್ಮೀರದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್‌ನಲ್ಲಿ 2,000ಕ್ಕೂ ಹೆಚ್ಚು ಅಥ್ಲೀಟ್‌ಗಳು ಭಾಗಿ