ಕರ್ನಾಟಕ

karnataka

ETV Bharat / bharat

ತಿರುವಣ್ಣಾಮಲೈನಲ್ಲಿ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಕಾರು: ನಾಲ್ವರು ಸ್ಥಳದಲ್ಲೇ ಸಾವು - four died

ಮದುವೆಗೆಂದು ತೆರಳುತ್ತಿದ್ದ ಕಾರು, ಕಿಲ್ಪೆನ್ನತ್ತೂರು ಬಳಿ ಟ್ರ್ಯಾಕ್ಟರ್​ಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

Four Persons killed in tractor-car collision near Tiruvannamalai
ಟ್ರ್ಯಾಕ್ಟರ್​ಗೆ ಗುದ್ದಿದ ಕಾರು: ನಾಲ್ವರು ಸ್ಥಳದಲ್ಲೇ ಸಾವು

By ETV Bharat Karnataka Team

Published : Feb 22, 2024, 1:02 PM IST

ತಿರುವಣ್ಣಾಮಲೈ (ತಮಿಳುನಾಡು): ಕಾರೊಂದು ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಿರುವಣ್ಣಾಮಲೈ ಬಳಿಯ ಕಿಲ್ಪೆನ್ನತ್ತೂರಿನಲ್ಲಿ ಗುರುವಾರ ಸಂಭವಿಸಿದೆ. ಆಂಧ್ರಪ್ರದೇಶದ ರಿಜಿಸ್ಟರ್ ಹೊಂದಿರುವ​ ಕಾರು ತಿರುವಣ್ಣಾಮಲೈನಿಂದ ಕಲ್ಲಾಡಿಗುಂಡಿಗೆ ಮದುವೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ವಿಲ್ಲುಪುರಂ ಜಿಲ್ಲೆಯ ಕಸ್ಕರ್ಣಿ ಪ್ರದೇಶದ ಅಲಘನ್​ (37), ಅವಲೂರ್​ಪೇಟೆಯ ಪಾಂಡಿಯನ್​ (35), ಪ್ರಕಾಶ್​ ಹಾಗೂ ಚಿರಂಜೀವಿ ಸ್ಥಳದಲ್ಲೇ ಸಾವನ್ನಪ್ಪಿದವರು. ಟ್ರ್ಯಾಕ್ಟರ್​ ಚಾಲಕ ಪಾರ್ಕವನಂ ಅವರಿಗೆ ಕೈಗೆ ಗಾಯಗಳಾಗಿದ್ದು, ತಕ್ಷಣ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಪುದುಚೇರಿ ಜಿಪ್ಮಾರ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತದ ಕುರಿತು ಕಿಲ್ಪೆನ್ನತ್ತೂರು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ರಾಯಚೂರು ಮಂತ್ರಾಲಯ ಹೆದ್ದಾರಿಯಲ್ಲಿ ಬಸ್ ಬೈಕ್ ನಡುವೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

ABOUT THE AUTHOR

...view details