ಭುವನೇಶ್ವರ್, ಒಡಿಶಾ: ಜನವರಿ ಅಂತ್ಯವಾಗುತ್ತಿದ್ದಂತೆ, ಇದೀಗ ನಿಧಾನವಾಗಿ ತಾಪಮಾನದಲ್ಲಿ ಏರಿಕೆ ಕೂಡ ಕಂಡು ಬಂದಿದ್ದು, ರಾಜ್ಯದ ಅರಣ್ಯಗಳ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಕಳೆದ ಕೆಲವು ದಿನಗಳಿಂದ ಅರಣ್ಯದಲ್ಲಿ ಬೆಂಕಿಯಂತಹ ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿದ್ದು, ಒಡಿಶಾ ಕೂಡ ಇದಕ್ಕೆ ಹೊರತಾಗಿಲ್ಲ.
ಭಾರತದ ಅರಣ್ಯ ಸರ್ವೇಕ್ಷಣೆಯ ಪ್ರಕಾರ, ಕಳೆದೊಂದು ವಾರದಿಂದ ಅರಣ್ಯದಲ್ಲಿ ಬೆಂಕಿ ಪ್ರಕರಣದಲ್ಲಿ ಒಡಿಶಾ ಮೂರನೇ ಸ್ಥಾನ ಪಡೆದಿದೆ. ಕಳೆದ 24 ಗಂಟೆಯಲ್ಲೇ ಸ್ಯಾಟಲೈಟ್ ದತ್ತಾಂಶಗಳ ಪ್ರಕಾರ, ಒಡಿಶಾದಲ್ಲಿ 42 ಅಗ್ನಿ ಅನಾಹುತಗಳು ಸಂಭವಿಸಿವೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಕರ್ನಾಟಕವಿದ್ದು, ಎರಡನೇ ಸ್ಥಾನದಲ್ಲಿ ನಾಗಲ್ಯಾಂಡ್ ಮತ್ತು ಮೂರನೇ ಸ್ಥಾನದಲ್ಲಿ ಒಡಿಶಾ ಇದೆ.
ಈ ಘಟನೆಗಳ ಕುರಿತು ಆತಂಕ ವ್ಯಕ್ತಪಡಿಸಿರುವ ಪರಿಸರ ತಜ್ಞ ಜಯಕೃಷ್ಣ ಪನಿಗ್ರಹಿ, ಈ ಕುರಿತು ಅರಿವು ನೀಡುವ ಜೊತೆಗೆ ತತ್ಕ್ಷಣದ ಕ್ರಮಕ್ಕೆ ಮತ್ತು ಸಿದ್ಧತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಒಡಿಶಾದ ಅರಣ್ಯ ಬೆಂಕಿ ಪ್ರಕರಣಗಳು ಒಣ ಎಲೆ ಮತ್ತು ಮರಗಳಿಂದ ಹೆಚ್ಚು ತೀವ್ರವಾಗುತ್ತದೆ. ಅರಣ್ಯ ಸಮೀಪದಲ್ಲಿರುವ ಗ್ರಾಮಗಳಲ್ಲಿ ಇವುಗಳನ್ನು ತಡೆಯುವ ಜಾಗೃತಿ ಮತ್ತು ಕಟ್ಟುನಿಟ್ಟಿನ ಕ್ರಮ ನಡೆಸುವ ಮೂಲಕ ಇವುಗಳ ತಡೆಗೆ ಮುಂದಾಗಬೇಕಿದೆ.
ಕಾಳ್ಗಿಚ್ಚಿನ ಪರಿಣಾಮ: ಕಾಳ್ಗಿಚ್ಚುಗಳು ಪರಿಣಾಮಗಳು ಬೇಸಿಗೆಯಲ್ಲಿ ಅಗಾಧ ಪ್ರಮಾಣದಲ್ಲಿರುತ್ತದೆ. ಇವು ಕೇವಲ ಮರಗಳನ್ನು ಮಾತ್ರ ಹಾನಿ ಮಾಡುವುದಿಲ್ಲ. ಇದರಿಂದ ವನ್ಯ ಜೀವಿಗಳ ಮೇಲೆ ಪರಿಣಾಮ ಬೀರುವ ಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ವನ್ಯಜೀವಿ ಸಂರಕ್ಷಕ ಮತ್ತು ತಜ್ಞ ಅದಿತ್ಯ ಪಂಡಾ ಪ್ರಕಾರ, ಮಾನವರು ಈ ಕಾಳ್ಗಿಚ್ಚಿಗೆ ಪ್ರಮುಖ ಕಾರಣವಾಗಿದೆ. ಸಿಗರೇಟ್ ತುಂಡಿನ ಬೆಂಕಿಯು ದೊಡ್ಡ ಪ್ರಮಾಣದ ಕಾಳ್ಗಿಚ್ಚಿಗೆ ಕಾರಣವಾಗುತ್ತದೆ. ಹಾಗೇ ಒಣಗಿದ ಕೊಂಬೆಗಳ ನಡುವೆ ನಡೆಯುವ ಘರ್ಷಣೆಗಳು ಕೂಡ ಕಾಳ್ಗಿಚ್ಚಿನ ಕಿಡಿ ಹೊತ್ತಿಸುತ್ತದೆ. ಸಾಮಾನ್ಯವಾಗಿ ಸ್ಥಳೀಯರು ಬೇಸಿಗೆ ಆರಂಭದಲ್ಲೇ ಅಗ್ನಿ ನಿಯಂತ್ರಣಕ್ಕೆ ಸಿದ್ಧತೆ ನಡೆಸುತ್ತಾರೆ. ಆದರೆ ಇದು ಕೂಡ ಜಾಗೃತಿ ಮೇಲೆ ಅವಲಂಬಿತವಾಗಿದೆ ಎನ್ನುತ್ತಾರೆ.
ಈ ಕಾಳ್ಗಿಚ್ಚಿನ ತಡೆಗೆ ರಾಜ್ಯ ಸರ್ಕಾರ ಕಳೆದ ವರ್ಷ ಟಾಸ್ಕ್ ಪೋರ್ಸ್ ರಚಿಸುವ ಮೂಲಕ ನಿರ್ವಹಣಾ ಪ್ರಯತ್ನ ನಡೆಸಿತ್ತು. ಆದಾಗ್ಯೂ, ಇದರ ಪರಿಣಾಮದಲ್ಲಿ ಕೆಲವು ಸವಾಲುಗಳಿವೆ. ಅರಣ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಕಾಳ್ಗಿಚ್ಚು ಸಂಭವಿಸಿದ ಪ್ರದೇಶಕ್ಕೆ ಸರಿಯಾದ ರಸ್ತೆ ಮಾರ್ಗ ಇಲ್ಲದಿರುವ ಹಿನ್ನಲೆ ಅದರ ನಿಯಂತ್ರಣಕ್ಕೆ ತಡೆಯಾಗುತ್ತದೆ. ಕಾಳ್ಗಿಚ್ಚನ್ನು ಸ್ಥಳೀಯರ ಸಹಯೋಗದಿಂದ ಪರಿಣಾಮವಾಗಿ ತಡೆಯಬಹುದಾಗಿದೆ.