ಕರ್ನಾಟಕ

karnataka

ETV Bharat / bharat

ಹೊಸ ಪೆನ್ಶನ್ ಯೋಜನೆ 'ಎನ್​ಪಿಎಸ್​ ವಾತ್ಸಲ್ಯ'ಕ್ಕೆ ಇಂದು ವಿತ್ತ ಸಚಿವೆ ನಿರ್ಮಲಾ​ ಚಾಲನೆ - New Pension Scheme Vatsalya

'ಎನ್​ಪಿಎಸ್​ ವಾತ್ಸಲ್ಯ'ದ ಮೂಲಕ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಭವಿಷ್ಯದ ಆರ್ಥಿಕ ಸ್ಥಿತಿ ಬಲಪಡಿಸಲು ಪಿಂಚಣಿ ಖಾತೆಯಲ್ಲಿ ಹೂಡಿಕೆ ಮಾಡಬಹುದು.

Finance Minister Sitharaman to launch new pension scheme Vatsalya for children today
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ (IANS)

By ETV Bharat Karnataka Team

Published : Sep 18, 2024, 11:34 AM IST

ನವದೆಹಲಿ: ಬಜೆಟ್​ನಲ್ಲಿ ಘೋಷಿಸಲಾದ ಹೊಸ ಪಿಂಚಣಿ ಯೋಜನೆ 'ವಾತ್ಸಲ್ಯ'ಕ್ಕೆ ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನವದೆಹಲಿಯಲ್ಲಿ​ ಚಾಲನೆ ನೀಡಲಿದ್ದಾರೆ.

ಶಾಲಾ ಮಕ್ಕಳನ್ನು ಒಳಗೊಳ್ಳಲಿರುವ ಈ ಯೋಜನೆಯನ್ನು 2024ರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದರು. ಮಕ್ಕಳ ಬದಲಾಗಿ ಪೋಷಕರು ರಾಷ್ಟ್ರೀಯ ಪಿಂಚಣಿ (ಎನ್​ಪಿಎಸ್​) ಯೋಜನೆಯ ಮೂಲಕ ಅವರ ಭವಿಷ್ಯವನ್ನು ಸುಭದ್ರಗೊಳಿಸಬಹುದಾಗಿದೆ.

ಯೋಜನೆಯ ಉದ್ಘಾಟನೆಯ ದಿನವೇ 'ಎನ್​ಪಿಎಸ್​ ವಾತ್ಸಲ್ಯ ಯೋಜನೆ' ಸೇರಲು ಆನ್​ಲೈನ್ ವೇದಿಕೆ ಒದಗಿಸಲಾಗಿದೆ. ಇದಕ್ಕಾಗಿ ವಾತ್ಸಲ್ಯ ಯೋಜನೆ ಬ್ರೋಚರ್​ ಮತ್ತು ಪಿಆರ್​ಎಎನ್ (ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ)​ ಕಾರ್ಡ್​ ಅನ್ನು ಹೊಸ ಅಪ್ರಾಪ್ತ ಚಂದಾದಾರರಿಗೆ ವಿತರಿಸಲಾಗುತ್ತದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸೇರಬಹುದು. ಅಲ್ಲಿಯೂ ಕೂಡ ಪಿಆರ್‌ಎಎನ್​ ಸದಸ್ಯತ್ವ ಪಡೆಯಬಹುದು.

ಎನ್​ಪಿಎಸ್​ ವಾತ್ಸಲ್ಯ ಯೋಜನೆಯ ಕುರಿತು..: ಎನ್​ಪಿಎಸ್​ ವಾತ್ಸಲ್ಯದ ಮೂಲಕ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಪಿಂಚಣಿ ಖಾತೆಯಲ್ಲಿ ಹೂಡಿಕೆ ಮಾಡಬಹುದು. ದೀರ್ಘಕಾಲದ ಈ ಯೋಜನೆ ಆರ್ಥಿಕ ಭದ್ರತೆ ಹೊಂದಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ವಾತ್ಸಲ್ಯ ಯೋಜನೆಯಲ್ಲಿ ಪೋಷಕರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೂಡಿಕೆ ಮಾಡಬಹುದಾಗಿದೆ. ವಾರ್ಷಿಕವಾಗಿ ಕನಿಷ್ಠ 1 ಸಾವಿರ ರೂಪಾಯಿಯನ್ನೂ ಮಗುವಿನ ಹೆಸರಲ್ಲಿ ಹೂಡಿಕೆ ಮಾಡಬಹುದು. ಈ ಮೂಲಕ ಎಲ್ಲ ರೀತಿಯ ಆರ್ಥಿಕ ಹಿನ್ನೆಲೆ ಹೊಂದಿರುವ ಪೋಷಕರನ್ನು ಯೋಜನೆಯಲ್ಲಿ ಒಳಗೊಳ್ಳುವಂತೆ ಮಾಡಲಾಗುತ್ತದೆ. ಯೋಜನೆ ತೆರಿಗೆ ವಿನಾಯಿತಿ ಹೊಂದಿದೆ.

ಈ ಹೊಸ ಉಪಕ್ರಮವನ್ನು ಆರಂಭಿಕ ಹಂತದಲ್ಲೇ ಮಕ್ಕಳ ಭವಿಷ್ಯ ಸುಭದ್ರಗೊಳಿಸುವ ನಿಟ್ಟಿನಲ್ಲಿ ವಿನ್ಯಾಸ ಮಾಡಲಾಗಿದ್ದು, ಭಾರತದ ಪಿಂಚಣಿ ವ್ಯವಸ್ಥೆಯಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಲಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಡಿ (ಪಿಎಫ್​ಆರ್​ಡಿಎ) ಇದು ಕಾರ್ಯ ನಿರ್ವಹಿಸಲಿದೆ. (ಐಎಎನ್​ಎಸ್​)

ಇದನ್ನೂ ಓದಿ: ಮಕ್ಕಳ ಹೆಸರಿನಲ್ಲೂ ಆರಂಭಿಸಬಹುದು ಪಿಂಚಣಿ ಯೋಜನೆ: ಇಲ್ಲಿದೆ ವಾತ್ಸಲ್ಯ ಸ್ಕೀಂ ಮಾಹಿತಿ

ABOUT THE AUTHOR

...view details