ಕರ್ನಾಟಕ

karnataka

ಎಂಜಿನಿಯರ್ ರಶೀದ್, ಜಮಾತೆ ಇಸ್ಲಾಮಿ ಇಬ್ಬರೂ ಆರೆಸ್ಸೆಸ್​ನ ಮಿತ್ರರು: ಫಾರೂಕ್ ಅಬ್ದುಲ್ಲಾ ಆರೋಪ - Jammu Kashmir elections

By ETV Bharat Karnataka Team

Published : Sep 15, 2024, 5:32 PM IST

ಲೋಕಸಭಾ ಸದಸ್ಯ ಎಂಜಿನಿಯರ್ ರಶೀದ್ ಆರ್​​ಎಸ್​ಎಸ್​ನ ಮಿತ್ರ ಎಂದು ಡಾ.ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ.

ಡಾ. ಫಾರೂಕ್ ಅಬ್ದುಲ್ಲಾ (ಸಂಗ್ರಹ ಚಿತ್ರ)
ಡಾ. ಫಾರೂಕ್ ಅಬ್ದುಲ್ಲಾ (ಸಂಗ್ರಹ ಚಿತ್ರ) (IANS)

ಶ್ರೀನಗರ: ಲೋಕಸಭಾ ಸದಸ್ಯ ಎಂಜಿನಿಯರ್ ರಶೀದ್ ಆರ್​​ಎಸ್​ಎಸ್​ನ ಮಿತ್ರ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಅಧ್ಯಕ್ಷ ಡಾ.ಫಾರೂಕ್ ಅಬ್ದುಲ್ಲಾ ರವಿವಾರ ಗಂಭೀರ ಆರೋಪ ಮಾಡಿದ್ದಾರೆ. ಜಮಾತೆ ಇಸ್ಲಾಮಿಯ ಮಾಜಿ ಸದಸ್ಯರುಗಳು ಮತ್ತು ಲೋಕಸಭಾ ಸದಸ್ಯ ಎಂಜಿನಿಯರ್ ರಶೀದ್ ಇಬ್ಬರೂ ಆರ್​ಎಸ್​ಎಸ್​ನ ಮಿತ್ರರು ಮತ್ತು ಮುಸ್ಲಿಮ್​ ಮತಗಳನ್ನು ವಿಭಜಿಸುವ ಸಲುವಾಗಿಯೇ ಅವರನ್ನು ಚುನಾವಣೆಯ ಕಣಕ್ಕೆ ಇಳಿಸಲಾಗಿದೆ ಡಾ. ಅಬ್ದುಲ್ಲಾ ಆರೋಪಿಸಿದ್ದಾರೆ.

ಗಂದರ್ ಬಾಲ್ ಜಿಲ್ಲೆಯಲ್ಲಿ ತಮ್ಮ ಪಕ್ಷದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ನಾನು ಕೇವಲ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಎಂಜಿನಿಯರ್ ರಶೀದ್ ಅವರನ್ನು ಮೊದಲೇ ಏಕೆ ಜೈಲಿನಿಂದ ಬಿಡುಗಡೆ ಮಾಡಲಿಲ್ಲ ಮತ್ತು ಈಗ ಅವರನ್ನು ಬಿಡುಗಡೆ ಮಾಡಿರುವ ಉದ್ದೇಶವೇನು? ಅವರು ಆರ್​ಎಸ್​ಎಸ್​ನ ಮಿತ್ರರಾಗಿದ್ದು, ಮುಸ್ಲಿಮರ ಮತಗಳನ್ನು ವಿಭಜಿಸುವ ಸಲುವಾಗಿಯೇ ಅವರನ್ನು ಚುನಾವಣೆಯಲ್ಲಿ ನಿಲ್ಲಿಸಲಾಗಿದೆ" ಎಂದು ಅವರು ಹೇಳಿದರು.

ಸ್ಥಳೀಯ ಜಮಾತ್-ಎ-ಇಸ್ಲಾಮಿ (ಜೆಇಐ) ಸದಸ್ಯರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದ ಅವರು, "ನಿನ್ನೆಯವರೆಗೆ ರಾಜ್ಯದಲ್ಲಿ ಅವರು ಜನಮತಗಣನೆ ನಡೆಸುವ ಬಗ್ಗೆ ಮಾತನಾಡುತ್ತಿದ್ದರು ಮತ್ತು ಪಾಕಿಸ್ತಾನವನ್ನು ಬೆಂಬಲಿಸುವವರಾಗಿದ್ದರು. ಅವರ ಈ ನಿಲುವು ಏನಾಯಿತು ಎಂದು ಅವರನ್ನು ಕೇಳಬೇಕಿದೆ. ಅವರೆಲ್ಲರೂ ಆರ್​ಎಸ್​ಎಸ್​ನ ಸ್ನೇಹಿತರಾಗಿದ್ದಾರೆ" ಎಂದು ಅಬ್ದುಲ್ಲಾ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅಬ್ದುಲ್ಲಾ ಆರೋಪಿಸಿದರು. "ಅವರು (ಕೇಂದ್ರ) ಕಳೆದ ಐದು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರವನ್ನು ಆಳುತ್ತಿದ್ದಾರೆ. ಇಲ್ಲಿಗೆ ಬಂದೂಕುಗಳನ್ನು ತಂದು ನಮ್ಮ ನಾಗರಿಕರನ್ನು ಮತ್ತು ಸೈನಿಕರನ್ನು ಕೊಲ್ಲುತ್ತಿರುವವರು ಯಾರು? ಫಾರೂಕ್ ಅಬ್ದುಲ್ಲಾ ಆ ಬಂದೂಕುಗಳನ್ನು ಇಲ್ಲಿಗೆ ತಂದಿದ್ದರೇ? ಭಯೋತ್ಪಾದನೆಯು ಕೊನೆಯ ಹಂತದಲ್ಲಿದೆ ಎಂದು ನೀವು (ಪ್ರಧಾನಿ) ಹೇಳಿದ್ದೀರಿ. ಹಾಗಾದರೆ ನಮ್ಮ ಜನರನ್ನು ಯಾರು ಕೊಲ್ಲುತ್ತಿದ್ದಾರೆ" ಎಂದು ಅವರು ಪ್ರಶ್ನಿಸಿದರು.

ಅಬ್ದುಲ್ಲಾ ಅವರ ಪುತ್ರ ಮತ್ತು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಗಂದರ್​ಬಾಲ್​ ನಿಂದ ಎನ್ ಸಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು 2008 ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ಆದರೆ 2002 ರ ಚುನಾವಣೆಯಲ್ಲಿ ಪಿಡಿಪಿಯ ಖಾಜಿ ಅಫ್ಜಲ್ ವಿರುದ್ಧ ಸೋತಿದ್ದರು.

ಇದನ್ನೂ ಓದಿ : 'ಪ್ರಧಾನಿ ಹುದ್ದೆಯ ಆಫರ್​ ಬಂದಿತ್ತು, ನಿರಾಕರಿಸಿದೆ': ಸಚಿವ ಗಡ್ಕರಿ ಅಚ್ಚರಿಯ ಹೇಳಿಕೆ - Nitin Gadkari surprise statement

ABOUT THE AUTHOR

...view details