ಬಾರಾಮುಲ್ಲಾ, ಜಮ್ಮು- ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಸೋಪೋರ್ನಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಸೋಪೋರ್ನಲ್ಲಿ ಗುಜ್ಜರ್ ಪೇತಿ ಜಾಲೂರು ಪ್ರದೇಶದಲ್ಲಿನ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಚಟುವಟಿಕೆಯ ನಡೆದಿದ್ದು, ಇದರಲ್ಲಿ ಸೋಪೋರ್ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಪಡೆಗಳು ಭಯೋತ್ಪಾದಕರ ಅಡಗುತಾಣದ ಮೇಲೆ ದಾಳಿ ನಡೆಸಿದ್ದು, ಮೂಲಗಳ ಪ್ರಕಾರ, ಇಬ್ಬರು ಭಯೋತ್ಪಾದಕರು ಸಿಲುಕಿದ್ದಾರೆ ಎನ್ನಲಾಗಿದೆ.
ಈ ಪ್ರದೇಶದಿಂದ ಹೊರ ಬಿದ್ಧಿರುವ ವರದಿ ಅನುಸಾರ, ಕಳೆದ 24 ಗಂಟೆಗಳಿಂದ ಭಾರಿ ಕಾರ್ಯಾಚರಣೆ ನಡೆಸಿದ್ದು, ಭದ್ರತಾ ಪಡೆಗಳು ಗುಜ್ಜರ್ ಪೇತಿ ಜಾಲೂರ ಅರಣ್ಯದಲ್ಲಿನ ಶೋಧ ಕಾರ್ಯ ಮುಂದುವರೆದಿದೆ. ಅಡುಗುತಾಣವನ್ನು ಭದ್ರತಾ ಪಡೆ ಪತ್ತೆ ಮಾಡಿ ದಾಳಿಗೆ ಮುಂದಾಗಿದೆ. ಗುಂಡಿನ ಸದ್ದು ಕೇಳಿ ಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.