ಲಖನೌ(ಉತ್ತರ ಪ್ರದೇಶ): ಅಪ್ರಾಪ್ತ ಬಾಲಕನೋರ್ವ ತನ್ನ ಸೋದರ ಮಾವ ಮತ್ತು ಆತನ ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ರಾಜೇಂದ್ರ ಸಿಂಗ್ (62) ಹಾಗು ಪತ್ನಿ ಸರೋಜಾ (56) ಮೃತರು. ಇವರ ಪುತ್ರ ಕೂಡ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಪೂರ್ಣ ವಿವರ: ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಖ್ರೋಖಿ ಪ್ರದೇಶದಲ್ಲಿ ರಾಜೇಂದ್ರ ಸಿಂಗ್ ಕುಟುಂಬ ವಾಸವಾಗಿತ್ತು. ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ರಾಜೇಂದ್ರ ಮತ್ತು ತನ್ನ ಸಹೋದರಿಯಾದ ಆರೋಪಿಯ ತಾಯಿ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಈ ವೇಳೆ, ಸಹೋದರಿಯ ಮಗನಾದ ಬಾಲಕ, ರಾಜೇಂದ್ರ, ಆತನ ಪತ್ನಿ ಹಾಗೂ ಮಗ ಸೇರಿ ಮೂವರ ಮೇಲೂ ಗುಂಡು ಹಾರಿಸಿದ್ದಾನೆ.