ಕರ್ನಾಟಕ

karnataka

ETV Bharat / bharat

ಜಾರ್ಖಂಡ್‌ನಲ್ಲಿ ED ಮಹತ್ವದ ದಾಳಿ: ಸಚಿವನ ಆಪ್ತ ಕಾರ್ಯದರ್ಶಿಯ ಕೆಲಸದವನ ಮನೆಯಲ್ಲಿ ₹25 ಕೋಟಿ ಪತ್ತೆ- ವಿಡಿಯೋ - ED Raid In Ranchi - ED RAID IN RANCHI

ಜಾರ್ಖಂಡ್‌ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಹುದೊಡ್ಡ ಪ್ರಮಾಣದ ದಾಳಿ ನಡೆಸಿದೆ. ಗ್ರಾಮೀಣಾಭಿವೃದ್ಧಿ ಸಚಿವ ಅಲಂಗಿರ್ ಅಲಂ ಅವರ ಆಪ್ತ ಕಾರ್ಯದರ್ಶಿ ಸಂಜಿವ್ ಲಾಲ್ ಎಂಬವರ ನೌಕರನ ಮನೆಯಲ್ಲಿ 25 ಕೋಟಿ ರೂಪಾಯಿ ನಗದು ಸಿಕ್ಕಿದೆ. ಪತ್ತೆಯಾದ ಕಂತೆ ಕಂತೆ ನೋಟುಗಳು ಅಚ್ಚರಿ ಹುಟ್ಟಿಸುವಂತಿವೆ. ವಿರೇಂದ್ರ ರಾಮ್‌ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ರಾಂಚಿಯ ವಿವಿಧೆಡೆ ಇಡಿ ದಾಳಿ ಕೈಗೊಂಡಿದ್ದಾರೆ.

ಜಾರ್ಖಂಡ್‌ನಲ್ಲಿ ED ದಾಳಿಯಲ್ಲಿ ಪತ್ತೆಯಾದ ಹಣದ ರಾಶಿ
ಜಾರ್ಖಂಡ್‌ನಲ್ಲಿ ED ದಾಳಿ, ಪತ್ತೆಯಾದ ಹಣದ ರಾಶಿ (ANI)

By ETV Bharat Karnataka Team

Published : May 6, 2024, 9:53 AM IST

Updated : May 6, 2024, 1:46 PM IST

ರಾಂಚಿ(ಜಾರ್ಖಂಡ್‌): ಜಾರ್ಖಂಡ್‌ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ವಿರೇಂದ್ರ ರಾಮ್ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ (ಇಡಿ), ರಾಜಧಾನಿ ರಾಂಚಿಯ ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ, ಸಚಿವ ಅಲಂಗಿರ್ ಅಲಂ ಆಪ್ತ ಕಾರ್ಯದರ್ಶಿಯಾಗಿರುವ ಸಂಜಿವ್ ಲಾಲ್ ಎಂಬವರ ನೌಕರನ ಮನೆಯಲ್ಲಿ 25 ಕೋಟಿ ರೂ.ಗೂ ಹೆಚ್ಚು ನಗದು ಸಿಕ್ಕಿದೆ. ಹಣದ ಕಂತೆಗಳ ರಾಶಿಯನ್ನು ದೃಶ್ಯದಲ್ಲಿ ನೋಡಬಹುದು.

ಇಡಿ ದಾಳಿಗೆ ಒಳಗಾಗಿರುವ ಈ ಆವರಣವು ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆ ಕೆಲಸದವನಿಗೆ ಸೇರಿದೆ ಎಂದು ಮೂಲಗಳು ತಿಳಿಸಿವೆ. ದಾಳಿಯ ವೇಳೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಕೋಣೆಯಲ್ಲಿ ದೊಡ್ಡ ಚೀಲಗಳಿಂದ ನೋಟುಗಳನ್ನು ಕೆಳಗೆ ಸುರಿಯುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. 500 ರೂಪಾಯಿ ಮುಖಬೆಲೆಯ ನೋಟುಗಳು ಹಾಗೂ ಕೆಲವು ಆಭರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಅಲಂಗೀರ್ ಆಲಂ ಪ್ರತಿಕ್ರಿಯೆ:ಸಚಿವ ಅಲಂಗೀರ್ ಆಲಂ (70) ಕಾಂಗ್ರೆಸ್ ನಾಯಕರಾಗಿದ್ದು, ಜಾರ್ಖಂಡ್ ವಿಧಾನಸಭೆಯಲ್ಲಿ ಪಾಕುರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ದಾಳಿಯ ಬಗ್ಗೆ ಪ್ರತಿಕ್ರಿಯಿಸಿ ಅವರು, "ಸಂಜೀವ್ ಲಾಲ್ ಸರ್ಕಾರಿ ಉದ್ಯೋಗಿ. ನನ್ನ ಆಪ್ತ ಕಾರ್ಯದರ್ಶಿ. ಸಂಜೀವ್ ಲಾಲ್ ಈಗಾಗಲೇ ಇಬ್ಬರು ಮಾಜಿ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ನಾವು ಸಾಮಾನ್ಯವಾಗಿ ಅನುಭವದ ಆಧಾರದ ಮೇಲೆ ವೈಯಕ್ತಿಕ ಕಾರ್ಯದರ್ಶಿಯನ್ನು ನೇಮಿಸುತ್ತೇವೆ. ಇಡಿ ತನಿಖೆ ಪೂರ್ಣಗೊಳ್ಳುವ ಮುನ್ನವೇ ದಾಳಿಗಳ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ'' ಎಂದು ತಿಳಿಸಿದ್ದಾರೆ.

ಈ ಪ್ರಕರಣದ ಮುಖ್ಯ ಆರೋಪಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವಿರೇಂದ್ರ ಕೆ.ರಾಮ್ ಎಂಬವರನ್ನು ಇಡಿ 2023ರ ಫೆಬ್ರವರಿಯಲ್ಲಿ ಬಂಧಿಸಿತ್ತು. ಸರ್ಕಾರದ ಯೋಜನೆಗಳ ಅನುಷ್ಠಾನಗೊಳಿಸುವಾಗ ವ್ಯಾಪಕ ಭ್ರಷ್ಟಾಚಾರ ಎಸಗಿರುವ ಗಂಭೀರ ಆರೋಪಗಳು ಹಾಗು ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಇವರ ಮೇಲಿವೆ. ಇದೇ ಪ್ರಕರಣದಲ್ಲಿ ಇಡಿ ಮತ್ತಷ್ಟು ತನಿಖೆ ಕೈಗೊಂಡಿದೆ.

ಇದನ್ನೂ ಓದಿ:ಆಂಧ್ರ ಡಿಜಿಪಿ ವರ್ಗಾವಣೆ ಮಾಡಿ ಚುನಾವಣಾ ಆಯೋಗ ಆದೇಶ - Andhra DGP transfer

Last Updated : May 6, 2024, 1:46 PM IST

ABOUT THE AUTHOR

...view details