ಕರ್ನಾಟಕ

karnataka

ETV Bharat / bharat

ಗುಡ್​ ನ್ಯೂಸ್: 2025ರಲ್ಲಿ ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ: ಆರ್ಥಿಕ ಸಮೀಕ್ಷೆ ವರದಿ - GOLD PRICE

2025ರಲ್ಲಿ ಚಿನ್ನದ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ, ಬೆಳ್ಳಿಯ ಬೆಲೆಗಳು ಹೆಚ್ಚಾಗಬಹುದು ಎಂದು ಆರ್ಥಿಕ ಸಮೀಕ್ಷೆಗಳು ತಿಳಿಸಿವೆ.

Gold prices
ಚಿನ್ನದ ಬೆಲೆ ಏರಿಕೆ (ANI)

By ETV Bharat Karnataka Team

Published : Jan 31, 2025, 9:16 PM IST

Updated : Jan 31, 2025, 9:29 PM IST

ನವದೆಹಲಿ : 2024-25ರ ಆರ್ಥಿಕ ಸಮೀಕ್ಷೆಯ ಪ್ರಕಾರ, ನೀವು ಚಿನ್ನಾಭರಣ ಖರೀದಿ ಯೋಜನೆ ಕಾರ್ಯಗತಗೊಳಿಸಲು ಈ ವರ್ಷ ಅತ್ಯುತ್ತಮವಾಗಿದೆ. 2025ರಲ್ಲಿ ಚಿನ್ನದ ಬೆಲೆಗಳು ಕಡಿಮೆಯಾಗಬಹುದು ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರಬಹುದು ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.

ವಿಶ್ವಬ್ಯಾಂಕ್‌ನ ಸರಕು ಮಾರುಕಟ್ಟೆಗಳ ದೃಷ್ಟಿಕೋನದ ಪ್ರಕಾರ, 2025 ರಲ್ಲಿ ಸರಕುಗಳ ಬೆಲೆಗಳು ಶೇಕಡಾ 5.1 ಮತ್ತು 2026 ರಲ್ಲಿ ಶೇಕಡಾ 1.7 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಆರ್ಥಿಕ ಸಮೀಕ್ಷೆಯ ವರದಿ ತಿಳಿಸಿದೆ.

ವರದಿಯ ಪ್ರಕಾರ, ತೈಲ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಲಿದ್ದು, ನೈಸರ್ಗಿಕ ಅನಿಲದ ಬೆಲೆ ಹೆಚ್ಚಳವಾಗಲಿದೆ. ಜೊತೆಗೆ ಲೋಹಗಳು ಮತ್ತು ಕೃಷಿ ಕಚ್ಚಾ ವಸ್ತುಗಳ ಬೆಲೆ ಸ್ಥಿರವಾಗಿರುವ ನಿರೀಕ್ಷೆ ಇದೆ. ಕಬ್ಬಿಣದ ಅದಿರು ಮತ್ತು ಸತು ಬೆಲೆಗಳಲ್ಲಿನ ಇಳಿಕೆಯಿಂದಾಗಿ ಲೋಹಗಳು ಮತ್ತು ಖನಿಜಗಳ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಪ್ರಮಾಣ ಕಡಿಮೆಯಾಗಿದ್ದು, ದೇಶೀಯ ಹಣದುಬ್ಬರ ಧನಾತ್ಮಕ ದೃಷ್ಟಿಕೋನ ಹೊಂದಿರಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಚಿನ್ನದ ಬೆಲೆಯಲ್ಲಿನ ಯೋಜಿತ ಕುಸಿತವು ಹೂಡಿಕೆದಾರರ ಮೇಲೆ ಪರಿಣಾಮ ಬೀರಬಹುದು, ಅದೇ ರೀತಿ ಬೆಳ್ಳಿಯ ಬೆಲೆಯಲ್ಲಿ ನಿರೀಕ್ಷಿತ ಏರಿಕೆಯು ಹೂಡಿಕೆದಾರರ ಸರಿದೂಗಿಸಿಕೊಳ್ಳಲು ನೆರವಾಗಬಹುದು ಎಂದಿದೆ. ಜಾಗತಿಕ ಅನಿಶ್ಚಿತತೆ ಹೆಚ್ಚಳವಾಗಿರುವುದು ವಿದೇಶಿ ವಿನಿಮಯ ಮೀಸಲುಗಳ ಸಂಯೋಜನೆ ಏರಿಳಿತಗಳಿಗೆ ಕಾರಣವಾಗಿದೆ. 2ನೇ ವಿಶ್ವಯುದ್ಧದ ಬಳಿಕ ಚಿನ್ನದ ಗಟ್ಟಿ ಬೆಲೆ ಅತ್ಯಧಿಕ ಮಟ್ಟವನ್ನು ಕಂಡಿತು. ದೇಶಗಳು ಚಿನ್ನದ ಸಂಗ್ರಹ ಹೆಚ್ಚಿಸಿಕೊಳ್ಳುವ ಮೂಲಕ ಇದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಚಿನ್ನದ ಬೆಲೆಯಲ್ಲಿನ ಯೋಜಿತ ಕುಸಿತವು ಹೂಡಿಕೆದಾರರ ಭಾವನೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರೀಕ್ಷಿತ ಏರಿಕೆಯು ಷೇರು ಮಾರುಕಟ್ಟೆಗೆ ಸ್ವಲ್ಪ ಬೆಂಬಲವನ್ನು ನೀಡಬಹುದು ಎಂದು ಸಮೀಕ್ಷೆಯು ಗಮನಿಸಿದೆ. ಜಾಗತಿಕ ಬೆಳವಣಿಗೆಗಳ ನಡುವೆ ತಜ್ಞರು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ಏಕೆಂದರೆ ಅವರು ಜಾಗತಿಕವಾಗಿ ಯಾವುದೇ ಕೆಳಮುಖ ಪ್ರವೃತ್ತಿ ನಿರೀಕ್ಷಿಸುವುದಿಲ್ಲ. ಭಾರತ ಸರ್ಕಾರವು ಬಜೆಟ್‌ನಲ್ಲಿ ಕೆಲವು ಕ್ರಮಗಳನ್ನು ಕೈಗೊಂಡರೆ ಚಿನ್ನದ ಬೆಲೆಗಳು ಕಡಿಮೆಯಾಗಬಹುದು ಎಂದು ಅವರೆಲ್ಲ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ತಜ್ಞರು ಹೇಳುವುದಿಷ್ಟು: ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಕರೆನ್ಸಿ ಮತ್ತು ಸರಕು ವಿಭಾಗದ ಮುಖ್ಯಸ್ಥ ಅನುಜ್ ಗುಪ್ತಾ, ಚಿನ್ನದ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂಬ ಆರ್ಥಿಕ ಸಮೀಕ್ಷೆಯ ಹೇಳಿಕೆಯ ಕುರಿತು ETV ಭಾರತ್‌ನೊಂದಿಗೆ ಮಾತನಾಡಿದರು. ಸಮೀಕ್ಷೆಯ ಭವಿಷ್ಯವು ವಿಶ್ವಬ್ಯಾಂಕ್‌ನ ಮೇಲ್ನೋಟದ ವರದಿಯನ್ನು ಆಧರಿಸಿದೆಯಾದರೂ, ಚಿನ್ನದ ಬೆಲೆ ಏರಿಕೆಯನ್ನು ತಡೆಯಲು ಸರ್ಕಾರವು ಶನಿವಾರದ ಬಜೆಟ್‌ನಲ್ಲಿ ಗಮನಾರ್ಹವಾದದ್ದನ್ನು ಘೋಷಿಸಬಹುದು ಎಂಬ ಸಂಕೇತವನ್ನೂ ಅವರು ಉಲ್ಲೇಖಿಸಿದ್ದಾರೆ. ಪ್ರಸ್ತುತ, ಚಿನ್ನದ ಬೆಲೆಗಳ ಪ್ರವೃತ್ತಿ ಮೇಲ್ಮುಖವಾಗಿಯೇ ಚಲಿಸುತ್ತಿದೆ. ಸರ್ಕಾರ ಬಜೆಟ್‌ನಲ್ಲಿ ಆಮದು ಸುಂಕವನ್ನು ಕಡಿಮೆ ಮಾಡಿದರೆ ಅಥವಾ ಚಿನ್ನದ ಬಳಕೆಗೆ ತಡೆಯೊಡ್ಡುವ ಯಾವುದೇ ಕ್ರಮಗಳನ್ನು ತೆಗೆದುಕೊಂಡರೆ, ಬೆಲೆಗಳು ಕುಸಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :ಅಗ್ಗದ ಬೆಲೆಯಲ್ಲಿ ಚಿನ್ನ ಸಿಗುವುದು ಇಲ್ಲಿ ಮಾತ್ರ: ಇಲ್ಲಿಗೆ ಭೇಟಿ ನೀಡಿ ಟ್ಯಾಕ್ಸ್ ಇಲ್ಲದೇ ಬಂಗಾರ ಕೊಳ್ಳಿ, ಷರತ್ತುಗಳು ಅನ್ವಯ!! - CHEAPEST GOLD PRICE IN WORLD

Last Updated : Jan 31, 2025, 9:29 PM IST

ABOUT THE AUTHOR

...view details