ಕೋಟಾ, ರಾಜಸ್ಥಾನ: ಪರಿಸರ ಸಂರಕ್ಷಣೆಯ ಕುರಿತು ವಿನೂತನ ಜಾಗೃತಿಗಳನ್ನು ಕಾಣುವುದು ಸಹಜ. ಇದರಲ್ಲಿ ಕೋಟಾ ದಂಪತಿಗಳ ಹೆಜ್ಜೆ ವಿಶೇಷವಾಗಿದೆ. ಕೋಟಾದ ಈ ದಂಪತಿ ತಮ್ಮ ಮಗನ ಮದುವೆ ಆಮಂತ್ರಣವನ್ನು ವಿಶೇಷವಾಗಿ ವಿನ್ಯಾಸ ಮಾಡವ ಮೂಲಕ ಪರಿಸರಾತ್ಮಕ ಕ್ರಮಕ್ಕೆ ಮುಂದಾಗಿದೆ. ಮದುವೆಯನ್ನು ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಪೇಪರ್ ಬದಲಾಗಿ ದಂಪತಿಗಳು ಬಟ್ಟೆಯಲ್ಲಿ ಮದುವೆ ಆಮಂತ್ರಣ ಪ್ರಕಟಿಸಿದ್ದಾರೆ. ಆಮಂತ್ರಣ ಬಟ್ಟೆ ಕರ ವಸ್ತ್ರದ ರೀತಿಯಲ್ಲಿದ್ದು, ಇದನ್ನು ಬಳಕೆ ಮಾಡುವುದು ಸುಲಭ ಎನ್ನುತ್ತಾರೆ ಅವರು.
ಬಟ್ಟೆಯಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಲು ಪ್ರಮುಖ ಕಾರಣ ಎಂದರೆ, ಪತ್ರಿಕೆಯಲ್ಲಿ ಮುದ್ರಿಸಿದ ದೇವರ ಚಿತ್ರಗಳು ಕಡೆಗೆ ಕಸದ ಬುಟ್ಟಿಗೆ ಸೇರಬಾರದು ಹಾಗೇ ಪತ್ರಿಕೆಗೆ ಬಳಕೆ ಮಾಡಲು ಮರಗಳನ್ನು ಕಡಿಯುವುದನ್ನು ತಪ್ಪಿಸಬಹುದು ಅಂತಾರೆ ವೈದ್ಯ ದಂಪತಿಗಳಾದ ಡಾ ಗಿರೀಶ್ ಚಂದ್ ಶರ್ಮಾ ಮತ್ತು ಅವರ ಪತ್ನಿ ಡಾ ರಶ್ಮಿ ತಿವಾರಿ. ಕೋಟಾದ ರಾಂಗಬಿರ್ ಯೋಜ್ನದಲ್ಲಿ ಇವರು ನೆಲೆಸಿದ್ದು, ತಮ್ಮ ಮಗನ ಮದುವೆಯಲ್ಲಿ ತೆಗೆದುಕೊಂಡಿರುವ ನಿರ್ಧಾರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಐಡಿಯಾ ಹೊಳೆದಿದ್ದು ಹೀಗೆ:ಆರಂಭದಲ್ಲಿ ಆಮಂತ್ರಣ ಪತ್ರಿಕೆ ಮಾಡಿಸುವ ಉದ್ದೇಶ ಹೊಂದಿದ್ದರೂ, ಬಳಿಕ ಪರಿಸರ ಸ್ನೇಹಿ ಕರೆಯೋಲೆ ಸಂಬಂಧ ಮಕ್ಕಳ ಜೊತೆ ಚರ್ಚಿಸಿದ್ದರು . ಇದಕ್ಕಾಗಿ ಕುಟುಂಬಸ್ಥರು ಅನೇಕ ಸಂಶೋಧನೆ ಮಾಡಿ, ಪುಣೆಯಲ್ಲಿನ ಉಗಂ ಕಾರ್ಡ್ಸ್ನಲ್ಲಿ ಪೇಪರ್ಲೆಸ್ ಪರಿಸರ ಸ್ನೇಹಿ ಆಮಂತ್ರಣದ ಕುರಿತು ತಿಳಿದುಕೊಂಡಿದ್ದರು. ಅವರನ್ನು ಸಂಪರ್ಕಿಸಿ ಈ ಪರಿಸರ - ಸ್ನೇಹಿ ವಿವಾಹ ಆಮಂತ್ರಣ ರೂಪಿಸಿದ್ದಾರೆ.
ಬಜೆಟ್ ಸ್ನೇಹಿ: ಕರವಸ್ತ್ರದ ಗಾತ್ರದ ಬಟ್ಟೆಯಲ್ಲಿ ತಯಾರಾಗುವ ಪತ್ರಿಕೆಯ ಬಜೆಟ್ ಕೂಡ ಹೆಚ್ಚು ದುಬಾರಿಯಾಗಿಲ್ಲ. ಒಂದರ ಬೆಲೆ 35 ರೂ ಆಗಿದೆ. ನನ್ನ ಮಗಳ ಮದುವೆಯಲ್ಲಿ ಒಂದು ಕಾರ್ಡ್ಗೆ 37 ರೂ ಖರ್ಚು ಮಾಡಿದ್ದೆವು. ಅದಕ್ಕೆ ಹೋಲಿಕೆ ಮಾಡಿದರೆ ಇದು ಅಗ್ಗವಾಗಿದೆ. ನಾವು 800 ಪರಿಸರ ಸ್ನೇಹಿ ಆಮಂತ್ರಣ ಬಟ್ಟೆ ವಿವಾಹ ಆಮಂತ್ರಣವನ್ನ ಮುದ್ರಿಸಿದ್ದೇವೆ ಎಂದರು.