ನವದೆಹಲಿ: ಈ ತಿಂಗಳ ಮಧ್ಯದಲ್ಲಿ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಸಮಾವೇಶದಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ವಿಷಯವನ್ನು ಇಂದು ಪ್ರಕಟಿಸಿದರು.
ಪಾಕಿಸ್ತಾನ ಅ.15 ಮತ್ತು 16ರಂದು SCO ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (CHG) ಸಭೆ ಆಯೋಜಿಸಿದೆ.
"ಅಕ್ಟೋಬರ್ 15 ಮತ್ತು 16ರಂದು ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಎಸ್ಸಿಒ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವರು ನಮ್ಮ ನಿಯೋಗವನ್ನು ಮುನ್ನಡೆಸುತ್ತಾರೆ" ಎಂದು ಮಾಧ್ಯಮಗೋಷ್ಠಿಯಲ್ಲಿ ರಣಧೀರ್ ಜೈಸ್ವಾಲ್ ಹೇಳಿದರು.