ನಳಂದ (ಬಿಹಾರ): ಸೈಕಲ್ಗಳನ್ನು ಸುಲಭವಾಗಿ ಅಪಹರಿಸುವ ಸಾಧ್ಯತೆ ಇರುವ ಹಿನ್ನೆಲೆ ಅದಕ್ಕೊಂದು ಚೈನ್ ಕಟ್ಟಿ ಭದ್ರವಾಗಿಸಿ ತೆರಳುವುದು ಸಾಮಾನ್ಯ. ಆದರೆ, ಇಲ್ಲಿ ರೈಲಿಗೇ ಚೈನ್ನಿಂದ ಕಟ್ಟಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಅಚ್ಚರಿಯಾದರೂ ಇದು ನಿಜ. ಬೃಹದಾಕಾರದ ರೈಲಿಗೆ ಫ್ಲಾಟ್ಫಾರಂನಲ್ಲಿ ಅದರ ಲೊಕೊ ಪೈಲಟ್ ಮತ್ತು ಗಾರ್ಡ್ ಸರಪಳಿಯಿಂದ ಕಟ್ಟಿ ಹಾಕಿದ್ದಾರೆ. ಇದು ರೈಲ್ವೆ ಇಲಾಖೆಯಲ್ಲಿ ಹೊಸ ಸಂಚಲನ ಮೂಡಿಸಿದ್ದು, ಘಟನೆ ಕುರಿತು ತನಿಖೆಗೆ ರೈಲ್ವೆ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಏನಿದು ಘಟನೆ : ಬಿಹಾರದಲ್ಲಿ ಬಾಗಲ್ಪುರ- ಪಟ್ನಾ ಮಾರ್ಗ ಮಧ್ಯೆ ಸಂಚರಿಸುತ್ತಿದ್ದ ಗೂಡ್ಸ್ ರೈಲು ಬಾರ್ಹ ರೈಲು ನಿಲ್ದಾಣಕ್ಕೆ ಬಂದು ನಿಂತಿದೆ. ಈ ಹೊತ್ತಿಗೆ 8 ಗಂಟೆ ಕೆಲಸ ಮುಗಿಸಿದ ರೈಲಿನ ಲೊಕೊ ಪೈಲಟ್ ಮತ್ತು ಗಾರ್ಡ್ ಅಲ್ಲಿಯೇ ಫ್ಲಾಟ್ಫಾರಂ ನಂಬರ್ 2ರಲ್ಲಿ ರೈಲು ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ಅದಕ್ಕೆ ಚೈನ್ ಹಾಕಿ ಅದನ್ನು ಯಾರು ಒಯ್ಯದಂತೆ ಜೋಪಾನ ಮಾಡಿದ್ದಾರೆ.
ಭದ್ರತಾ ಕಾರಣದಿಂದ ಈ ಕ್ರಮ : ಬರ್ಹಾ ರೈಲು ನಿಲ್ದಾಣದಲ್ಲಿ ಸಂಜೆ 4ಗಂಟೆ ಬಳಿಕ ಈ ಘಟನೆ ಕಂಡ ರೈಲ್ವೆ ಸಿಬ್ಬಂದಿಗಳ ಅವಕ್ಕಾಗಿದ್ದಾರೆ. ಈ ಕುರಿತು ರೈಲ್ವೆ ಸಿಬ್ಬಂದಿಗಳು ಪ್ರಶ್ನಿಸಿದಾಗ ಸುರಕ್ಷತೆ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.