ಕರ್ನಾಟಕ

karnataka

ETV Bharat / bharat

ವಿದಾಯ ಕೂಟದಲ್ಲಿ 'ಶಾಶ್ವತ ವಿದಾಯ' ಹೇಳಿದ ಹೆಡ್ ಕಾನ್ಸ್​ಟೇಬಲ್​​​: ಕುಣಿಯುತ್ತಲೇ ಪ್ರಾಣ ಬಿಟ್ಟ! - Head constable Death - HEAD CONSTABLE DEATH

ಬೀಳ್ಕೊಡುಗೆಕಾರ್ಯಕ್ರಮದಲ್ಲಿ ಕುಣಿಯುತ್ತಿದ್ದ ಹೆಡ್ ಕಾನ್ಸ್​​ಟೇಬಲ್​​ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ವಿದಾಯ ಕೂಟದಲ್ಲಿ 'ಶಾಶ್ವತ ವಿದಾಯ' ಹೇಳಿದ ಹೆಡ್ ಕಾನ್ಸ್ಟೇಬಲ್
ವಿದಾಯ ಕೂಟದಲ್ಲಿ 'ಶಾಶ್ವತ ವಿದಾಯ' ಹೇಳಿದ ಹೆಡ್ ಕಾನ್ಸ್ಟೇಬಲ್ (ETV Bharat)

By ETV Bharat Karnataka Team

Published : Aug 30, 2024, 12:51 PM IST

ಸಾವಿಗೂ ಮುಂಚೆ ಹೆಡ್ ಕಾನ್ಸ್​ಟೇಬಲ್ ಕುಣಿದಿದ್ದ ದೃಶ್ಯ (ETV Bharat)

ನವದೆಹಲಿ:ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಎಲ್ಲರೊಂದಿಗೆ ಕುಣಿಯುತ್ತಿರುವಾಗಲೇ ಹೆಡ್ ಕಾನ್ಸ್​​ಟೇಬಲ್​ ಕುಸಿದು ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ.

ಉತ್ತರ ದೆಹಲಿಯ ರೂಪನಗರ ಪೊಲೀಸ್ ಠಾಣೆಯಲ್ಲಿ 28ರ ಬುಧವಾರ ರಾತ್ರಿ SHO ಅವರ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಲ್ಲರೂ ಎಂಜಾಯ್​ ಮಾಡುತ್ತಾ, ಹರಟೆ ಹೊಡೆಯುತ್ತಾ ಸಂಭ್ರಮಿಸುತ್ತಿದ್ದರು. ಈ ವೇಳೆ ದೆಹಲಿ ಪೊಲೀಸ್​ ಠಾಣೆಯ ಹೆಡ್ ಕಾನ್ಸ್​​ಟೇಬಲ್​ ರವಿಕುಮಾರ್ ಎಂಬುವವರು​ ಡ್ಯಾನ್ಸ್​ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಎದೆನೋವು ಎಂದು ಹೇಳಿದ್ದಾರೆ. ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ರವಿಕುಮಾರ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ರವಿಕುಮಾರ್​ ಅವರು ಸಾಯುವ ಮುನ್ನದ ಡ್ಯಾನ್ಸ್​ ವಿಡಿಯೋ ರೆಕಾರ್ಡ್​ ಮಾಡಲಾಗಿದ್ದು ಎಲ್ಲೆಡೆ ವೈರಲಾಗುತ್ತಿದೆ. ಪೊಲೀಸ್ ಅಧಿಕಾರಿಗಳಿಂದ ಬಂದ ಮಾಹಿತಿಯ ಪ್ರಕಾರ ಮೃತ ರವಿಕುಮಾರ್​ ಹೃದ್ರೋಗದಿಂದ ಬಳಲುತ್ತಿದ್ದರು. ಇವರು 45 ದಿನಗಳ ಹಿಂದೆ ಆಂಜಿಯೋಗ್ರಫಿ ಮಾಡಿಸಿಕೊಂಡಿದ್ದರಂತೆ.

ಉತ್ತರ ಪ್ರದೇಶದ ಬಾಗ್‌ಪತ್ ನಿವಾಸಿಯಾಗಿರುವ ರವಿಕುಮಾರ್ ಅವರು ಉತ್ತರ ದೆಹಲಿಯ ರೂಪನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್​ಟೇಬಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಕಣ್ಣೆದುರೇ ಸಂತೋಷದಿಂದ ನಲಿಯುತ್ತಿದ್ದ ವ್ಯಕ್ತಿಯ ಹಠಾತ್​ ಸಾವು ವಿದಾಯ ಕೂಟವನ್ನು ದುಃಖದ ಕೂಟವನ್ನಾಗಿ ಬದಲಾಯಿಸಿತು.

ಇದನ್ನೂ ಓದಿ:ತ್ರಿಪುರಾ ಪ್ರವಾಹ; ಇಡೀ ರಾಜ್ಯವನ್ನು ನೈಸರ್ಗಿಕ ವಿಕೋಪ ಎಂದು ಘೋಷಿಸಿದ ರಾಜ್ಯ ಸರ್ಕಾರ - TRIPURA FLOOD

ABOUT THE AUTHOR

...view details