ಕರ್ನಾಟಕ

karnataka

ETV Bharat / bharat

ಹೆಂಡತಿಯಿಂದ ಕಿರುಕುಳ ಆರೋಪ: ದೆಹಲಿ ಕೆಫೆ ಮಾಲೀಕ ಸಾವಿಗೆ ಶರಣು - DELHI CAFE OWNER DIED

ಬೆಂಗಳೂರು ಟೆಕ್ಕಿ ಸಾವು ಮಾಸುವ ಮುನ್ನವೇ ಅದೇ ರೀತಿಯಾದ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

Delhi cafe owner commits suicide amid ongoing divorce case; family alleges harassment by wife
ಸಾವನ್ನಪ್ಪಿದ ಕೆಫೆ ಮಾಲೀಕ ಪುನೀತ್​- ಆತನ ಹೆಂಡತಿ (ಐಎಎನ್​ಎಸ್​)

By IANS

Published : Jan 1, 2025, 5:15 PM IST

ನವದೆಹಲಿ: ಹೆಂಡತಿ ವಿಚ್ಛೇದನ ಕಿರುಕುಳ ನೀಡಿದ ಹಿನ್ನೆಲೆ ಬೆಂಗಳೂರು ಟೆಕ್ಕಿ ಸಾವು ಸಂಭವಿಸಿತ್ತು. ಈ ಸಾವು ಮಾಸುವ ಮುನ್ನವೇ ಅದೇ ರೀತಿಯ ಘಟನೆ ರಾಷ್ಟ್ರ ರಾಜಧಾನಿಯಿಂದ ವರದಿಯಾಗಿದೆ. ಪತ್ನಿಯ ಕಿರುಕುಳಕ್ಕೆ ಬೇಸತ್ತ 39 ವರ್ಷದ ಕೆಫೆ ಮಾಲೀಕ ಪುನೀತ್​ ಖುರನಾ ಮೃತಪಟ್ಟಿದ್ದಾರೆ.

ದೆಹಲಿಯ ಕಲ್ಯಾಣ್​ ವಿಹಾರ್​ ನಿವಾಸಿಯಾಗಿರುವ ಪುನೀತ್​ ಹೆಂಡತಿ ಮನಿಕಾ ವಿಚ್ಛೇದನಕ್ಕೆ ಮುಂದಾಗಿದ್ದರು. ಈ ನಡುವೆ ಹೆಂಡತಿಯಿಂದ ನಿರಂತರ ಒತ್ತಡ ಮತ್ತು ಬೆದರಿಕೆ ಬಂದ ಹಿನ್ನೆಲೆ ಆತ ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ಕುಟುಂಬಸ್ಥರು ಮತ್ತು ಸ್ನೇಹಿತರು ಆರೋಪಿಸಿದ್ದಾರೆ.

ಕಳೆದ ಎಂಟು ವರ್ಷದ ಹಿಂದೆ ಮದುವೆಯಾಗಿದ್ದ ಇವರಿಬ್ಬರು ಕೆಫೆ ಉದ್ಯಮದಲ್ಲೂ ಕೂಡ ಸಹಭಾಗಿಯಾಗಿದ್ದರು. ಆದರೆ, ಇವರ ಮಧ್ಯೆ ನಿರಂತರ ಕಲಹ ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ ಕಳೆದೆರಡು ವರ್ಷದಿಂದ ಪ್ರತ್ಯೇಕ ವಾಸಕ್ಕೆ ಮುಂದಾಗಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಪುನೀತ್​ ಸ್ನೇಹಿತರೊಬ್ಬರು, ಸೋಮವಾರ ಸಂಜೆ ಆತ ನಮಗೆ ಕರೆ ಮಾಡಿದ್ದ, ಆಗ ತೀವ್ರ ಒತ್ತಡದಲ್ಲಿದ್ದು, ಮಾತನಾಡಬೇಕು ಎಂದಿದ್ದ. ಈ ವೇಳೆ, ಮನಿಕಾ ಕಟುಂಬಸ್ಥರು ತನ್ನ ತಂದೆ ಮತ್ತು ಸಂಬಂಧಿಕರಿಗೆ ಹಾನಿ ಮಾಡುವ ಸಾಧ್ಯತೆ ಕುರಿತು ಕಳವಳ ವ್ಯಕ್ತಪಡಿಸಿದ್ಧ. ಮಧ್ಯರಾತ್ರಿ 2ರವರೆಗೆ ನಮ್ಮ ಜೊತೆಗೆ ಇದ್ದ ಪುನೀತ್​ ಗೆ ಕಾನೂನು ನಮ್ಮ ಜೊತೆಯಲ್ಲಿದ್ದು, ನ್ಯಾಯ ಸಿಗಲಿದೆ ಎಂದು ಸಮಾಧಾನ ಮಾಡುವ ಪ್ರಯತ್ನ ಮಾಡಿದೆವು. ನಮ್ಮ ಪ್ರಯತ್ನದ ಹೊರತಾಗಿ ಆತ ಭಯದಲ್ಲೇ ಇದ್ದ ಎಂದು ಪುನೀತ್​ ಸ್ನೇಹಿತ ಹೇಳಿದ್ದಾನೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಮತ್ತೊಬ್ಬ ಸ್ನೇಹಿತ ಮಾತನಾಡಿ, ಪುನೀತ್​ ದೃಢ ವ್ಯಕ್ತಿಯಾಗಿದ್ದ. ಆದರೆ, ಆತನ ಪೋಷಕರನ್ನು ಗುರಿಯಾಗಿಸಿ ಬೆದರಿಕೆ ಬರುತ್ತಿದ್ದ ಹಿನ್ನೆಲೆ ಆತ ತುಂಬಾ ಒತ್ತಡಕ್ಕೆ ಒಳಗಾಗಿದ್ದ. ಪುನೀತ್​ ಸಹೋದರಿ ಕೂಡ ಇದೇ ರೀತಿ ಹೇಳಿಕೆ ನೀಡಿದ್ದು, ದಂಪತಿಗಳ ನಡುವೆ ಹಣಕಾಸು ಮತ್ತು ಉದ್ಯಮದ ಜಗಳದ ಹೊರತಾಗಿ ಆತನ ಹೆಂಡತಿ ಕುಟುಂಬದ ಕಡೆಯಿಂದ ಬೆದರಿಕೆಯನ್ನು ಆತ ನಿರಂತರವಾಗಿ ಎದುರಿಸುತ್ತಿದ್ದ ಎಂದಿದ್ದಾರೆ.

ಇಂತಹ ಕಠಿಣವಾದ ನಿರ್ಧಾರ ಕೈಗೊಳ್ಳುವ ಮುನ್ನ ಪುನೀತ ಪದೇ ಪದೆ ಆಡಿಯೋ ಮತ್ತು ವಿಡಿಯೋ ಕ್ಲಿಪ್​ ರೆಕಾರ್ಡ್​ ಮಾಡಿದ್ದಾನೆ. ಆದರೆ, ಪೊಲೀಸರು ಯಾವುದೇ ವಿಡಿಯೋ ಪಡೆದಿರುವುದಾಗಿ ತಿಳಿಸಿಲ್ಲ. ಆದರೆ, ಆತ್ಮಹತ್ಯೆಗೆ ಮುನ್ನ ರಾತ್ರಿ ಹೆಂಡತಿ ಜೊತೆಗೆ ಮಾತನಾಡಿರುವ ಆಡಿಯೋ ರೆಕಾರ್ಡ್​​ ಹರಿದಾಡುತ್ತಿದೆ. ಈ ಆಡಿಯೋದಲ್ಲಿ ಉದ್ಯಮ ಮತ್ತು ಹಣಕಾಸಿನ ವಿಚಾರವಾಗಿ ವಾಗ್ವಾದ ನಡೆದಿರುವುದು ಕಂಡು ಬಂದಿದೆ.

ಪೊಲೀಸರು ಪುನೀತ್​ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆತನ ಮೊಬೈಲ್ ಹಾಗೂ ಆಡಿಯೋ ಕ್ಲಿಪ್​ ಗಳನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಪರಸ್ಪರ ಒಪ್ಪಿಗೆ ಮೆರೆಗೆ ವಿಚ್ಛೇದನಕ್ಕೆ ಮುಂದಾಗಿದ್ದು, ದಂಪತಿಗಳಿಗೆ ಮಕ್ಕಳಿರಲಿಲ್ಲ.

ಇದನ್ನೂ ಓದಿ: ಹೊಸ ವರ್ಷದಂದೇ ಭೀಕರ ಕೊಲೆ ; ತಾಯಿ, ನಾಲ್ವರು ಸಹೋದರಿಯರನ್ನು ಕೊಂದ ಯುವಕ!

ಆತ್ಮಹತ್ಯೆ ಪರಿಹಾರವಲ್ಲ;ಎಲ್ಲ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದರೆ, ಅಥವಾ ಸ್ನೇಹಿತರ ಬಗ್ಗೆ ಚಿಂತೆ ಮಾಡುತ್ತಿದ್ದರೆ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ಯಾರಾದರೂ ನಿಮ್ಮ ನೋವನ್ನು ಕೇಳಲು ಇರುತ್ತಾರೆ. ಅದಕ್ಕಾಗಿ ಸ್ನೇಹ ಫೌಂಡೇಶನ್‌ಗೆ ಕರೆ ಮಾಡಿ - 04424640050 (24x7 ಲಭ್ಯವಿದೆ) ಅಥವಾ iCall, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ - 9152987821, ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10ರ ವರೆಗೆ ಲಭ್ಯವಿರುತ್ತದೆ).

ABOUT THE AUTHOR

...view details