- ನವದೆಹಲಿ ಕ್ಷೇತ್ರದಲ್ಲಿ ಸತತ ಹಿನ್ನಡೆ ಕಂಡಿದ್ದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಸೋಲು
- ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ಧ ಸೋತ ಕೇಜ್ರಿವಾಲ್
ದೆಹಲಿ ಚುನಾವಣೆ ಮತ ಎಣಿಕೆ: ಅತಿಶಿ ಸಿಂಗ್ ಗೆಲುವು; ಕೇಜ್ರಿವಾಲ್, ಮನೀಶ್ ಸಿಸೋಡಿಯಾಗೆ ಸೋಲು - DELHI ELECTIONS 2025
Published : Feb 8, 2025, 8:00 AM IST
|Updated : Feb 8, 2025, 1:09 PM IST
ನವದೆಹಲಿ:ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ದೆಹಲಿ ಮತದಾರರು ಆಮ್ ಆದ್ಮಿ ಪಕ್ಷ (AAP) ವನ್ನು ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆಗೆ ಏರಿಸುತ್ತಾರಾ? ಇಲ್ಲವೇ, 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಕಳೆದ ಎರಡು ಚುನಾವಣೆಗಳಲ್ಲಿ ಒಂದೂ ಸ್ಥಾನ ಗೆಲ್ಲದ ಕಾಂಗ್ರೆಸ್ ಕೂಡ ಫಲಿತಾಂಶದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದೆ. ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಯೇ ಗೆಲ್ಲುವ ಬಗ್ಗೆ ಭವಿಷ್ಯ ನುಡಿದಿವೆ. ಬೆಳಗ್ಗೆ 8 ಗಂಟೆಯಿಂದ ದೆಹಲಿಯ 11 ಜಿಲ್ಲೆಗಳ ಒಟ್ಟು 19 ಕೇಂದ್ರಗಳಲ್ಲಿ ಮತಗಳ ಎಣಿಕೆ ನಡೆಯುತ್ತಿದೆ. ಪಾರದರ್ಶಕತೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಚುನಾವಣಾ ಆಯೋಗ (ECI) ಸಂಪೂರ್ಣ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದೆ. ಜೊತೆಗೆ, ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ನೈಜ-ಸಮಯದ ಆಧಾರದ ಮೇಲೆ ಫಲಿತಾಂಶದ ಕುರಿತು ವಿವರಗಳನ್ನು ನೀಡುತ್ತಿದೆ. ಮತ ಎಣಿಕೆಯ ಲೈವ್ ಮಾಹಿತಿಗಾಗಿ ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಗಮನಿಸಬಹುದು. ಇದರಲ್ಲಿ ಕ್ಷೇತ್ರವಾರು ಫಲಿತಾಂಶ ಹಾಗೂ ವಿಜೇತರ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡಲಾಗುತ್ತದೆ. ಅದೇ ರೀತಿ, ಫಲಿತಾಂಶಗಳ ಸಮಗ್ರ ಲೈವ್ ಮಾಹಿತಿಗಾಗಿ ವೀಕ್ಷಕರು ಈಟಿವಿ ಭಾರತ (etvbharat.com) ಅನ್ನು ಪರಿಶೀಲಿಸುತ್ತಿರಿ.
LIVE FEED
ಕೇಜ್ರಿವಾಲ್ಗೆ ಸೋಲು
ಅತಿಶಿ ಸಿಂಗ್ ಜಯಭೇರಿ
- ಕಲ್ಕಾಜಿ ಕ್ಷೇತ್ರದಲ್ಲಿ ಹಾಲಿ ಸಿಎಂ ಅತಿಶಿ ಸಿಂಗ್ಗೆ ಗೆಲುವು
- ಬಿಜೆಪಿ ಅಭ್ಯರ್ಥು ರಮೇಶ್ ಬಿಧುರಿ ವಿರುದ್ಧ ಜಯಭೇರಿ
- ಸತತವಾಗಿ ಹಿನ್ನಡೆ ಅನುಭವಿಸಿದ್ದ ಅತಿಶಿ ಸಿಂಗ್
ಮನೀಶ್ ಸಿಸೋಡಿಯಾಗೆ ಸೋಲು
- ಜಂಗ್ಪುರ ಕ್ಷೇತ್ರದಲ್ಲಿ ಬಿಜೆಪಿಯ ತರವಿಂದರ್ ಸಿಂಗ್ ಮರ್ವಾ ವಿರುದ್ಧ ಆಪ್ನ ಮನೀಶ್ ಸಿಸೋಡಿಯಾಗೆ ಸೋಲು
- ಅಬಕಾರಿ ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ
- ಪತ್ಪರ್ಗಂಜ್ ವಿಧಾನಸಭಾ ಸ್ಥಾನದಿಂದ ಬಿಜೆಪಿಯ ರವೀಂದ್ರ ಸಿಂಗ್ ನೇಗಿ ಗೆಲುವು ಸಾಧಿಸಿದ್ದಾರೆ.
- ಲಕ್ಷ್ಮಿ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅಭಯ್ ವರ್ಮಾ ಜಯ ದಾಖಲಿಸಿದ್ದಾರೆ.
- ಕೊಂಡ್ಲಿ ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಗೆಲುವು ಕಂಡಿದ್ದಾರೆ.
ಕೇಜ್ರಿವಾಲ್ಗೆ ಹಿನ್ನಡೆ
- ನವದೆಹಲಿ ಕ್ಷೇತ್ರದಲ್ಲಿ 9ನೇ ಸುತ್ತಿನ ಮತ ಎಣಿಕೆ ಬಳಿಕವೂ ಅರವಿಂದ್ ಕೇಜ್ರಿವಾಲ್ ಅವರು 1,170 ಮತಗಳಿಂದ ಹಿನ್ನಡೆಯಲ್ಲಿದ್ದಾರೆ.
- ಬಿಜೆಪಿ ಅಭ್ಯರ್ಥಿ ಪರ್ವೇಶ್ ಸಿಂಗ್ 19,267 ಮತ ಪಡೆದರೆ, ಕೇಜ್ರಿವಾಲ್ 18,097 ಮತ ಗಳಿಸಿದ್ದಾರೆ.
ಅಣ್ಣಾ ಹಜಾರೆ ಪ್ರತಿಕ್ರಿಯೆ
ದೆಹಲಿ ಚುನಾವಣೆ ಫಲಿತಾಂಶದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಾತನಾಡಿದ್ದು, "ಚುನಾವಣೆಯಲ್ಲಿ ಸ್ಪರ್ಧಿಸುವಾಗ ಅಭ್ಯರ್ಥಿಗೆ ಉತ್ತಮ ವ್ಯಕ್ತಿತ್ವ, ಒಳ್ಳೆಯ ಆಲೋಚನೆಗಳಿರಬೇಕು. ಅಭ್ಯರ್ಥಿಯ ಇಮೇಜ್‌ಗೆ ಯಾವುದೇ ಹಾನಿಯಾಗಬಾರದು ಎಂದು ನಾನು ಬಹಳ ದಿನಗಳಿಂದ ಹೇಳುತ್ತಿದ್ದೇನೆ. ಆದರೆ, ಅವರಿಗೆ (ಎಎಪಿ) ಅದು ಸಿಗಲಿಲ್ಲ. ಅವರು ಮದ್ಯ ಮತ್ತು ಹಣದಲ್ಲಿ ಸಿಲುಕಿಕೊಂಡರು. ಇದರಿಂದಾಗಿ ಅವರ (ಅರವಿಂದ್ ಕೇಜ್ರಿವಾಲ್) ಇಮೇಜ್‌ಗೆ ಧಕ್ಕೆಯಾಯಿತು'' ಎಂದರು.
''ಹೀಗಾಗಿಯೇ ಈ ಚುನಾವಣೆಯಲ್ಲಿ ಅವರು ಕಡಿಮೆ ಮತಗಳನ್ನು ಪಡೆದಿದ್ದಾರೆ. ಅವರು (ಅರವಿಂದ್ ಕೇಜ್ರಿವಾಲ್) ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಮದ್ಯ ಹಗರಣದಲ್ಲಿ ತೊಡಗುತ್ತಾರೆ ಎಂಬುದನ್ನು ಜನರು ಕಂಡಿದ್ದಾರೆ. ರಾಜಕೀಯದಲ್ಲಿ ಆರೋಪಗಳನ್ನು ಮಾಡಲಾಗುತ್ತದೆ, ತಾನು ತಪ್ಪಿತಸ್ಥನಲ್ಲ ಎಂದು ಸಾಬೀತುಪಡಿಸಬೇಕು. ಸತ್ಯವು ಸತ್ಯವಾಗಿಯೇ ಉಳಿಯುತ್ತದೆ. ಹಿಂದೊಮ್ಮೆ ಸಭೆ ನಡೆದಾಗಲೇ ನಾನು ಎಎಪಿ ಭಾಗವಾಗುವುದಿಲ್ಲ ಎಂದು ನಿರ್ಧರಿಸಿದ್ದೆ. ಆ ದಿನದಿಂದಲೂ ನಾನು ಪಕ್ಷದಿಂದ ದೂರ ಉಳಿದಿದ್ದೇನೆ'' ಎಂದು ತಿಳಿಸಿದರು.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮ
ದೆಹಲಿಯಲ್ಲಿ ನಿರ್ಣಾಯಕ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ.
27 ವರ್ಷಗಳ ಬಳಿಕ ಕೇಸರಿ ಪಕ್ಷವು ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಮರಳುತ್ತಿರುವುದು ಪಕ್ಕಾ ಎಂಬುದು ಸದ್ಯದ ಮತ ಎಣಿಕೆ ಪ್ರಕ್ರಿಯೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿಗರು ದೆಹಲಿ ಪ್ರಧಾನ ಕಚೇರಿಯ ಹೊರಗೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಬೆಂಬಲಿಗರು ಪಕ್ಷದ ಧ್ವಜಗಳನ್ನು ಬೀಸುತ್ತ ನೃತ್ಯ ಮಾಡುತ್ತ ಸಂಭ್ರಮಿಸಿದರು. ಕಮಲದ ಕಟೌಟ್‌ಗಳನ್ನು ಹಿಡಿದು ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ. ಅಲ್ಲದೆ, ಪರಸ್ಪರ ಕೇಸರಿ ಬಣ್ಣದ ಪುಡಿಯನ್ನು ಬಳಿದುಕೊಂಡರು.
ಚುನಾವಣಾ ಆಯೋಗದ ಇತ್ತೀಚಿನ ಅಪ್ಡೇಟ್ ಪ್ರಕಾರ, ದೆಹಲಿಯ 70 ವಿಧಾನಸಭಾ ಸ್ಥಾನಗಳಲ್ಲಿ 41 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಎಎಪಿ 29 ಸ್ಥಾನಗಳಲ್ಲಿ ಮುಂದಿದೆ.
ಕೇಜ್ರಿವಾಲ್ಗೆ ಮತ್ತೆ ಹಿನ್ನಡೆ
- ನವದೆಹಲಿ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಮತ್ತೆ ಹಿನ್ನಡೆ ಆಗಿದೆ. ಕೇವಲ 225 ಮತಗಳು ಹಿಂದಿದ್ದಾರೆ.
- ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ರಿಸಲ್ಟ್
- 6ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ನಂತರ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಕೇಜ್ರಿವಾಲ್ಗೆ ಹಿನ್ನಡೆ
- ಕಲ್ಕಾಜಿ ಕ್ಷೇತ್ರದಲ್ಲಿ ದೆಹಲಿ ಸಿಎಂ ಅತಿಶಿಗೆ ಹಿನ್ನಡೆ
- ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಎದುರು 2800 ಮತಗಳಿಂದ ಹಿಂದಿರುವ ಸಿಎಂ
ಮುನ್ನಡೆಯಲ್ಲಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು
- ಬದರ್ಪುರ್ ಕ್ಷೇತ್ರದಿಂದ ಮೂರನೇ ಸುತ್ತಿನ ಮತ ಎಣಿಕೆ ನಂತರ ರಾಮ್ ಸಿಂಗ್ 12,791 ಮತಗಳಿಂದ ಮುನ್ನಡೆ
- ಚಾಂದನಿ ಚೌಕ್ ಕ್ಷೇತ್ರದಿಂದ ನಾಲ್ಕನೇ ಸುತ್ತಿನ ಎಣಿಕೆ ನಂತರ ಪುನರ್ದೀಪ್ ಸಿಂಗ್ 11,584 ಮತಗಳಿಂದ ಮೇಲುಗೈ
- ಮತಿಯಾ ಮಹಲ್ ವಿಧಾನಸಭಾ ಕ್ಷೇತ್ರದಿಂದ ಮೂರನೇ ಸುತ್ತಿನ ನಂತರ ಅಲಿ ಮೊಹಮ್ಮದ್ ಇಕ್ಬಾಲ್ 11,231 ಮತಗಳಿಂದ ಮುನ್ನಡೆ
- ತಿಲಕ್ ನಗರ ವಿಧಾನಸಭೆಯಿಂದ ಮೂರನೇ ಸುತ್ತಿನ ಎಣಿಕೆ ನಂತರ ಜರ್ನೈಲ್ ಸಿಂಗ್ 10,368 ಮತಗಳಿಂದ ಮೇಲುಗೈ
- ಬಾಬರ್‌ಪುರ ವಿಧಾನಸಭೆಯಿಂದ ಐದನೇ ಸುತ್ತಿನ ನಂತರ ಗೋಪಾಲ್ ರೈ 9017 ಮತಗಳಿಂದ ಮುಂದಿದ್ದಾರೆ.
ಮುನ್ನಡೆಯಲ್ಲಿರುವ ಬಿಜೆಪಿ ಅಭ್ಯರ್ಥಿಗಳು
- ನಾಲ್ಕನೇ ಸುತ್ತಿನ ಎಣಿಕೆಯ ನಂತರ ಬವಾನಾ ವಿಧಾನಸಭೆಯಿಂದ ರವೀಂದ್ರ ಇಂದ್ರಜ್ ಸಿಂಗ್ 14,420 ಮತಗಳಿಂದ ಮುನ್ನಡೆ.
- ನಾಲ್ಕನೇ ಸುತ್ತಿನ ಬಳಿಕ ಶಾಲಿಮಾ ಬಾಗ್ ವಿಧಾನಸಭೆಯಿಂದ ರೇಖಾ ಗುಪ್ತಾ 12,660 ಮತಗಳಿಂದ ಮೇಲುಗೈ.
- ಐದನೇ ಸುತ್ತಿನ ಎಣಿಕೆಯ ನಂತರ ತ್ರಿನಗರ ವಿಧಾನಸಭೆಯಿಂದ ತಿಲಕ್ ರಾಮ್ ಗುಪ್ತಾ 11,778 ಮತಗಳಿಂದ ಮುನ್ನಡೆ.
- ಮೂರನೇ ಸುತ್ತಿನಲ್ಲಿ ಮುಸ್ತಫಾಬಾದ್ ವಿಧಾನಸಭೆಯಿಂದ ಮೋಹನ್ ಸಿಂಗ್ ಬಿಶ್ಟ್ 16,181 ಮತಗಳಿಂದ ಮುನ್ನಡೆ.
- ಮೂರನೇ ಸುತ್ತಿನ ಫಲಿತಾಂಶದಲ್ಲಿ ಕರವಾಲ್ ನಗರ ವಿಧಾನಸಭೆಯಿಂದ ಕಪಿಲ್ ಮಿಶ್ರಾ 8,603 ಮತಗಳಿಂದ ಮುನ್ನಡೆ.
- ಏಳನೇ ಸುತ್ತಿನ ಮತ ಎಣಿಕೆ ಬಳಿಕ ವಿಶ್ವಾಸ್ ನಗರ ಕ್ಷೇತ್ರದಿಂದ ಓಂ ಪ್ರಕಾಶ್ ಶರ್ಮಾ 8,444 ಮತಗಳಿಂದ ಮುನ್ನಡೆ.
- ನಾಲ್ಕನೇ ಸುತ್ತಿನ ಫಲಿತಾಂಶದಲ್ಲಿ ನಜಾಫ್‌ಗಢ ವಿಧಾನಸಭೆಯಿಂದ ನೀಲಂ ಪೆಹಲ್ವಾನ್ 8,023 ಮತಗಳಿಂದ ಮುನ್ನಡೆ.
- ಮೂರನೇ ಸುತ್ತಿನ ಎಣಿಕೆ ನಂತರ ಪತ್ಪರ್‌ಗಂಜ್ ವಿಧಾನಸಭೆಯಿಂದ ರವೀಂದ್ರ ಸಿಂಗ್ ನೇಗಿ 7,229 ಮತಗಳಿಂದ ಮುನ್ನಡೆ.
ಸಿಎಂ ಅತಿಶಿಗೆ ಹಿನ್ನಡೆ
ಮೊದಲ ಸುತ್ತಿನ ಎಣಿಕೆಯ ಕೊನೆಯಲ್ಲಿ ಕಲ್ಕಾಜಿ ಕ್ಷೇತ್ರದಲ್ಲಿ ದೆಹಲಿ ಸಿಎಂ ಅತಿಶಿಗೆ ಹಿನ್ನಡೆ
ಬಿಜೆಪಿ ಪ್ರತಿಸ್ಪರ್ಧಿ ರಮೇಶ್ ಬಿಧುರಿಗಿಂತ 1,149 ಮತಗಳಿಂದ ಹಿಂದಿರುವ ಅತಿಶಿ
ದೆಹಲಿಯಿಂದ ಎಎಪಿ 'ಹೊರಹಾಕಲ್ಪಡುತ್ತದೆ' ಎಂದು ಬಿಧುರಿ ಹೇಳಿಕೆ
"ಜನರು ಬಿಜೆಪಿಗೆ ನಿರ್ಣಾಯಕ ಜನಾದೇಶ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ದೆಹಲಿಯು ದೇಶದ ಉಳಿದ ಭಾಗಗಳೊಂದಿಗೆ ಪ್ರಗತಿ ಸಾಧಿಸಲಿದೆ. ರಾಷ್ಟ್ರ ರಾಜಧಾನಿಯಿಂದ ಎಎಪಿ ನಿರ್ಮೂಲನೆಯಾಗುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ" ಎಂದು ರಮೇಶ್ ಬಿಧುರಿ ಹೇಳಿದರು.
''ಕಲ್ಕಾಜಿಯ ಮತದಾರರು ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಾರೆ'' ಎಂದು ಅವರು ಹೇಳಿದರು.
ಬಿಜೆಪಿಗೆ 42 ಕ್ಷೇತ್ರಗಳಲ್ಲಿ ಮುನ್ನಡೆ
28 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಎಎಪಿ
ಕಾಂಗ್ರೆಸ್ಗೆ ಭಾರಿ ಮುಖಭಂಗ (0 ಮುನ್ನಡೆ)
ಹಿನ್ನಡೆಯಲ್ಲಿದ್ದ ಕೇಜ್ರಿವಾಲ್ಗೆ ಮುನ್ನಡೆ
ನವದೆಹಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ 4,679 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ಪಟೇಲ್ ನಗರದಿಂದ ಆಮ್ ಆದ್ಮಿ ಪಕ್ಷದ ಪ್ರವೇಶ್ ರತನ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ತ್ರಿಲೋಕಪುರಿಯಲ್ಲಿ ಆಮ್ ಆದ್ಮಿ ಪಕ್ಷದ ಅಂಜನಾ ಪರ್ಚಾ 6,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಕೊಂಡ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ 2,000 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ಬಹುಮತದತ್ತ ಬಿಜೆಪಿ; 27 ವರ್ಷಗಳ ಬಳಿಕ ದಿಲ್ಲಿ ಗದ್ದುಗೆಯತ್ತ
- ಎಕ್ಸಿಟ್ ಪೋಲ್ ಗಳ ಭವಿಷ್ಯ ನಿಜವಾಗುವ ಸಾಧ್ಯತೆಗಳಿವೆ
- ಕೊನೆ ಕ್ಷಣದಲ್ಲಿ ಎಎಪಿ ಬಿಟ್ಟು ಬಿಜೆಪಿ ಸೇರಿದ್ದ ಕೆಲವರಿಗೆ ಮುನ್ನಡೆ
- ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಎನ್ನುತ್ತಿವೆ ಆರಂಭಿಕ ವರದಿಗಳು
37 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
ಆರಂಭಿಕ ಟ್ರೆಂಡ್ನಲ್ಲಿ ಬಿಜೆಪಿ 37 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ, ಎಎಪಿ 27 ಸ್ಥಾನಗಳಲ್ಲಿ ಮುನ್ನಡೆ ಹಾಗೂ ಕಾಂಗ್ರೆಸ್ 1ರಲ್ಲಿ ಮುನ್ನಡೆ ಗಳಿಸಿದೆ.
ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸ್ಪರ್ಧಿಸಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಿನ್ನಡೆಯಲ್ಲಿದ್ದಾರೆ.
ಕಲ್ಕಾಜಿ ಸ್ಥಾನದಲ್ಲಿ, ಮುಖ್ಯಮಂತ್ರಿ ಅತಿಶಿ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಹಿನ್ನಡೆಯಲ್ಲಿದ್ದಾರೆ.
ಜಂಗ್‌ಪುರದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಹಿನ್ನಡೆಯಲ್ಲಿದ್ದಾರೆ.
ಕಾರ್ವಾಲ್ ನಗರ ಅಭ್ಯರ್ಥಿ ಕಪಿಲ್ ಮಿಶ್ರಾ ಮುನ್ನಡೆಯಲ್ಲಿದ್ದರೆ, ಗ್ರೇಟರ್ ಕೈಲಾಶ್ ಸ್ಥಾನದಲ್ಲಿ ಎಎಪಿಯ ಸೌರಭ್ ಭಾರದ್ವಾಜ್ ಮುಂದಿದ್ದಾರೆ.
ಕೇಜ್ರಿವಾಲ್, ಸಿಸೋಡಿಯಾ, ಅತಿಶಿಗೆ ಆರಂಭಿಕ ಹಿನ್ನಡೆ
- ಆರಂಭಿಕ ಮತ ಎಣಿಕೆಯಲ್ಲಿ ಎಎಪಿ ಮತ್ತು ಬಿಜೆಪಿ ಸಮಬಲ ಸಾಧಿಸುತ್ತಿವೆ.
- ಕೇಜ್ರಿವಾಲ್, ಸಿಸೋಡಿಯಾ, ಅತಿಶಿಗೆ ಆರಂಭಿಕ ಹಿನ್ನಡೆ
- ಅಂಚಮತ ಪತ್ರದ ಎಣಿಕೆ ವೇಳೆ ಎಎಪಿ ದಿಗ್ಗಜರಿಗೆ ಹಿನ್ನಡೆ
ಅಂಚೆ ಮತ ಎಣಿಕೆ
ದೆಹಲಿ ಚುನಾವಣೆಗೆ ಫಲಿತಾಂಶದ ಆರಂಭಿಕ ಹಂತದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ಶುರುವಾಗಿದೆ. 8 ಗಂಟೆಗೆ ಎಣಿಕೆ ಪ್ರಾರಂಭವಾಗಿದ್ದು, ಅಂಚೆ ಮತಪತ್ರಗಳನ್ನು ಮಹಾರಾಣಿ ಬಾಗ್ನ ಮೀರಾಬಾಯಿ ಡಿಎಸ್‌ಇಯು ಎಣಿಕೆ ಕೇಂದ್ರಕ್ಕೆ ತರಲಾಗಿದೆ.