ನವದೆಹಲಿ:ಯೆಮೆನ್ ನಾಗರಿಕನ ಕೊಂದು ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ಪಲಕ್ಕಾಡ್ ಮೂಲಕ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಉಳಿವಿಗೆ ಭಾರತವು ಎಲ್ಲಾ ಸಹಾಯ ಮಾಡುವುದಾಗಿ ತಿಳಿಸಿದೆ.
ಈ ನಡುವೆ ದೆಹಲಿ ಹೈಕೋರ್ಟ್ ಪ್ರಿಯಾ ರಕ್ಷಿಸಲು ರಾಜತಾಂತ್ರಿಕ ಮಧ್ಯಸ್ಥಿಕೆ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯ ಕುರಿತು ಸೂಚನೆಗಳನ್ನು ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ತಿಳಿಸಿದೆ. ಈ ಕುರಿತು ಮಂಗಳವಾರ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಅರ್ಜಿಯನ್ನು ಪಟ್ಟಿ ಮಾಡಿದರು.
ಹತ್ಯೆಗೀಡಾದ ಯೆಮೆನ್ ವ್ಯಕ್ತಿಯ ಕುಟುಂಬದೊಂದಿಗೆ ಸಂಧಾನ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಶನಲ್ ಆ್ಯಕ್ಷನ್ ಕೌನ್ಸಿಲ್ ಎಂಬ ಸಂಘಟನೆಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತು. ಈ ವೇಳೆ ಬ್ಲಡ್ ಮನಿ (ಸಾವಿಗೆ ಹಣದ ರೂಪದಲ್ಲಿ ಕುಟುಂಬಕ್ಕೆ ನೀಡುವ ಪರಿಹಾರ) ಪಾವತಿ ಮಾಡುವ ಮೂಲಕ ಪ್ರಿಯಾ ಅವರನ್ನು ರಕ್ಷಿಸಬಹುದು ಎಂದು ಕೂಡ ತಿಳಿಸಲಾಗಿದೆ.
ಈ ವೇಳೆ ನ್ಯಾಯಾಲಯದ ಮುಂದೆ ಸಾವನ್ನಪ್ಪಿದ ಮಂದಿ ಪ್ರಿಯಾ ಅವರನ್ನು ಮದುವೆ ಆಗಿರುವುದಾಗಿ ನಕಲಿ ದಾಖಲೆಯನ್ನು ನೀಡಿರುವುದಾಗಿ ಆರೋಪಿಸಿದರು. ಅಲ್ಲದೆ ಆತ ಆಕೆಗೆ ಕಿರುಕುಳ ನೀಡಿ, ದೌರ್ಜನ್ಯ ಎಸಗಿರುವುದು ಕಂಡು ಬಂದಿದೆ. ಆಕೆಯ ಮರಣದಂಡನೆಯ ಮನವಿಯನ್ನು ತಿರಸ್ಕಾರ ಮಾಡಲಾಗಿದೆ. ಎಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿದೆ. ಬ್ಲಡ್ ಮನಿ ಪಾವತಿಸುವ ಮೂಲಕ ನಿಮಿಷಾ ಅವರ ಜೀವವನ್ನು ಉಳಿಸಲು ಅವಕಾಶವಿದೆ ಎಂದು ಹೇಳಿದರು.