ETV Bharat / bharat

ಉತ್ತರ ಪ್ರದೇಶದಲ್ಲಿ ಎನ್​ಕೌಂಟರ್​; ವಾಂಟೆಡ್​ ಕ್ರಿಮಿನಲ್ ಸೇರಿ ನಾಲ್ವರು​ ಗುಂಡಿಗೆ ಬಲಿ - ENCOUNTER IN UP

ಸೋಮವಾರ ತಡ ರಾತ್ರಿ ಜಿಂಜಿನಾ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

wanted-criminal-3-aides-killed-in-encounter-in-up-cop-sustains-gunshot-wounds
ಸಾಂದರ್ಭಿಕ ಚಿತ್ರ (ಐಎಎನ್​ಎಸ್​​)
author img

By ETV Bharat Karnataka Team

Published : Jan 21, 2025, 10:38 AM IST

ಲಕ್ನೋ (ಉತ್ತರ ಪ್ರದೇಶ): ಇಲ್ಲಿನ ಶಾಮ್ಲಿ ಜಿಲ್ಲೆಯಲ್ಲಿ ಉತ್ತರ ಪ್ರದೇಶದ ಪೊಲೀಸ್​ ವಿಶೇಷ ಕಾರ್ಯಪಡೆ ನಡೆಸಿದ ಎನ್​ಕೌಂಟರ್​ನಲ್ಲಿ ಓರ್ವ ವಾಂಟೆಡ್​ ಅಪರಾಧಿ ಹಾಗೂ ಆತನ ಮೂವರು ಸಹಚರರನ್ನು ಎನ್​ಕೌಂಟರ್​ ಮಾಡಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎನ್​ಕೌಂಟರ್​ ವೇಳೆ ಎಸ್​ಟಿಎಫ್​ ಇನ್ಸ್​ಪೆಕ್ಟರ್​ ಕೂಡ ಗಾಯಗೊಂಡಿರುವುದಾಗಿ ವರದಿಯಾಗಿದೆ. ಸೋಮವಾರ ತಡ ರಾತ್ರಿ ಜಿಂಜಿನಾ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಸ್ತಫಾ ಕಗ್ಗ ಗ್ಯಾಂಗ್ ಸದಸ್ಯ ಅರ್ಷದ್ ಮತ್ತು ಆತನ ಮೂವರು ಸಹಚರರಾದ ಮಂಜೀತ್, ಸತೀಶ್ ಹಾಗೂ ಮತ್ತೊಬ್ಬ ವ್ಯಕ್ತಿ ನಡುವೆ ಎಸ್‌ಟಿಎಫ್ ಮೀರತ್ ತಂಡ ಎನ್​ಕೌಂಟರ್​ ನಡೆಸಿದೆ. ಈ ವೇಳೆ ಈ ಆರೋಪಿಗಳು ಸಾವನ್ನಪ್ಪಿದ್ದು, ಘಟನೆಯಲ್ಲಿ ಪೊಲೀಸ್​ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಎಸ್‌ಟಿಎಫ್, ಕಾನೂನು ಮತ್ತು ಸುವ್ಯವಸ್ಥೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ್ ಹೇಳಿದ್ದಾರೆ.

ಅರ್ಷದ್ ಕೊಲೆ ಮತ್ತು​​ ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದು, ಸಹರಾನ್‌ಪುರದ ಬೆಹತ್ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿತ್ತು. ಈತನ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಮೀರತ್​ ವಲಯದ ಎಡಿಜಿ ಘೋಷಿಸಿದ್ದರು.

ಘಟನೆಯಲ್ಲಿ ಇನ್ಸ್​ಪೆಕ್ಟರ್​ ಸುನೀಲ್​ಗೆ ಗುಂಡೇಟು ತಗುಲಿದ್ದು, ಅವರನ್ನು ಮೊದಲಿಗೆ ಕರ್ನಾಲ್‌ನ ಅಮೃತಧಾರಾ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಗುರುಗ್ರಾಮ್‌ನಲ್ಲಿರುವ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು. (ಪಿಟಿಐ)

ಇದನ್ನೂ ಓದಿ: ಸೋಪೋರ್​ ಎನ್‌ಕೌಂಟರ್‌ನಲ್ಲಿ ಯೋಧ ಹುತಾತ್ಮ : ಛತ್ತೀಸ್​ಗಢದಲ್ಲಿ ಇಬ್ಬರು ಮಹಿಳಾ ನಕ್ಸಲರು ಹತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.